
ಎಡ್ಜ್‌ಬಾಸ್ಟನ್ (ಜು.06) ಇಂಗ್ಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 336 ರನ್ ಗೆಲುವು ದಾಖಲಿಸಿದೆ. ಇದೇ ಮೊದಲ ಬಾರಿಗ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಸಾಧಿಸಿದೆ. ಶುಬಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಸಾಧನೆ ಮಾಡಿದೆ. ಇಂಗ್ಲೆಂಡ್ ತಂಡಕ್ಕೆ 608 ರನ್ ಟಾರ್ಗೆಟ್ ನೀಡಿದ್ದ ಟೀಂ ಇಂಡಿಯಾ, ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿತ್ತು. ಅಕಾಶ್ ದೀಪ್ ದಾಳಿಗೆ ಇಂಗ್ಲೆಂಡ್ ವಿಕೆಟ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 271 ರನ್‌ಗೆ ಇಂಗ್ಲೆಂಡ್ ಆಲೌಟ್ ಆಯಿತು. ಈ ಮೂಲಕ ಭಾರತ 336 ರನ್ ಗೆಲುವು ದಾಖಲಿಸಿದೆ. ಈ ಮೂಲಕ ಮೊದಲ ಸೋಲಿಗೆ ಭಾರತ 2ನೇ ಪಂದ್ಯದಲ್ಲಿ ಸೇಡು ತೀರಿಸಿಕೊಂಡಿದೆ.
6 ವಿಕೆಟ್ ಕಬಳಿಸಿದ ಆಕಾಶ್ ದೀಪ್
2ನೇ ಇನ್ನಿಂಗ್ಸ್‌ನಲ್ಲಿ ಮಳೆಯಿಂದ ಟೀಂ ಇಂಡಿಯಾ ಆತಂಕಗೊಂಡಿತ್ತು. ಆದರೆ ಆಕಾಶ್ ದೀಪ್ ದಾಳಿಗೆ ಇಂಗ್ಲೆಂಡ್ ತತ್ತರಿಸಿತು. ಇಂಗ್ಲೆಂಡ್ ತಂಡದ 6 ವಿಕೆಟ್ ಕಬಳಿಸಿದ ಆಕಾಶ್ ದೀಪ್ ಭಾರತಕ್ಕೆ ಭರ್ಜರಿ ಗೆಲುವಿನ ಉಡುಗೊರೆ ನೀಡಿದರು.
ಮಳೆಯಿಂದ ವಿಳಂಬವಾಗಿ ಆರಂಭಗೊಂಡ ಪಂದ್ಯ
ಟೀಂ ಇಂಡಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶನದಿಂದ ಇಂಗ್ಲೆಂಡ್ ತಂಡಕ್ಕಕೆ 608 ರನ್ ಟಾರ್ಗೆಟ್ ನೀಡಲಾಗಿತ್ತು. ನಾಲ್ಕನೇ ದಿನದಾಟದ ಅಂತ್ಯದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆಘಾತ ಎದುರಿಸಿತ್ತು. ಕಾರಣ ಆರಂಭದಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತ್ತು. ಕೊನೆಯ ದಿನದ ಆರಂಭದಲ್ಲೇ ವಿಕೆಟ್ ಕಬಳಿಸಲು ಟೀಂ ಇಂಡಿಯಾ ಸಜ್ಜಾಗಿತ್ತು. ಆದರೆ ಮಳೆ ಕಾರಣದಿಂದ ಪಂದ್ಯ ವಿಳಂಬಗೊಂಡಿತ್ತು. ಇಂಗ್ಲೆಂಡ್ ಮಳೆಗಾಗಿ ಪಾರ್ಥಿಸಿದ್ದರೆ, ಟೀಂ ಇಂಡಿಯಾ ಪಂದ್ಯ ಆರಂಭಕ್ಕೆ ಹಾತೊರೆದಿತ್ತು.
5ನೇ ದಿನದಾಟದ ಆರಂಭದಲ್ಲೇ ಮೇಲುಗೈ ಸಾಧಿಸಿದ ಭಾರತ
ಅಂತಿಮ ದಿನದಾಟ ಮಳೆಯಿಂದ ವಿಳಂಬವಾಗಿ ಆರಂಭಗೊಂಡಿತು. ಆದರೆ ಕ್ರೀಸ್ ಕಾಯ್ದುಕೊಂಡಿದ್ದ ಹ್ಯಾರಿ ಬ್ರೂಕ್ ಹಾಗೂ ಒಲಿ ಪೊಪ್ ಪಾರ್ಟ್ನರ್‌ಶಿಪ್ ಬ್ರೇಕ್ ಆಗಿತ್ತು. ಒಲಿ ಪೋಪ್ 24 ರನ್ ಸಿಡಿಸಿ ಔಟಾದರೆ, ಹ್ಯಾರಿ ಬ್ರೂಕ್ 23 ರನ್ ಸಿಡಿಸಿ ನಿರ್ಗಮಿಸಿದ್ದರು. ಆಕಾಶ್ ದೀಪ್ ದಾಳಿಗೆ ಇಂಗ್ಲೆಂಡ್ ತತ್ತರಿಸಿತು. ಇದರ ಪರಿಣಾಮ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ನಾಯಕ ಬೆನ್ ಸ್ಟೋಕ್ಸ್ ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ 33 ರನ್ ಸಿಡಿಸಿ ವಿಕೆಟ್ ಕೈಚೆಲ್ಲಿದರು.
ಮತ್ತೆ ಕಾಡಿದ ಜ್ಯಾಮಿ ಸ್ಮಿತ್
ಅಬ್ಬರದ ಬ್ಯಾಟಿಂಗ್ ಮೂಲ ಜ್ಯಾಮಿ ಸ್ಮಿತ್ ಮತ್ತೆ ಟೀಂ ಇಂಡಿಯಾಗೆ ಕಾಡಿದರು. ಕಾರಣ ದಿಢೀರ್ ವಿಕೆಟ್ ಪತತನದ ನಡುವೆ ಜ್ಯಾಮಿ ಸ್ಮಿತ್ ದಿಟ್ಟ ಹೋರಾಟ ನೀಡಿದರು. ಟೀಂ ಇಂಡಿಯಾ ಗೆಲುವಿಗೆ ನಾಲ್ಕು ವಿಕೆಟ್ ಬೇಕಿದ್ದರೆ, ಇಂಗ್ಲೆಂಡ್ ಪಂದ್ಯ ಡ್ರಾ ಮಾಡಲು ಹೋರಾಟ ಮುಂದುವರಿಸಿತ್ತು. ಹಾಫ್ ಸೆಂಚುರಿ ಸಿಡಿಸಿದ ಜ್ಯಾಮಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ಕ್ರಿಸ್ ವೋಕ್ಸ್ 7 ರನ್ ಸಿಡಿಸಿ ಔಟಾದರು. ಆದರೆ ಜ್ಯಾಮಿ ಅಬ್ಬರ ಮುಂದುವರಿದಿತ್ತು. ಗಟ್ಟಿಯಾಗಿ ನಿಂತುಕೊಂಡ ಜ್ಯಾಮಿ ವಿರುದ್ಧ ಅಂಪೈರ್ ಕೆಟ್ಟ ತೀರ್ಪು ನೀಡಿದರೂ ಡಿಆರ್‌ಎಸ್ ನೆರವಾಗಿತ್ತು. ಬೌಂಡರಿ, ಸಿಕ್ಸರ್ ಮೂಲಕ ಜ್ಯಾಮಿ ಅಬ್ಬರಿಸಿದರು. ಆದರೆ ಅಕಾಶ್ ದೀಪ್ ಎಸೆತದಲ್ಲಿ ವಾಶಿಂಗ್ಟನ್ ಸುಂದರ್‌ಗೆ ಕ್ಯಾಚ್ ನೀಡಿದರು. ಜ್ಯಾಮಿ 88 ರನ್ ಸಿಡಿಸಿ ಔಟಾದರು.
ಜೋಶ್ ಟಾಂಗ್ ಹಾಗೂ ಬೈಡನ್ ಕಾರ್ಸ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ 271 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಟೀಂ ಇಂಡಿಯಾ 336 ರನ್ ಗೆಲುವು ದಾಖಲಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.