DRS ತೀರ್ಪಿಗೆ ರವಿಚಂದ್ರನ್ ಅಶ್ವಿನ್ ಮತ್ತೆ ಡಿಆರ್‌ಎಸ್‌..! ವಿಡಿಯೋ ವೈರಲ್

Published : Jun 15, 2023, 08:54 AM IST
DRS ತೀರ್ಪಿಗೆ ರವಿಚಂದ್ರನ್ ಅಶ್ವಿನ್ ಮತ್ತೆ ಡಿಆರ್‌ಎಸ್‌..! ವಿಡಿಯೋ ವೈರಲ್

ಸಾರಾಂಶ

TNPL 2023 ಟೂರ್ನಿಯಲ್ಲಿ ಪಾಲ್ಗೊಂಡಿರುವ ರವಿಚಂದ್ರನ್ ಅಶ್ವಿನ್ ಡಿಆರ್‌ಎಸ್ ತೀರ್ಪನ್ನೇ ಪ್ರಶ್ನಿಸಿ ಮತ್ತೆ ಡಿಆರ್‌ಎಸ್ ಮೊರೆಹೋದ ಅಶ್ವಿನ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಕೊಯಮತ್ತೂರು(ಜೂ.15): ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಡಲು ಅವಕಾಶ ಸಿಗದ ರವಿಚಂದ್ರನ್ ಅಶ್ವಿನ್‌ ಭಾರತಕ್ಕೆ ವಾಪಾಸ್ಸಾಗುತ್ತಿದ್ದಂತೆಯೇ 2023ರ ತಮಿಳುನಾಡು ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ.

ಡಿಂಡಿಗಲ್‌ ತಂಡವನ್ನು ಮುನ್ನಡೆಸುತ್ತಿರುವ ಆರ್‌ ಅಶ್ವಿನ್‌, ಬುಧವಾರ ತಿರುಚಿ ವಿರುದ್ದದ ಪಂದ್ಯದಲ್ಲಿ ಡಿಆರ್‌ಎಸ್ ತೀರ್ಪಿಗೆ ಡಿಆರ್‌ಎಸ್ ಬಳಸಿದ ಅಪರೂಪದ ಪ್ರಸಂಗ ನಡೆಯಿತು. ಅಶ್ವಿನ್‌ರ ಬೌಲಿಂಗ್‌ನಲ್ಲಿ ತಿರುಚಿಯ ರಾಜ್‌ಕುಮಾರ್  ವಿರುದ್ದ ಮೈದಾನದಲ್ಲಿದ್ದ ಅಂಪೈರ್  ಔಟ್ ಎಂದು ತೀರ್ಪು ನೀಡಿದರು. ಆಗ ರಾಜ್‌ಕುಮಾರ್ ಡಿಆರ್‌ಎಸ್ ಮೊರೆ ಹೋದರು. ಚೆಂಡು ವಿಕೆಟ್ ಕೀಪರ್ ಕೈ ಸೇರುವ ಮುನ್ನ ಬ್ಯಾಟ್‌ಗೆ ತಗುಲಿಲ್ಲ ಎಂದು ಸ್ಪಷ್ಟವಾದ ಬಳಿಕ ಮೂರನೇ ಅಂಪೈರ್‌ ನಾಟೌಟ್ ಎಂದು ತೀರ್ಪಿತ್ತರು. 

ಇನ್ನು ಥರ್ಡ್‌ ಅಂಪೈರ್‌ ನೀಡಿದ ತೀರ್ಪಿಗೆ ಸಮಾಧಾನಗೊಳ್ಳದ ರವಿಚಂದ್ರನ್ ಅಶ್ವಿನ್, ಆ ತೀರ್ಪನ್ನು ಮತ್ತೊಮ್ಮೆ ಮರು ಪರಿಶೀಲಿಸುವಂತೆ ತಾವೂ ಡಿಆರ್‌ಎಸ್ ಮೊರೆ ಹೋದರು. ಆದರೆ ಅವರ ಯತ್ನ ವಿಫಲವಾಯಿತು. ಮತ್ತೊಮ್ಮೆ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪಿತ್ತರು.

ಲಂಕಾ ಟಿ20 ಲೀಗ್‌ನಿಂದ ರೈನಾ ಹೆಸರು ದುರ್ಬಳಕೆ?

ಕೊಲಂಬೊ/ನವದೆಹಲಿ: ಭಾರತದ ನಿವೃತ್ತ ಕ್ರಿಕೆಟಿಗ ಸುರೇಶ್‌ ರೈನಾ ಲಂಕಾ ಪ್ರೀಮಿಯರ್‌ ಲೀಗ್‌(ಎಲ್‌ಪಿಎಲ್‌) ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ ಎನ್ನುವ ಸುದ್ದಿ ಕ್ರಿಕೆಟ್‌ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಆದರೆ ಬುಧವಾರ ನಡೆದ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲು ರೈನಾ ಹೆಸರು ನೋಂದಾಯಿಸಿಯೇ ಇರಲಿಲ್ಲ ಎನ್ನುವ ಆಘಾತಕಾರಿ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

TNPL 2023 ದುಬಾರಿ ಎಸೆತ: ಒಂದು ಎಸೆತದಲ್ಲಿ 18 ರನ್‌ ಚಚ್ಚಿಸಿಕೊಂಡ ಬೌಲರ್‌..! ವಿಡಿಯೋ ವೈರಲ್‌

ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ(ಎಸ್‌ಎಲ್‌ಸಿ) ರೈನಾ ಹೆಸರನ್ನು ಸೇರ್ಪಡೆಗೊಳಿಸಿ, ಅವರು 50000 ಅಮೆರಿಕನ್‌ ಡಾಲರ್‌(ಅಂದಾಜು 1.6 ಕೋಟಿ ಲಂಕನ್‌ ರುಪಾಯಿ) ಮೂಲಬೆಲೆ ಹೊಂದಿರುವುದಾಗಿ ತಿಳಿಸಿತ್ತು. ಬುಧವಾರ ಮಧ್ಯಾಹ್ನ ಆರಂಭಗೊಂಡ ಹರಾಜು ಪ್ರಕ್ರಿಯೆಯಲ್ಲಿ ರೈನಾ ಹೆಸರು ಸ್ಕ್ರೀನ್‌ನಲ್ಲಿ ಪ್ರದರ್ಶನಗೊಂಡರೂ, ಹರಾಜಿಗೆ ಅವರ ಹೆಸರೇ ಬರಲಿಲ್ಲ. ಇದರಿಂದ ಗೊಂದಲಕ್ಕೊಳಗಾದ ಅಭಿಮಾನಿಗಳು ಟ್ವೀಟರ್‌ನಲ್ಲಿ ಈ ಬಗ್ಗೆ ಚರ್ಚೆ ಆರಂಭಿಸಿದಾಗ ರಾಷ್ಟ್ರೀಯ ಮಾಧ್ಯಮಗಳ ಕೆಲ ವರದಿಗಾರರು ‘ಹರಾಜಿಗೆ ರೈನಾ ಹೆಸರು ನೋಂದಾಯಿಸಿಲ್ಲ ಎಂದು ತಿಳಿದುಬಂದಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಬಗ್ಗೆ ರೈನಾ ಆಗಲಿ, ಎಸ್‌ಎಲ್‌ಸಿ ಆಗಲಿ ಸ್ಪಷ್ಟನೆ ನೀಡಿಲ್ಲ.

ಎನ್‌ಸಿಎ ಶಿಬಿರಕ್ಕೆ ಅರ್ಜುನ್‌ ಸೇರಿ 20 ಯುವ ಕ್ರಿಕೆಟಿಗರು

ನವದೆಹಲಿ: ಮುಂಬರುವ ಉದಯೋನ್ಮುಖರ ಏಷ್ಯಾಕಪ್‌ (ಅಂಡರ್‌-23), ಭಾರತ ‘ಎ’, ಭಾರತ ಹಿರಿಯರ ತಂಡಗಳಿಗೆ ಯುವ ಆಟಗಾರರ ಹುಡುಕಾಟ ಆರಂಭಿಸಿರುವ ಬಿಸಿಸಿಐ, ಆಗಸ್ಟ್‌ ತಿಂಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ನಲ್ಲಿ 3 ವಾರಗಳ ಶಿಬಿರ ಆಯೋಜಿಸಿದೆ. 

ಈ ಶಿಬಿರಕ್ಕೆ 20 ಆಟಗಾರರನ್ನು ಆಯ್ಕೆ ಮಾಡಿದ್ದು, ಇವರಲ್ಲಿ ಬಹುತೇಕರು ಆಲ್ರೌಂಡ್‌ ಆಟವಾಡುವ ಸಾಮರ್ಥ್ಯವಿರುವವರಾಗಿದ್ದಾರೆ. ಅರ್ಜುನ್‌ ತೆಂಡುಲ್ಕರ್‌, ಅಭಿಷೇಕ್‌ ಶರ್ಮಾ, ಚೇತನ್‌ ಸಕಾರಿಯಾ, ಹರ್ಷಿತ್‌ ರಾಣಾ ಪ್ರಮುಖರೆನಿಸಿದ್ದಾರೆ.

ದುಲೀಪ್‌ ಟ್ರೋಫಿಗೆ ಬೆಂಗಳೂರು ಆತಿಥ್ಯ

ನವದೆಹಲಿ: 2023-24ರ ದೇಸಿ ಋುತು ದುಲೀಪ್‌ ಟ್ರೋಫಿಯೊಂದಿಗೆ ಆರಂಭಗೊಳ್ಳಲಿದ್ದು, ಜೂ.28ರಿಂದ ಜು.16ರ ವರೆಗೂ ನಡೆಯಲಿರುವ ಪಂದ್ಯಾವಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಪ್ರಥಮ ದರ್ಜೆ ಮಾದರಿಯ ಟೂರ್ನಿಯಲ್ಲಿ 6 ತಂಡಗಳು ಸೆಣಸಲಿದ್ದು, ಆಲೂರು ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಪಶ್ಚಿಮ, ದಕ್ಷಿಣ ವಲಯ ತಂಡಗಳು ನೇರವಾಗಿ ಸೆಮೀಸ್‌ ಪ್ರವೇಶಿಸಿದ್ದು ಉತ್ತರ, ಈಶಾನ್ಯ, ಪೂರ್ವ ಹಾಗೂ ಕೇಂದ್ರ ವಲಯಗಳು ಕ್ವಾರ್ಟರ್‌ ಫೈನಲ್‌ನಲ್ಲಿ ಆಡಲಿವೆ. ಹನುಮ ವಿಹಾರಿ ನಾಯಕತ್ವದ ದಕ್ಷಿಣ ವಲಯ ತಂಡದಲ್ಲಿ ಕರ್ನಾಟಕದ ಮಯಾಂಕ್‌, ಸಮಥ್‌ರ್‍, ವಿದ್ವತ್‌ ಹಾಗೂ ವೈಶಾಖ್‌ ಇದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?