
ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯವನ್ನು ಟೀಂ ಇಂಡಿಯಾ 4 ವಿಕೆಟ್‌ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ. ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್.. ವಿಶ್ವಕಪ್ ಎದುರು ನೋಡುತ್ತಿರುವ ಎದುರಾಳಿ ತಂಡಗಳಿಗೆ ಬಿಗ್ ಮೆಸೇಜ್ ಪಾಸ್ ಮಾಡಿದ್ದಾರೆ.
ಇವತ್ತು ನಮಗೆ ಸಿಕ್ಕಿರೋದು ಅದ್ಭುತ ಜಯ. ಈ ಗೆಲುವಿನೊಂದಿಗೆ ಪ್ರಯಾಣದ ಆಯಸದ ಬಗ್ಗೆ ಯೋಚನೆ ಮಾಡೋದನ್ನು ಬಿಡಬೇಕು. ಮೊದಲು ಬೌಲಿಂಗ್ ಮಾಡಿದ ನಮಗೆ ಪಿಚ್ ಸ್ಲೋ ಇದೆ ಅನಿಸಿತು. ಪ್ರತಿಬಾರಿಯೂ ಬೌಲಿಂಗ್ ಮಾಡಿದಾಗ ಸ್ವಲ್ಪ ನಿಂತು ಮುಂದೆ ಬರುತ್ತಿತ್ತು. ಕೊನೆಗೆ ನಾವು ಸ್ವಲ್ಪ ಮುಂದೆ ಬೌಲಿಂಗ್ ಮಾಡಿದೇವು. ಆದರೆ ಪಂದ್ಯ ಸಾಗುತ್ತಿದ್ದಂತೆಯೇ ಇಬ್ಬನಿ ಶುರುವಾಯಿತು. ಪರಿಣಾಮ ಎದುರಾಳಿ ತಂಡದ ಬ್ಯಾಟರ್‍ಗಳು ಬಾಲ್‌ಗಳನ್ನ ಸರಾಗವಾಗಿ ಬೌಂಡರಿ ಲೈನ್‌ಗೆ ಕಳುಹಿಸಿದರು. ಹೀಗಾಗಿ ಅವರು ಉತ್ತಮ ರನ್ ಕಲೆ ಹಾಕಿದರು. ಇಲ್ಲಿ ನಾವು ಅವರ ಹೋರಾಟವನ್ನು ಮೆಚ್ಚಲೇಬೇಕು.
ಜೊತೆಗೆ 220 ರನ್‌ಗಳಂತಹ ದೊಡ್ಡ ಮೊತ್ತವನ್ನು ಬೆನ್ನಟ್ಟುವಾಗ ನಮಗೆ ಉತ್ತಮ ಆರಂಭ ಬೇಕಿತ್ತು. ನಾವು ಕೇವಲ 6 ಓವರ್‍ನಲ್ಲೇ 80 ರಿಂದ 85 ರನ್‌ಗಳಿಸಿದೇವು. ಅದನ್ನು ಸಂಜು ಮತ್ತು ಅಭಿಷೇಕ್ ಶರ್ಮಾ ಮಾಡಿದರು. ಅವರಿಗೆ ನಾನು ಸಲಹೆ ನೀಡುವ ಅಗತ್ಯ ಇಲ್ಲ. ಅವರಿಬ್ಬರೂ ಅನುಭವಿಗಳು. ಸಂದರ್ಭಕ್ಕೆ ತಕ್ಕಂತೆ ಹೇಗೆ ಆಡಬೇಕು ಅನ್ನೋದು ಗೊತ್ತಿದೆ. ಒಮ್ಮೆ ಲಯ ಕಂಡುಕೊಂಡರೆ.. ಅದೇ ಬಿರುಸಿನ ಆಟವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಅದಕ್ಕೆ ಉದಾಹರಣೆ ಅಂದ್ರೆ ಇವತ್ತಿನ ಪಂದ್ಯ.
ಆದರೆ ಪ್ರತಿ ಬಾರಿಯೂ ಹೀಗಾಗಲು ಸಾಧ್ಯವಿಲ್ಲ. ಒಮ್ಮೆ ಕ್ಲಿಕ್ ಆದರೆ ಪಂದ್ಯವನ್ನು ಸುಲಭವಾಗಿ ನಮ್ಮ ಕಡೆಗೆ ತಿರುಗಿಸಿಬಿಡುತ್ತಾರೆ. ಉಳಿದ ಬ್ಯಾಟರ್‌ಗಳಾದ ನಾವು ಬಂದು ಇನ್ನಿಂಗ್ಸ್‌ಗೆ ಆಸರೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸಿಕೊಡುವುದಷ್ಟೇ ನಮ್ಮ ಕೆಲಸವಾಗಿರುತ್ತದೆ ಎಂದರು.
ಇದೇ ವೇಳೆ ಯುವ ಆಟಗಾರ ನಮನ್ ಧೀರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಹೊಗಳಿದರು. ಪಂದ್ಯದ ವೇಳೆ ಅವರು ನಮಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತಾರೆ. ಎಡಗೈ ಅಥವಾ ಬಲಗೈ ಬ್ಯಾಟರ್‌ಗಳೇ ಇರಲಿ.. ವಿಶೇಷವಾಗಿ ಈ ಮೈದಾನದಲ್ಲಿ ಬಂದು ಆ 2-3 ಪ್ರಮುಖ ಓವರ್‌ಗಳನ್ನು ಬೌಲ್ ಮಾಡುವುದು ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲದು. ಅವರ ಬಗ್ಗೆ ವೈಯಕ್ತಿಕವಾಗಿ ಹೇಳುವುದಾದರೆ.. ಇಂದು ಅವರು ತೋರಿದ ಆ ಶಾಂತ ಮತ್ತು ಸಂಯಮದ ಆಟ ಅದ್ಭುತವಾಗಿತ್ತು. ಅವರ ಬ್ಯಾಟಿಂಗ್ ನೋಡುವುದೇ ಒಂದು ಖುಷಿ ಎಂದು ಬಣ್ಣಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 20 ಓವರ್‍ನಲ್ಲಿ 4 ವಿಕೆಟ್ ಕಳೆದುಕೊಂಡು 225 ರನ್‌ಗಳಿಸಿತ್ತು. ಈ ಗುರಿ ಬೆನ್ನು ಹತ್ತಿದ್ದ ಭಾರತ ತಂಡ 19.4 ಓವರ್‍ಗೆ 6 ವಿಕೆಟ್ ಕಳೆದುಕೊಂಡು 230 ರನ್‌ಗಳಿಸಿ ಗೆಲುವು ಸಾಧಿಸಿತು. ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್ 67, ಕ್ಯಾಪ್ಟನ್ ಶ್ರೇಯಸ್ ಅಯ್ಯರ್ 42, ನಮನ್ ಧೀರ್ 42, ಅಭಿಷೇಕ್ ಶರ್ಮಾ 29 ರನ್‌ಗಳ ಕಾಣಿಕೆ ನೀಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.