
ಬೆಂಗಳೂರು(ಏ.5): ವಿರಾಟ್ ಕೊಹ್ಲಿ(Virat Kohli). ಜಸ್ಟ್ ಆರೇ ಆರು ತಿಂಗಳ ಹಿಂದೆ ಭಾರತ ಮೂರು ಮಾದರಿ ತಂಡದ ನಾಯಕ. ಐಪಿಎಲ್‌ನಲ್ಲಿ (IPL) ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ತಾನ. ಆದರೆ ಈಗ ಕೊಹ್ಲಿ ಕೇವಲ ಆಟಗಾರ ಮಾತ್ರ. ಹೌದು, ಟೀಂ ಇಂಡಿಯಾ ಮತ್ತು ಆರ್‌ಸಿಬಿ ನಾಯಕತ್ವ ತ್ಯಜಿಸಿರುವ ಕಿಂಗ್ ಕೊಹ್ಲಿ, ಈಗ ಕೇವಲ ಪ್ಲೇಯರ್. ಹಾಗಾಗಿ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಭಾರತ ಪರ ಶತಕ ಹೊಡೆದು ಎರಡು ವರ್ಷವಾಗಿದೆ. ಐಪಿಎಲ್‌ನಲ್ಲಿ ಸೆಂಚುರಿ ಸಿಡಿಸಿ ಐದು ವರ್ಷವಾಯ್ತು. ಶತಕದ ಬರವನ್ನ ಬೇಗ ನೀಗಿಸಿಕೊಳ್ಳಲಿ ಅಂತ ಅವರ ಫ್ಯಾನ್ಸ್ ಪಾರ್ಥಿಸ್ತಿದ್ದಾರೆ.
ಸದ್ಯ ಐಪಿಎಲ್ ಆಡ್ತಿರೋ ಕೊಹ್ಲಿ ಮಾತ್ರ ಸೆಂಚುರಿ ಬಗ್ಗೆ ಆಗಲಿ, ತಮ್ಮ ಬ್ಯಾಡ್ ಫಾರ್ಮ್ ಬಗ್ಗೆ ಆಗಲಿ ಮಾತನಾಡಿಲ್ಲ. ಆದರೆ ತನ್ನ ವೃತ್ತಿ ಜೀವನದಲ್ಲಿ ಎರಡು ಸೋಲುಗಳು ನನಗೆ ಬಹಳ ನೋವನ್ನುಂಟು ಮಾಡಿದ್ವು. ಆ ಸೋಲಿಗೆ ನಾನು ಕಣ್ಣೀರಿಟ್ಟೆ ಎಂದು ಹೇಳಿಕೊಂಡಿದ್ದಾರೆ. ಆ ಎರಡು ಸೋಲುಗಳಿಂದ ನನ್ನ ಹೃದಯವೇ ಒಡೆದು ಹೋಯ್ತು ಎಂದಿದ್ದಾರೆ. ಅಷ್ಟಕ್ಕೂ ಆ ಎರಡು ಸೋಲುಗಳು ಯಾವುವು ಗೊತ್ತಾ..?
2016ರ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲು:
2016ರ ಟಿ20 ವರ್ಲ್ಡ್ಕಪ್ ಸೆಕೆಂಡ್ ಸೆಮಿಫೈನಲ್ನಲ್ಲಿ ಭಾರತ-ವೆಸ್ಟ್ ಇಂಡೀಸ್ (India vs West Indies) ತಂಡಗಳು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India), 2 ವಿಕೆಟ್ಗೆ 192 ರನ್ ಬಾರಿಸಿತ್ತು. ವಿರಾಟ್ ಕೊಹ್ಲಿ 47 ಬಾಲ್ನಲ್ಲಿ 11 ಬೌಂಡ್ರಿ, ಒಂದು ಸಿಕ್ಸ್ ಸಹಿತ ಅಜೇಯ 89 ರನ್ ಬಾರಿಸಿದ್ದರು. ಆದರೆ ವಿಂಡೀಸ್ ಇನ್ನು ಎರಡು ಬಾಲ್ ಬಾಕಿ ಇರುವಾಗ್ಲೇ ಪಂದ್ಯವನ್ನ ಗೆದ್ದುಕೊಂಡಿತ್ತು. ತವರಿನಲ್ಲಿ ಸೆಮಿಸ್ ಸೋತಿದ್ದು ಭಾರಿ ನೋವಾಗಿತ್ತು ಅಂತ ಕಿಂಗ್ ಕೊಹ್ಲಿ ಹೇಳಿಕೊಂಡಿದ್ದಾರೆ.
2016ರ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಪರಾಭವ:
2016ರ ಸೀಸನ್ನಲ್ಲಿ ಆರ್‌ಸಿಬಿ (RCB) ಟೀಂ ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿತ್ತು. ಸನ್‌ರೈಸರ್ಸ್ ಹೈದ್ರಾಬಾದ್ (Sunrisers Hyderabad) 208 ರನ್ ಬಾರಿಸಿತ್ತು. 209 ರನ್ ಚೇಸ್ ಮಾಡಿದ ಆರ್‌ಸಿಬಿ 10 ಓವರ್ನಲ್ಲಿ ಯಾವ್ದೇ ವಿಕೆಟ್ ಕಳೆದುಕೊಳ್ಳದೆ 114 ರನ್ ಗಳಿಸಿತ್ತು. ಕ್ರಿಸ್ ಗೇಲ್ (Chris Gayle) 76 ಮತ್ತು ಕೊಹ್ಲಿ 54 ರನ್ ಬಾರಿಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ವಿಫಲವಾಗಿದ್ದರಿಂದ ಆರ್‌ಸಿಬಿ 200 ರನ್ ಗಳಿಸಿ 8 ರನ್ನಿಂದ ವಿರೋಚಿತ ಸೋಲು ಅನುಭವಿಸ್ತು. ಇದು ನನ್ನ ಬದುಕನಲ್ಲೇ ಅಂತ್ಯಂತ ದುಃಖದ ಸೋಲು ಎಂದು ಕೊಹ್ಲಿ ಕಣ್ಣೀರಿಟ್ಟಿದ್ದಾರೆ. 2016ರ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ, ಒಂದೇ ಆವೃತ್ತಿಯ ಐಪಿಎಲ್‌ನಲ್ಲಿ 4 ಶತಕ ಸಹಿತ 900ಕ್ಕೂ ಅಧಿಕ ರನ್ ಬಾರಿಸಿದ್ದರು.
IPL 2022: ಮ್ಯಾಕ್ಸ್‌ವೆಲ್ RCB ಪರ ಕಣಕ್ಕಿಳಿಯೋದು ಯಾವಾಗ? ಮೈಕ್ ಹೆಸನ್ ಹೇಳಿದ್ದೇನು..?
ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಆರ್‌ಸಿಬಿ ಒಂದೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಹಾಗೆ ಟೀಂ ಇಂಡಿಯಾ ಐಸಿಸಿ ಟೂರ್ನಿಗಳನ್ನೂ (ICC Tournaments) ಗೆದ್ದಿಲ್ಲ. ಕೊಹ್ಲಿ ನಾಯಕತ್ವದಲ್ಲಿ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್, 2021ರ ಟೆಸ್ಟ್ ವರ್ಲ್ಡ್ಕಪ್ ಫೈನಲ್‌ನಲ್ಲಿ ಸೋತಿದ್ದ ಟೀಂ ಇಂಡಿಯಾ, 2021ರ ಟಿ20 ವಿಶ್ವಕಪ್ ಲೀಗ್ನಿಂದಲೇ ಹೊರಬಿದ್ದಿತ್ತು. ಆ ನೋವಿಗಿಂತ ಈ ಎರಡು ಪಂದ್ಯಗಳ ಸೋಲಿಗೆ ಕೊಹ್ಲಿ ಕಣ್ಣೀರಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.