ಶುಭ್‌ಮನ್ ಗಿಲ್ ಮಾಡಿದ ಒಂದೇ ಒಂದು ತಪ್ಪಿಗೆ ₹250 ಕೋಟಿ ಡೀಲ್ ಕ್ಯಾನ್ಸಲ್? ಎಜ್‌ಬಾಸ್ಟನ್‌ನಲ್ಲಿ ಮತ್ತೊಂದು ವಿವಾದ!

Published : Jul 06, 2025, 04:36 PM IST
shubman gill record

ಸಾರಾಂಶ

ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಶುಭ್‌ಮನ್ ಗಿಲ್ ಅವರ ನೈಕಿ ಜೆರ್ಸಿ ಧರಿಸುವಿಕೆ ಚರ್ಚೆಗೆ ಗ್ರಾಸವಾಗಿದೆ. ಬಿಸಿಸಿಐ Adidas ಜೊತೆ ಕಿಟ್ ಸ್ಪಾನ್ಸರ್ ಒಪ್ಪಂದ ಹೊಂದಿದ್ದರೂ, ಗಿಲ್ ನೈಕ್ ಜೆರ್ಸಿ ಧರಿಸಿದ್ದರಿಂದ 250 ಕೋಟಿ ರೂಪಾಯಿ ಒಪ್ಪಂದ ರದ್ದಾಗುವ ಸಾಧ್ಯತೆಯಿದೆ.

ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ ಹಲವು ರೆಕಾರ್ಡ್ಸ್ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಎದುರು ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ್ದ ಗಿಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಶುಭ್‌ಮನ್ ಗಿಲ್ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಶುಭ್‌ಮನ್ ಗಿಲ್ ಮಾಡಿದ ಆ ಒಂದು ತಪ್ಪಿನಿಂದ 250 ಕೋಟಿ ರುಪಾಯಿ ಡೀಲ್ ಕ್ಯಾನ್ಸಲ್ ಅಗುವ ಸಾಧ್ಯತೆಯಿದೆ. ಅಷ್ಟಕ್ಕೂ ಗಿಲ್ ಮಾಡಿದ್ದೇನು? 250 ಕೋಟಿ ರುಪಾಯಿ ಡೀಲ್ ಕಥೆ ಏನು ಎನ್ನುವುದನ್ನು ನೋಡೋಣ ಬನ್ನಿ.

ಭಾರತ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 427 ರನ್ ಗಳಿಸಿದಾಗ ಈ ಸಂದರ್ಭದಲ್ಲಿ ಡ್ರೆಸ್ಸಿಂಗ್‌ ರೂಮ್‌ನಲ್ಲಿದ್ದ ನಾಯಕ ಶುಭ್‌ಮನ್ ಗಿಲ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು. ಈ ಸಂದರ್ಭದಲ್ಲಿ ಶುಭ್‌ಮನ್ ಗಿಲ್ ತೊಟ್ಟ ಜೆರ್ಸಿ ಫೋಟೋ ವಿವಾದಕ್ಕೆ ಕಾರಣವಾಗಿದೆ. ಶುಭ್‌ಮನ್ ಗಿಲ್ ಕಪ್ಪುಬಣ್ಣದ Nike ಜೆರ್ಸಿ ತೊಟ್ಟಿರುವುದು ಕಾಣಿಸಿಕೊಂಡಿದೆ. ಸದ್ಯ ಬಿಸಿಸಿಐ Adidas ನೊಂದಿಗೆ ಕಿಟ್ ಸ್ಪಾನ್ಸರ್ ಪಡೆದುಕೊಂಡಿದೆ. ಹೀಗಾಗಿ ಈ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

Adidas ಜತೆ ಟೀಂ ಇಂಡಿಯಾ ಕಿಟ್ ಸ್ಪಾನರ್ ಪಡೆದ ಹೊರತಾಗಿಯೂ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಬಿಂದಾಸ್ ಆಗಿ Nike ಜೆರ್ಸಿ ತೊಟ್ಟಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ Adidas ಸಂಸ್ಥೆಯು ಬಿಸಿಸಿಐಗೆ ನೋಟೀಸ್ ಕೂಡಾ ಕಳಿಸಲು ಅವಕಾಶವಿದೆ. ಇದಷ್ಟೇ ಅಲ್ಲದೇ ಬಿಸಿಸಿಐ ಮೇಲೆ ಕೋರ್ಟ್‌ನಲ್ಲಿ ಕೇಸ್ ದಾಖಲಿಸಬಹುದು ಹಾಗೂ ಬಿಸಿಸಿಐ ಜತೆಗೆ Adidas ಬಹುಕೋಟಿ ಒಪ್ಪಂದವನ್ನು ರದ್ದುಪಡಿಸಲು ಅವಕಾಶವಿದೆ.

Adidas ಜತೆಗೆ ಒಪ್ಪಂದ ಹೊಂದಿರುವ ಹೊರತಾಗಿಯೂ ಶುಭ್‌ಮನ್ ಗಿಲ್ Nike ಜೆರ್ಸಿ ತೊಟ್ಟಿದ್ದೇಕೆ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು. ನಿಮಗೆ ಗೊತ್ತಿರಲಿ ಶುಭ್‌ಮನ್ ಗಿಲ್ Nike ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಕಾರಣಕ್ಕಾಗಿಯೇ ಗಿಲ್ ನೈಕಿ ಟೀ ಶರ್ಟ್ ತೊಟ್ಟಿರುವ ಸಾಧ್ಯತೆಯಿದೆ. ಹೀಗಾಗಿ ಗಿಲ್ ನೈಕಿ ಟಿ ಶರ್ಟ್ ತೊಟ್ಟಿರುವುದಕ್ಕೆ ಗಿಲ್ ಬದಲಾಗಿ ಬಿಸಿಸಿಐ ಉತ್ತರ ನೀಡಬೇಕಾಗುತ್ತದೆ.

2023ರಲ್ಲಿ 250 ಕೋಟಿ ರುಪಾಯಿ ಡೀಲ್‌ ಮಾಡಿಕೊಂಡ ಬಿಸಿಸಿಐ - Adidas

ಅಂದಹಾಗೆ 2023ರಲ್ಲಿ ಬಿಸಿಸಿಐ, ಕ್ರೀಡಾ ಉತ್ಫನ್ನ ಸಂಸ್ಥೆಯಾದ Adidas ಜತೆ 5 ವರ್ಷಗಳ ಅವಧಿಗೆ ಕಿಟ್ ಸ್ಪಾನ್ಸರ್ ಆಗಿ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಈ ಒಪ್ಪಂದ 2028ರವರೆಗೆ ಇರಲಿದೆ. ಇದಕ್ಕೂ ಮೊದಲು ನೈಕಿ ಸಂಸ್ಥೆಯು ಟೀಂ ಇಂಡಿಯಾ ಕಿಟ್ ಸ್ಪಾನ್ಸರ್ ಆಗಿತ್ತು. 2020ರಲ್ಲಿ ನೈಕಿ ಸಂಸ್ಥೆ ಹಾಗೂ ಬಿಸಿಸಿಐ ನಡುವಿನ ಒಪ್ಪಂದ ಕೊನೆಗೊಂಡಿತ್ತು. ಇದಾದ ಬಳಿಕ ಬೈಜೂಸ್ ಹಾಗೂ ಎಂಪಿಎಲ್‌ ಸಂಸ್ಥೆಗಳು ಟೀಂ ಇಂಡಿಯಾ ಕಿಟ್ ಸ್ಪಾನ್ಸರರ್ ಆಗಿದ್ದವು. ಇದಾದ ಬಳಿಕ 2023ರಲ್ಲಿ ಬಿಸಿಸಿಐ ಹಾಗೂ Adidas 250 ಕೋಟಿಗೂ ಅಧಿಕ ಮೊತ್ತಕ್ಕೆ ಕಿಟ್ ಸ್ಪಾನ್ಸರ್ ಡೀಲ್ ಮಾಡಿಕೊಂಡಿವೆ. ಗಿಲ್ ಮಾಡಿದ ಒಂದು ಯಡವಟ್ಟು ಇದೀಗ ಕಾನೂನು ಸಮರಕ್ಕೆ ಸಾಕ್ಷಿಯಾದರೂ ಅಚ್ಚರಿಯೇನಿಲ್ಲ. ಯಾಕೆಂದರೆ Adidas ಹಾಗೂ ನೈಕಿ ಎರಡು ಪ್ರತಿಸ್ಪರ್ಧಿಗಳಾಗಿರುವುದರಿಂದ ಮುಂದೆ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ