ಭಾರತಕ್ಕೆ ಭಾರತ ‘ಎ’ ವಿರುದ್ಧವೇ ಅಭ್ಯಾಸ ಪಂದ್ಯ..!

Kannadaprabha News   | Asianet News
Published : Jan 29, 2021, 11:36 AM IST
ಭಾರತಕ್ಕೆ ಭಾರತ ‘ಎ’ ವಿರುದ್ಧವೇ ಅಭ್ಯಾಸ ಪಂದ್ಯ..!

ಸಾರಾಂಶ

ಟೀಂ ಇಂಡಿಯಾ ಇಂಗ್ಲೆಂಡ್‌ ಪ್ರವಾಸದ ವೇಳೆ ಟೆಸ್ಟ್ ಸರಣಿಗೂ ಮುನ್ನ ಭಾರತ 'ಎ' ವಿರುದ್ದವೇ ಅಭ್ಯಾಸ ಪಂದ್ಯವನ್ನಾಡಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಲಂಡನ್(ಜ.29)‌: ಈ ವರ್ಷ ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಲಿರುವ ಭಾರತ ತಂಡ, ಅಲ್ಲಿನ ಸ್ಥಳೀಯ ಕೌಂಟಿ ತಂಡದ ಬದಲಾಗಿ ಭಾರತ ‘ಎ’ ತಂಡದ ವಿರುದ್ಧವೇ 4 ದಿನಗಳ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಈ ಬೆಳವಣಿಗೆ ಭಾರತೀಯ ಕ್ರಿಕೆಟ್‌ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ 5 ಟೆಸ್ಟ್‌ ಪಂದ್ಯಗಳನ್ನು ಆಡಲಿದ್ದು, ಮಹತ್ವದ ಸರಣಿಯ ಮೊದಲ ಪಂದ್ಯ ಆ.4ರಿಂದ ಆರಂಭಗೊಳ್ಳಲಿದೆ. ಮೊದಲ ಅಭ್ಯಾಸ ಪಂದ್ಯ ಜು.21ರಿಂದ ನಾರ್ಥಾಂಪ್ಟನ್‌ಶೈರ್‌ನ ಕೌಂಟಿ ಮೈದಾನದಲ್ಲಿ ನಡೆಯಲಿದ್ದು, 2ನೇ ಪಂದ್ಯ ಜು.28ರಿಂದ ಲೀಚೆಸ್ಟರ್‌ಶೈರ್‌ನಲ್ಲಿ ನಡೆಯಲಿದೆ.

ಟೆಸ್ಟ್ ಸರಣಿಯಾಡಲು ಚೆನ್ನೈ ತಲುಪಿದ ಭಾರತ, ಇಂಗ್ಲೆಂಡ್‌ ತಂಡಗಳು

ಕಾರಣ ಏನು?: 2019ರ ಆ್ಯಷಸ್‌ ಸರಣಿಗೂ ಮೊದಲು ಆಸ್ಪ್ರೇಲಿಯಾ ತಂಡ ಸಹ ತನ್ನದೇ ಆಟಗಾರರ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಿತ್ತು. ಅದೇ ತಂತ್ರವನ್ನು ಭಾರತ ಸಹ ಬಳಸಲಿದೆ. ಕೌಂಟಿ ತಂಡಗಳು ತನ್ನ ಆಟಗಾರರು ದೇಸಿ ಟೂರ್ನಿಗಳಿಗೆ ಫಿಟ್ನೆಸ್‌ ಕಾಯ್ದುಕೊಳ್ಳಬೇಕು ಎನ್ನುವ ಉದ್ದೇಶದಿಂದ ದುರ್ಬಲ ತಂಡವನ್ನು ಅಭ್ಯಾಸ ಪಂದ್ಯಗಳಲ್ಲಿ ಆಡಿಸಲಿವೆ. ಹೀಗಾಗಿ ಈ ಹಿಂದೆ ಆಸೀಸ್‌, ಈಗ ಭಾರತ ಕೌಂಟಿ ತಂಡದ ವಿರುದ್ಧ ಅಭ್ಯಾಸ ಪಂದ್ಯಕ್ಕೆ ನಿರಾಕರಿಸಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!