ಶ್ರೀಲಂಕಾ ಸರಣಿ ಸೋಲು ತಪ್ಪಿಸಿಕೊಳ್ಳುತ್ತಾ ಟೀಂ ಇಂಡಿಯಾ?

By Kannadaprabha NewsFirst Published Aug 7, 2024, 11:24 AM IST
Highlights

ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ 0-1ರ ಹಿನ್ನಡೆಯಲ್ಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕೊಲೊಂಬೊ: ಶ್ರೀಲಂಕಾ ವಿರುದ್ದ 27 ವರ್ಷದಲ್ಲಿ ಮೊದಲ ಬಾರಿಗೆ ಏಕದಿನ ಸರಣಿ ಸೋಲುವ ಭೀತಿಗೆ ಭಾರತ ತಂಡ ಸಿಲುಕಿದೆ. ಬುಧವಾರ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದ್ದು, ಭಾರತೀಯ ಬ್ಯಾಟರ್‌ಗಳ ಮೇಲೆ ಭಾರಿ ಒತ್ತಡ ಇದೆ.

ಕೋಚ್ ಆಗಿ ನೇಮಕಗೊಂಡ ಬಳಿಕ ಗೌತಮ್ ಗಂಭೀರ್‌ಗೆ ಮೊದಲ ಏಕದಿನ ಸರಣಿ ಆಗಿದ್ದು, 2025ರ ಚಾಂಪಿಯನ್ಸ್ ಟ್ರೋಫಿಗೆ ಆಟಗಾರರನ್ನು ಗುರುತಿಸಲು ಎದುರು ನೋಡುತ್ತಿರುವ ಅವರಿಗೆ ಇದು ಸಹಜವಾಗಿಯೇ ಉತ್ತಮ ಆರಂಭ ಎನಿಸಿಲ್ಲ. ಹೀಗಾಗಿ, 3ನೇ ಪಂದ್ಯದಲ್ಲಿ ತಂಡದಿಂದ ಸುಧಾರಿತ ಪ್ರದರ್ಶನವನ್ನು ಗಂಭೀರ್ ನಿರೀಕ್ಷೆ ಮಾಡುತ್ತಿದ್ದಾರೆ.

Latest Videos

ಭಾರತ ಕೊನೆಯ ಬಾರಿಗೆ ಲಂಕಾ ವಿರುದ್ಧ ಏಕದಿನ ಸರಣಿ ಸೋತಿದ್ದು, 1997ರಲ್ಲಿ, ಅರ್ಜುನ ರಣತುಂಗಾನೇತೃತ್ವದಲಂಕಾ ತಂಡ ಭಾರತವನ್ನು 0-3ರಲ್ಲಿ ಮಣಿಸಿತ್ತು. ಆ ಬಳಿಕ ಉಭಯ ತಂಡಗಳ ನಡುವೆ ಎರಡೂ ದೇಶಗಳಲ್ಲಿ ಒಟ್ಟು 13 ಏಕದಿನ ಸರಣಿಗಳು ನಡೆದಿದ್ದು, ಭಾರತ ಸೋತಿಲ್ಲ. ಈ ಸರಣಿಯ ಮೊದಲ ಪಂದ್ಯ ಟೈ ಆದ ಬಳಿಕ, 2ನೇ ಪಂದ್ಯದಲ್ಲಿ ಭಾರತ 32 ರನ್‌ಗಳಿಂದ ಸೋತಿತ್ತು.

ಯೂ ಟರ್ನ್ ಹೊಡೆದ ದಿನೇಶ್ ಕಾರ್ತಿಕ್‌; ನಿವೃತ್ತಿ ಕೈಬಿಟ್ಟು ಈ ಟಿ20 ಲೀಗ್ ಆಡಲು ಡಿಕೆ ರೆಡಿ..!

ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:

ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಖಲೀಲ್ ಅಹಮದ್.

ಶ್ರೀಲಂಕಾ: ಆವಿಷ್ಕಾ ಫರ್ನಾಂಡೋ, ಪತುಮ್ ನಿಸ್ಸಾಂಕ, ಕುಸಾಲ್ ಮೆಂಡೀಸ್, ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ(ನಾಯಕ), ಜನಿತ್ ಲಿಯಾನಗೆ, ಕುಸಾಲ್ ಮೆಂಡಿಸ್, ದುನಿತ್ ವೆಲಾಲಗೆ, ಅಕಿಲಾ ಧನಂಜಯ, ಜೆಫ್ರಿ ವೆಂಡರ್ಸೆ, ಅಸಿತಾ ಫರ್ನಾಂಡೋ. 

ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ 
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್

click me!