ENG vs IND ಟೀಂ ಇಂಡಿಯಾ 245 ‌ರನ್‌ಗೆ ಆಲೌಟ್, ಇಂಗ್ಲೆಂಡ್‌ಗೆ 378 ರನ್ ಟಾರ್ಗೆಟ್!

Published : Jul 04, 2022, 06:15 PM ISTUpdated : Jul 04, 2022, 07:20 PM IST
ENG vs IND ಟೀಂ ಇಂಡಿಯಾ 245 ‌ರನ್‌ಗೆ ಆಲೌಟ್, ಇಂಗ್ಲೆಂಡ್‌ಗೆ 378 ರನ್ ಟಾರ್ಗೆಟ್!

ಸಾರಾಂಶ

ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 378 ರನ್ ಗುರಿ ಎರಡನೇ ಇನ್ನಿಂಗ್ಸ್‌ನಲ್ಲಿ245 ರನ್‌ಗೆ ಟೀಂ ಇಂಡಿಯಾ ಆಲೌಟ್ 4ನೇ ದಿನದಾಟದಲ್ಲಿ ರೋಚಕ ಹೋರಾಟ

ಬರ್ಮಿಂಗ್‌ಹ್ಯಾಮ್(ಜು.04): ಇಂಗ್ಲೆಂಡ್ ಹಾಗೂ ಭಾರತ ನಡುವಿನ ಅಂತಿಮ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಿದ ಟೀಂ ಇಂಡಿಯಾ 245 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 378 ರನ್ ಟಾರ್ಗೆಟ್ ನೀಡಿದೆ.

ಜಸ್ಪ್ರೀತ್ ಬುಮ್ರಾ ವಿಕೆಟ್ ಪತನದೊಂದಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಹೋರಾಟ ಅಂತ್ಯಗೊಂಡಿತು. ಇನ್ನು 150 ಓವರ್ ಬಾಕಿ ಇದೆ. ಹೀಗಾಗಿ ಫಲಿತಾಂಶ ಹೊರಬೀಳುವ ಸಾಧ್ಯತೆ ಹೆಚ್ಚು. ಆದರೆ ಯಾರ ಪರವಾಗಿ ರಿಸಲ್ಟ್ ಬರಲಿದೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಕಾರಣ ಇಂಗ್ಲೆಂಡ್ ತಂಡ ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಬೃಹತ್ ಮೊತ್ತವನ್ನು ಚೇಸ್ ಮಾಡಿ ಗೆದ್ದುಕೊಂಡಿದೆ. ಹೀಗಾಗಿ ಭಾರತದ ವಿರುದ್ಧವೂ ಇದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಆದರೆ ಟೀಂ ಇಂಡಿಯಾ ಬೌಲಿಂಗ್ ಕೂಡ ಅಷ್ಟೇ ಉತ್ತಮವಾಗಿದೆ. ಇದೇ ಕಾರಣದಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಅಬ್ಬರಿಸಲು ಭಾರತ ಅವಕಾಶ ನೀಡಿಲ್ಲ.

IPL ಬಳಿಕ ಔಟ್‌ಸ್ವಿಂಗ್ ಮಾಡುವುದೇ ಮರೆತುಹೋಗಿದೆ ಎಂದ ಮೊಹಮ್ಮದ್ ಸಿರಾಜ್..!

2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಅಬ್ಬರಿಸಲು ವಿಫಲವಾಯಿತು. ಶುಭಮನ್ ಗಿಲ್ 4 ರನ್ ಸಿಡಿಸಿ ಔಟಾದರು. ಚೇತೇಶ್ವರ್ ಪೂಜಾರ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಪೂಜಾರ 66 ರನ್ ಸಿಡಿಸಿ ಔಟಾದರು. ಇತ್ತ ಹುಮಾನ್ ವಿಹಾರಿ ಮತ್ತೆ ಕಳಪೆ ಪ್ರದರ್ಶನ ನೀಡಿದರು. ಕೇವಲ 11 ರನ್ ಸಿಡಿಸಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಕಮ್‌ಬ್ಯಾಕ್ ಮಾಡಲು ವಿಫಲರಾದರು. ಕೊಹ್ಲಿ 20 ರನ್ ಸಿಡಿಸಿ ಔಟಾದರು. 

ರಿಷಬ್ ಪಂತ್ ಹಾಫ್ ಸೆಂಚುರಿ ಕಾಣಿಕೆ ಕುಸಿದ ತಂಡಕ್ಕೆ ಆಸರೆಯಾಯಿತು. ಪಂತ್ 57 ರನ್ ಸಿಡಿಸಿ ಔಟಾದರು. ಇನ್ನ ರವೀಂದ್ರ ಜಡೇಜಾ 23 ರನ್ ಸಿಡಿಸಿದರೆ. ಶಾರ್ದೂಲ್ ಠಾಕೂರ್ 4 ರನ್ ಸಿಡಿಸಿದರು. ಮೊಹಮ್ಮದ್ ಶಮಿ 1 3 ರನ್ ಕಾಣಿಕೆ ನೀಡಿದರು. ಜಸ್ಪ್ರೀತ್ ಬುಮ್ರಾ 7 ವಿಕೆಟ್ ಕಬಳಿಸಿದರು.

'ಪೂಜಾರ ರೀತಿ ಆಡುತ್ತಿದ್ದ ಬೇರ್‌ಸ್ಟೋವ್‌ರನ್ನು, ಕೊಹ್ಲಿ ಪಂತ್‌ರನ್ನಾಗಿ ಮಾಡಿದ್ರು..!'

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್
ಮೊದಲ ದಿನ 12 ರನ್‌ ಗಳಿಸಿದ್ದ ಬೇರ್‌ಸ್ಟೋವ್‌ 2ನೇ ದಿನ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟರು. ಬೆನ್‌ ಸ್ಟೋಕ್ಸ್‌(25) ವಿಕೆಟ್‌ ಕಳೆದುಕೊಂಡ ಬಳಿಕ ಅಬ್ಬರಿಸಿದ ಅವರು ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 119 ಎಸೆತಗಳಲ್ಲಿ ಟೆಸ್ಟ್‌ನ ತಮ್ಮ 11ನೇ ಶತಕ ಪೂರ್ತಿಗೊಳಿಸಿದ ಅವರು 106 ರನ್‌ ಗಳಿಸಿ ನಿರ್ಗಮಿಸಿದರು. ಅವರ ಇನ್ನಿಂಗ್‌್ಸನಲ್ಲಿ 14 ಬೌಂಡರಿ, 2 ಸಿಕ್ಸರ್‌ ಒಳಗೊಂಡಿತ್ತು. ಆರಂಭಿಕ ಕುಸಿತ ಕಂಡಿದ್ದ ಭಾರತಕ್ಕೆ ಪಂತ್‌-ಜಡೇಜಾ ಜೊತೆಯಾಟದ ಮೂಲಕ ನೆರವಾಗಿದ್ದರೂ ಇಂಗ್ಲೆಂಡ್‌ ತಂಡದಿಂದ ಈ ರೀತಿ ಆಟ ಕಂಡುಬರಲಿಲ್ಲ. ಬೇರ್‌ಸ್ಟೋವ್‌ಗೆ ಸ್ಯಾಮ್‌ ಬಿಲ್ಲಿಂಗ್‌್ಸ(36) ಹೊರತುಪಡಿಸಿ ಉಳಿದವರಿಂದ ಸೂಕ್ತ ಬೆಂಬಲ ದೊರೆಯಲಿಲ್ಲ. ಇವರಿಬ್ಬರ ನಿರ್ಗಮನದ ಬಳಿಕ ಇಂಗ್ಲೆಂಡ್ 284 ರನ್‌ಗೆ ಆಲೌಟ್‌ ಆಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?