'ನಿಮಗೆ ಧೈರ್ಯವಿದ್ರೆ..?': ಸಾನಿಯಾ ಜತೆ ಶಮಿ ಮದುವೆ ಬಗ್ಗೆ ಮೊದಲ ಬಾರಿ ತುಟಿಬಿಚ್ಚಿದ್ದ ಟೀಂ ಇಂಡಿಯಾ ವೇಗಿ..!

By Naveen Kodase  |  First Published Jul 20, 2024, 1:40 PM IST

ಟೀಂ ಇಂಡಿಯಾ ಮೊಹಮ್ಮದ್ ಶಮಿ ಇದೇ ಮೊದಲ ಬಾರಿಗೆ ಸಾನಿಯಾ ಮಿರ್ಜಾ ಜತೆಗೆ ಮದುವೆಯಾಗುತ್ತಾರೆ ಎನ್ನುವ ವಿಚಾರದ ಕುರಿತಂತೆ ತುಟಿಬಿಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ


ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಕಳೆದೊಂದು ವರ್ಷದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ, ಇದೀಗ ಹೊಸ ಸುದ್ದಿಯ ಮೂಲಕ ಸದ್ದು ಮಾಡಲಾರಂಭಿಸಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ, ಮೂಗುತಿ ಸುಂದರಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗಲಿದ್ದಾರೆ ಎನ್ನುವಂತಹ ಗಾಳಿ ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಕುರಿತಂತೆ ಮೊದಲ ಬಾರಿಗೆ ಮೊಹಮ್ಮದ್ ಶಮಿ ತುಟಿಬಿಚ್ಚಿದ್ದು, ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಇದರ ಜತೆಗೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ವರ್ಷಾರಂಭದಲ್ಲಿಯೇ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ತಲಾಕ್ ಮೂಲಕ ಬೇರ್ಪಟ್ಟಿದ್ದರು. ಇನ್ನು ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ, ತಮ್ಮ ಪತ್ನಿ ಹಸೀನಾ ಜಹಾನ್ ಅವರಿಂದ ಬೇರ್ಪಟ್ಟಿದ್ದಾರೆ. ಹೀಗಾಗಿ ಸಾನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಇಬ್ಬರು ಮದುವೆಯಾಗಲಿದ್ದಾರೆ ಎಂದು ಹಲವು ಟ್ರೋಲ್ ಹಾಗೂ ಮೀಮ್ಸ್‌ ಪೇಜ್‌ಗಳು ಈ ಇಬ್ಬರ ಫೋಟೋ ಸೇರಿಸಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದರು. ಇದೀಗ ಈ ವಿಚಾರವಾಗಿ ಶುಭಂಕರ್ ಮಿಶ್ರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಶಮಿ ಮೊದಲ ಬಾರಿಗೆ  ತುಟಿಬಿಚ್ಚಿದ್ದಾರೆ.

Tap to resize

Latest Videos

ಕ್ರಿಕೆಟಿಗ ಶಮಿ ಜೊತೆ ಮದುವೆ ಎಂಬ ಸುದ್ದಿ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡ ಸಾನಿಯಾ!

"ಸೋಷಿಯಲ್ ಮೀಡಿಯಾ ಬಳಸುವ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕು. ಕಂಡ ಕಂಡ ಅಸಂಬದ್ಧ ಸುದ್ದಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 

"ಸುಮ್ಮನೆ ಕೆಲವರು ತಮಾಷೆಗಾಗಿ ಇದನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಯಾಕೆ ಹೀಗೆ? ನಾನು ಫೋನ್ ಓಪನ್ ಮಾಡಿದೆ ಎಂದರೆ ಬರೀ ಇಂತಹದ್ದೇ ಮೀಮ್ಸ್‌ಗಳು ನೋಡಲು ಸಿಗುತ್ತದೆ. ಇದು ತಮಾಷೆಗಾಗಿ ಮಾಡಿದ್ದು ಎನ್ನುವುದು ನನಗೂ ಗೊತ್ತಿದೆ. ಆದರೆ ಇದು ಮತ್ತೊಬ್ಬರ ಖಾಸಗಿ ಬದುಕಿಗೆ ಸಂಬಂಧಿಸಿದ ವಿಚಾರ ಎಂದಾಗ ನೀವು ಸ್ವಲ್ಪ ಯೋಚನೆ ಮಾಡಿ ಇಂತಹವುಗಳ್ನು ಶೇರ್ ಮಾಡಬೇಕಾಗುತ್ತದೆ. ವೇರಿವೈಡ್ ಅಲ್ಲದ ಪೇಜ್‌ಗಳಲ್ಲಿ ಏನು ಬೇಕಿದ್ದರೂ ಪೋಸ್ಟ್ ಆಗುತ್ತದೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯಿಸಲು ಹೋಗಲ್ಲ ಎಂದು ಶಮಿ ಹೇಳಿದ್ದಾರೆ.

ಮುಗಿಯಿತಾ ಟೀಂ ಇಂಡಿಯಾ ಈ ಸ್ಟಾರ್ ಆಟಗಾರನ ಕ್ರಿಕೆಟ್ ವೃತ್ತಿಬದುಕು..?

"ಆದರೆ ಒಂದಂತೂ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಒಂದು ವೇಳೆ ಧೈರ್ಯವಿದ್ದರೇ, ವೆರಿಫೈಡ್‌ ಪೇಜ್‌ಗಳಲ್ಲಿ ಇಂತದ್ದನ್ನು ಶೇರ್‌ ಮಾಡಲಿ, ಆಗ ನಾನು ಖಂಡಿವಾಗಿಯೂ ರಿಪ್ಲೇ ನೀಡುತ್ತೇನೆ. ಯಶಸ್ವಿಯಾಗಲೂ ಪ್ರಯತ್ನಿಸೋಣ, ಕಷ್ಟದಲ್ಲಿರುವವರಿಗೆ ನೆರವಾಗೋಣ. ನೀವು ನಿಮ್ಮನ್ನು ಉನ್ನತೀಕರಿಸಿಕೊಳ್ಳಿ, ಆಗ ನೀವೂ ಒಳ್ಳೆಯವರಾಗುತ್ತೀರ" ಎಂದು ಶಮಿ ಖಡಕ್‌ ಆಗಿಯೇ ಈ ವಿಚಾರವಾಗಿ ಉತ್ತರ ನೀಡಿದ್ದಾರೆ.
 

click me!