ರೋಹಿತ್ ಶತಕದ ಬೆನ್ನಲ್ಲೇ ದಿಢೀರ್ ಕುಸಿತ, ಟೀಂ ಇಂಡಿಯಾಗೆ ಅಗ್ನಿಪರೀಕ್ಷೆ!

By Suvarna NewsFirst Published Sep 4, 2021, 10:02 PM IST
Highlights
  • ರೋಹಿತ್ ಶರ್ಮಾ ಶತಕ ಸಿಡಿಸಿದ ಬೆನ್ನಲ್ಲೇ ವಿಕೆಟ್ ಪತನ
  • ಟೀಂ ಇಂಡಿಯಾದ ದಿಢೀರ್ ವಿಕೆಟ್ ಪತನ
  • ಕೊಹ್ಲಿ, ಜಡೇಜಾ ಮೇಲೆ ಒತ್ತಡ, ರನ್ ವೇಗಕ್ಕೆ ಬ್ರೇಕ್

ಲಂಡನ್(ಸೆ.05): ಓವಲ್ ಟೆಸ್ಟ್ ಪಂದ್ಯದಲ್ಲಿ ಮತ್ತೆ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿದೆ. ರೋಹಿತ್ ಶರ್ಮಾ ಸೆಂಚುರಿಯಿಂದ ಪುಟಿದೆದ್ದ ಟೀಂ ಇಂಡಿಯಾಗೆ ಸಡನ್ ಬ್ರೇಕ್ ಬಿದ್ದಿದೆ. ಶತಕದ ಬೆನ್ನಲ್ಲೇ ರೋಹಿತ್ ಶರ್ಮಾ ವಿಕೆಟ್ ಪತನದ ಬೆನ್ನಲ್ಲೇ ಚೇತೇಶ್ವರ್ ಪೂಜಾರ ವಿಕೆಟ್ ಕೂಡ ಪತನಗೊಂಡಿದೆ.

ರೋಹಿತ್ ಶರ್ಮಾ ಭರ್ಜರಿ ಶತಕ; 4ನೇ ಟೆಸ್ಟ್‌ನಲ್ಲಿ ಹಿಟ್‌ಮ್ಯಾನ್ ದಾಖಲೆ!

ವಿದೇಶಿ ನೆಲದಲ್ಲಿ ಮೊದಲ ಸೆಂಚುರಿ ಸಿಡಿಸಿ ಅಬ್ಬರಿಸಿದ ರೋಹಿತ್ ಶರ್ಮಾ 127 ರನ್ ಸಿಡಿಸಿ ಔಟಾದರು. ಇತ್ತ ರೋಹಿತ್‌ಗೆ ಉತ್ತಮ ಸಾಥ್ ನೀಡಿದ ಚೇತೇಶ್ವರ್ ಪೂಜಾರ 61 ರನ್ ಸಿಡಿಸಿ ಔಟಾದರು. ಈ ಮೂಲಕ ರೋಹಿತ್ ಹಾಗೂ ಪೂಜಾರ ಅವರ ಭರ್ಜರಿ ಜೊತಯಾಟ ಮುರಿದುಬಿತ್ತು.

ದಿಢೀರ್ 2 ವಿಕೆಟ್ ಪತನದಿಂದ ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. 2ನೇ ಇನ್ನಿಂಗ್ಸ್‌ನಲ್ಲಿ ಸದ್ಯ 155 ರನ್ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಬೇಕಾದ ಅನಿವಾರ್ಯಯತೆಯಲ್ಲಿದೆ. 

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ನೀಡಿದೆ. ಕೆಎಲ್ ರಾಹುಲ್ 46 ರನ್ ಕಾಣಿಕೆ ನೀಡಿದ್ದರು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶಾರ್ದೂಲ್ ಠಾಕೂರ್ ಹೊರತುಪಡಿಸಿದರೆ ಇತರರಿಂದ ಉತ್ತಮ ಹೋರಾಟ ಮೂಡಿಬಂದಿರಲಿಲ್ಲ. ಹೀಗಾಗಿ 191 ರನ್‌ಗೆ ಟೀಂ ಇಂಡಿಯಾ ಆಲೌಟ್ ಆಗಿತ್ತು.

click me!