ರವಿಚಂದ್ರನ್‌ ಅಶ್ವಿನ್‌ಗೆ ಒಲಿದ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

Suvarna News   | Asianet News
Published : Mar 10, 2021, 08:32 AM IST
ರವಿಚಂದ್ರನ್‌ ಅಶ್ವಿನ್‌ಗೆ ಒಲಿದ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಸಾರಾಂಶ

ಫೆಬ್ರವರಿ ತಿಂಗಳ ಐಸಿಸಿ ಶ್ರೇಷ್ಠ ಆಟಗಾರರ ಪ್ರಶಸ್ತಿಗೆ ಟೀಂ ಇಂಡಿಯಾ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಭಾಜನರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದುಬೈ(ಮಾ.10): ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ಮಿಂಚಿದ ಸ್ಪಿನ್‌ ಮಾಂತ್ರಿಕ ಆರ್‌.ಅಶ್ವಿನ್‌ ಐಸಿಸಿ(ಫೆಬ್ರವರಿ) ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲಿ ಇಂಗ್ಲೆಂಡ್‌ ತಂಡದ ಟಮ್ಮಿ ಬ್ಯೂಮೆಂಟ್‌ ತಿಂಗಳ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯಲ್ಲಿ 176 ರನ್‌ ಗಳಿಸಿದ್ದ ಅಶ್ವಿನ್‌, 24 ವಿಕೆಟ್‌ಗಳನ್ನು ಕಬಳಿಸಿದ್ದರು. ಹೀಗೆ ಅದ್ಭುತ ಪ್ರದರ್ಶನ ತೋರಿದ ಅಶ್ವಿನ್‌ಗೆ ಅಭಿಮಾನಿಗಳಿಂದ ದೊರೆತ ಮತಗಳ ಆಧಾರದ ಈ ಗೌರವ ನೀಡಲಾಗಿದೆ. ಅಶ್ವಿನ್‌ ಜತೆಗೆ ಇಂಗ್ಲೆಂಡ್‌ನ ಜೋ ರೂಟ್‌ ಹಾಗೂ ವೆಸ್ಟ್‌ಇಂಡೀಸ್‌ನ ಕೈಲ್‌ ಮೇಯ​ರ್ಸ್ ಪ್ರಶಸ್ತಿಗೆ ನಾಮ ನಿರ್ದೇಶಿತರಾಗಿದ್ದರು.

ಐಸಿಸಿ ತಿಂಗಳ ಆಟಗಾರ: ಅಶ್ವಿನ್‌ ಸೇರಿ ಮೂವರು ನಾಮನಿರ್ದೇಶನ

ಐಸಿಸಿ ಟಿ-20 ರಾರ‍ಯಂಕಿಂಗ್‌: 2ನೇ ಸ್ಥಾನಕ್ಕೆ ಜಿಗಿದ ಶಫಾಲಿ

ದುಬೈ: ಐಸಿಸಿ ಮಂಗಳವಾರ ಮಹಿಳಾ ಟಿ-20 ರಾರ‍ಯಂಕಿಂಗ್‌ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ ಶಿಫಾಲಿ ಶರ್ಮಾ 744 ಅಂಕಗಳೊಂದಿಗೆ ಬ್ಯಾಟಿಂಗ್‌ ವಿಭಾಗದಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನು ಅನುಭವಿ ಆಟಗಾರ್ತಿ ಸ್ಮೃತಿ ಮಂದನಾ(693) 7 ಹಾಗೂ ಯುವ ಆಟಗಾರ್ತಿ ಜೆಮಿಮಾ ರೊಡ್ರಿಗಸ್‌(643) 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ದೀಪ್ತಿ ಶರ್ಮಾ 6, ರಾಧಾ ಯಾದವ್‌ 8 ಹಾಗೂ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 302 ಅಂಕಗಳೊಂದಿಗೆ ದೀಪ್ತಿ ಶರ್ಮಾ 4ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Ind vs SA 3rd T20I: ಹರಿಣಗಳಿಗೆ ತಿರುಗೇಟು ನೀಡುತ್ತಾ ಟೀಂ ಇಂಡಿಯಾ?
ಆರ್‌ಸಿಬಿ ಕಾಲ್ತುಳಿತದ ದುರ್ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ? ಕೊಹ್ಲಿ ಭಾಗಿ