ಟೋಕಿಯೋ ಒಲಿಂಪಿಕ್ಸ್‌: ಟೀಂ ಇಂಡಿಯಾ ಬೆಂಬಲಿಸಲು ಕೊಹ್ಲಿ ಕರೆ

By Suvarna News  |  First Published Jul 19, 2021, 8:48 AM IST

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಭಾರತೀಯ ಅಥ್ಲೀಟ್‌ಗಳನ್ನು ಬೆಂಬಲಿಸಲು ವಿರಾಟ್ ಕೊಹ್ಲಿ ಕರೆ

* ಈ ಬಾರಿ 127 ಭಾರತೀಯ ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ.

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಜುಲೈ 23ರಿಂದ ಆರಂಭ


ಡರ್ಹಮ್(ಜು.19)‌: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರೀಡಾಪಟುಗಳನ್ನು ಬೆಂಬಲಿಸಿ, ಪ್ರೋತ್ಸಾಹಿಸುವಂತೆ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಕರೆ ನೀಡಿದ್ದಾರೆ. 

ಬಿಸಿಸಿಐ ತನ್ನ ಟ್ವೀಟರ್‌ ಖಾತೆಯಲ್ಲಿ ಹಾಕಿರುವ ವಿಡಿಯೋನಲ್ಲಿ ವಿರಾಟ್‌ ‘ಒಲಿಂಪಿಕ್ಸ್‌ ವೀಕ್ಷಿಸಿ, ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ’ ಎಂದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗಿದೆ.

captain is cheering for our athletes at 👍 👍

Let's join him and 🇮🇳 👏 👏 | | pic.twitter.com/6vBjwi0nXw

— BCCI (@BCCI)

Latest Videos

undefined

ಇದೇ ಮೊದಲ ಬಾರಿಗೆ ಹಿಂದೆಂದಿಗಿಂತಲೂ ಹೆಚ್ಚು, ಅಂದರೆ 127 ಭಾರತೀಯ ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದು, ಹೆಚ್ಚಿನ ಪದಕಗಳನ್ನು ಈ ಬಾರಿ ನಿರೀಕ್ಷಿಸಲಾಗಿದೆ. ಶೂಟಿಂಗ್, ಬಾಕ್ಸಿಂಗ್, ಬ್ಯಾಡ್ಮಿಂಟನ್‌, ಹಾಕಿ ಸೇರಿದಂತೆ 18 ವಿವಿಧ ಸ್ಪರ್ಧೆಗಳಲ್ಲಿ ಭಾರತೀಯ ಅಥ್ಲೀಟ್‌ಗಳು ತಮ್ಮ ಸಾಮರ್ಥ್ಯವನ್ನು ಅನಾವರಣ ಮಾಡಲಿದ್ದಾರೆ.

ಒಲಿಂಪಿಕ್ಸ್‌: ಮೂವರು ಅಥ್ಲೀಟ್‌ಗಳಿಗೆ ಸೋಂಕು!

ಟೋಕಿಯೋ: ಒಲಿಂಪಿಕ್ಸ್‌ ಆರಂಭಕ್ಕೆ ಕೇವಲ 4 ದಿನ ಬಾಕಿ ಇದ್ದು, ಕೊರೋನಾ ಆತಂಕ ಮಾತ್ರ ಹೆಚ್ಚುತ್ತಿದೆ. ಮೂವರು ಅಥ್ಲೀಟ್‌ಗಳಿಗೆ ಸೋಂಕು ತಗುಲಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಈ ಮೂವರ ಪೈಕಿ ಇಬ್ಬರು ಒಲಿಂಪಿಕ್ಸ್‌ ಗ್ರಾಮದೊಳಗಿದ್ದವರು. ಮತ್ತೊಬ್ಬ ಅಥ್ಲೀಟ್‌ ಟೋಕಿಯೋ ಹೋಟೆಲ್‌ವೊಂದರಲ್ಲಿದ್ದಾರೆ. ಮೂವರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅಥ್ಲೀಟ್‌ಗಳ ಹೆಸರನ್ನು ಆಯೋಜಕರು ಬಹಿರಂಗಪಡಿಸಿಲ್ಲ. ಅಲ್ಲದೇ ಕ್ರೀಡಾಕೂಟದಲ್ಲಿ ಭಾಗಿಯಾಗಿರುವ ಇನ್ನೂ ಕೆಲವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಚೀಯರ್ ಅಪ್‌ ಮಾಡಿ, ಪ್ರತಿದಿನ ಭಾರತೀಯ ಒಲಿಂಪಿಕ್ಸ್‌ ಜೆರ್ಸಿ ಪಡೆಯಿರಿ. ಒಲಿಂಪಿಕ್ಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.

click me!