
ಅಹಮದಾಬಾದ್(ಮಾ.22): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಭಾನುವಾರ ಪುಣೆಗೆ ತೆರಳುವ ವೇಳೆ, ಏರ್‌ಪೋರ್ಟ್‌ನಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ, ಪುತ್ರಿ ವಾಮಿಕಾ ಹಾಗೂ ತಮ್ಮ ಲಗೇಜನ್ನು ಒಬ್ಬರೇ ಹೊತ್ತುಕೊಂಡು ಹೋಗುವ ದೃಶ್ಯ ನೋಡುಗರ ಗಮನ ಸೆಳೆಯಿತು. ಸಾಮಾಜಿಕ ತಾಣಗಳಲ್ಲಿ ಈ ಫೋಟೋ ವೈರಲ್ ಸಹ ಆಗಿದೆ.
ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ವೇಳೆ ಕೊಹ್ಲಿ ತಮ್ಮ ಕುಟುಂಬ ಸದಸ್ಯರನ್ನು ಅಹಮದಾಬಾದ್‌ಗೆ ಕರೆಸಿಕೊಂಡಿದ್ದರು. ಇಲ್ಲಿಂದ ಏಕದಿನ ಸರಣಿ ಆಡಲು ಪುಣೆ ತೆರಳಿದ ಕೊಹ್ಲಿ, ಅಲ್ಲಿಗೂ ತಮ್ಮ ಪತ್ನಿ ಹಾಗೂ ಪುತ್ರಿಯೊಂದಿಗೆ ತೆರಳಿದ್ದಾರೆ.
ಪುಣೆಗೆ ಬಂದಿಳಿದ ಟೀಂ ಇಂಡಿಯಾ
ಪುಣೆ: ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲು ಭಾರತ ತಂಡ ಭಾನುವಾರ, ಇಲ್ಲಿಗೆ ಬಂದಿಳಿಯಿತು. ಅಹಮದಾಬಾದ್‌ನಲ್ಲಿ ನಡೆದ ಕೊನೆಯ 2 ಟೆಸ್ಟ್‌ಗಳಲ್ಲಿ ಜಯಿಸಿದ್ದ ಭಾರತ, ಅಲ್ಲೇ ನಡೆದ 5 ಟಿ20 ಪಂದ್ಯಗಳ ಸರಣಿಯನ್ನು 3-2ರಲ್ಲಿ ತನ್ನದಾಗಿಸಿಕೊಂಡಿತ್ತು.
T20 ಸರಣಿ ಗೆದ್ದ ಟೀಂ ಇಂಡಿಯಾಗೆ ಐಸಿಸಿ ಬರೆ; ತಪ್ಪು ಒಪ್ಪಿಕೊಂಡ ಕೊಹ್ಲಿ!
ಭಾನುವಾರ ಸಂಜೆ ಕೊಹ್ಲಿ ನೇತೃತ್ವದ ತಂಡ ವಿಶೇಷ ವಿಮಾನದ ಮೂಲಕ ಪುಣೆ ತಲುಪಿತು. ಮಾ.23ಕ್ಕೆ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಮಾ.26 ಹಾಗೂ ಮಾ.28ರಂದು ಕ್ರಮವಾಗಿ 2ನೇ ಹಾಗೂ 3ನೇ ಪಂದ್ಯ ನಡೆಯಲಿದೆ. ಏಕದಿನ ತಂಡದಲ್ಲಿ ಕರ್ನಾಟಕದ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.