ಮಾಜಿ ಕ್ರಿಕೆಟರ್‌ ತಾಯಿ ಚಿಕಿತ್ಸೆಗೆ ವಿರಾಟ್ ಕೊಹ್ಲಿ 6.77 ಲಕ್ಷ ರೂ ನೆರವು

By Suvarna NewsFirst Published May 20, 2021, 11:50 AM IST
Highlights

* ಟೀಂ ಮಾಜಿ ಕ್ರಿಕೆಟ್ ಆಟಗಾರ್ತಿ ತಾಯಿ ಕೋವಿಗೆ ಚಿಕಿತ್ಸೆಗೆ ನೆರವಾದ ವಿರಾಟ್ ಕೊಹ್ಲಿ

* ಶ್ರವಂತಿ ನಾಯ್ಡು ತಂದೆ-ತಾಯಿ ಕೋವಿಡ್ ಸೋಂಕಿನ ವಿರುದ್ದ ಹೋರಾಟ ನಡೆಸುತ್ತಿದ್ದಾರೆ 

* ಕೋವಿಡ್‌ ಚಿಕಿತ್ಸೆಗೆ ವಿರಾಟ್ ಕೊಹ್ಲಿ 6.77 ಲಕ್ಷ ರುಪಾಯಿ ನೆರವು ನೀಡಿದ್ದಾರೆ. 

ನವದೆಹಲಿ(ಮೇ.20): ಭಾರತದ ಮಾಜಿ ಕ್ರಿಕೆಟರ್‌ ಶ್ರವಂತಿ ನಾಯ್ದು ಅವರ ತಾಯಿಯ ಕೋವಿಡ್‌ ಚಿಕಿತ್ಸೆಗೆ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ 6.77 ಲಕ್ಷ ರುಪಾಯಿ ನೆರವು ನೀಡಿದ್ದಾರೆ. 

ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆ(ಎಚ್‌ಸಿಎ) ಮೂಲಕ ಶ್ರವಂತಿ, ಬಿಸಿಸಿಐ ಹಾಗೂ ಕ್ರಿಕೆಟಿಗರಲ್ಲಿ ನೆರವಿಗೆ ಮನವಿ ಮಾಡಿದ್ದರು. ಶ್ರವಂತಿ ಅವರ ತಂದೆ, ತಾಯಿ ಇಬ್ಬರೂ ಸೋಂಕಿತರಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ. ಅವರ ಚಿಕಿತ್ಸೆಗಾಗಿ ಶ್ರವಂತಿ ಈಗಾಗಲೇ 16 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ ಎನ್ನಲಾಗಿದ್ದು, ಎಚ್‌ಸಿಎ ಸಹ 5 ಲಕ್ಷ ರುಪಾಯಿ ನೆರವನ್ನು ನೀಡಿದೆ.

ಶ್ರವಂತಿ ತಾಯಿ ಎಸ್‌.ಕೆ. ಸುಮನ್‌ ಆಸ್ಪತ್ರೆಯಲ್ಲಿ ಕೋವಿಡ್‌ 19 ವಿರುದ್ದ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಮಾಜಿ ಕ್ರಿಕೆಟ್ ಆಟಗಾರ್ತಿಗೆ ವಿರಾಟ್ ಕೊಹ್ಲಿ ನೆರವಿನ ಹಸ್ತ ನೀಡಿದ್ದಾರೆ. ಎಡಗೈ ಸ್ಪಿನ್ನರ್‌ ಶ್ರವಂತಿ ನಾಯ್ಡು ಭಾರತ ಪರ ಒಂದು ಟೆಸ್ಟ್‌, 4 ಏಕದಿನ ಹಾಗೂ 6 ಟಿ20 ಪಂದ್ಯಗಳನ್ನಾಡಿದ್ದಾರೆ. ಭಾರತ ಪರ 2014ರಲ್ಲಿ ಕೊನೆಯದಾಗಿ ಶ್ರವಂತಿ ಕಣಕ್ಕಿಳಿದಿದ್ದರು.

ಒಂದು ವಾರದಲ್ಲಿ 11 ಕೋಟಿ ರೂ ದೇಣಿಗೆ ಸಂಗ್ರಹಿಸಿದ ವಿರುಷ್ಕಾ ಜೋಡಿ..!

ಈ ಮೊದಲು 14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ದಿಢೀರ್ ಮುಂದೂಡಿಕೆಯಾಗುತ್ತಿದ್ದಂತೆ, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ ಕೋವಿಡ್‌ ವಿರುದ್ದದ ಹೋರಾಟಕ್ಕೆ 2 ಕೋಟಿ ರುಪಾಯಿ ದೇಣಿಗೆ ನೀಡಿದ್ದರು. ಇದಾದ ಬಳಿಕ ಒಂದು ವಾರದ ಅವಧಿಯಲ್ಲಿ ಕೆಟ್ಟೋ ಸಹಭಾಗಿತ್ವದಲ್ಲಿ ವಿರುಷ್ಕಾ ಜೋಡಿ 11,39,11,820 ರುಪಾಯಿಗಳ ದೇಣಿಗೆ ಸಂಗ್ರಹಿಸಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

"

click me!