
ದೆಹಲಿ(ಏ.19): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದ ತಕ್ಷಣವೇ ಸ್ಟೈಲೀಶ್ ಲುಕ್ ಕಣ್ಣ ಮುಂದೆ ಬರುತ್ತೆ. ಲೈಟ್ ಬಿಯರ್ಡ್ ಸ್ಟೈಲ್ ಕೊಹ್ಲಿ ಹಲವು ವರ್ಷಗಳಿಂದ ಉಳಿಸಿಕೊಂಡಿದ್ದಾರೆ. ಕೊಹ್ಲಿ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಳ್ಳುವ ಮೊದಲೇ ಬಿಯರ್ಡ್ ಸ್ಟೈಲ್‌ನಲ್ಲಿ ಮಿಂಚುತ್ತಿದ್ದರು. ಯಾರೇ ಹೇಳಿದರೂ ಕೊಹ್ಲಿ ತಮ್ಮ ಬಿಯರ್ಡ್ ಸ್ಟೈಲ್ ಬದಲಿಸಿಲ್ಲ. ಆದರೆ ಲಾಕ್‌ಡೌನ್‌ನಿಂದ ಮನೆಯೊಳಗೆ ಇರುವ ವಿರಾಟ್ ಕೊಹ್ಲಿ ತಮ್ಮ ಬಿಯರ್ಡ್ ಸ್ಟೈಲ್ ಬದಲಿಸಿದ್ದಾರೆ.
ಕೊಹ್ಲಿ ಬೌಂಡರಿ ಬಾರಿಸು ಎಂದ ಪತ್ನಿ ಅನುಷ್ಕಾ!...
ಕ್ವಾರಂಟೈನ್ ಸಮಯದಲ್ಲಿ ಸ್ಟೈಲ್ ಬದಲಿಸುವ ಮೂಲಕ ನಿಮ್ಮೆಲ್ಲರನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಡುವುಡು ಉತ್ತಮ ಎಂದಿರುವ ಕೊಹ್ಲಿ ತಾವೇ ಖುದ್ದಾಗಿ ತಮ್ಮ ಬಿಯರ್ಡ್ ಸ್ಟೈಲ್ ಬದಲಿಸಿದ್ದಾರೆ. ಟ್ರಿಮ್ಮರ್ ಮೂಲಕ ಕೊಹ್ಲಿ ಬಿಯರ್ಡ್ ಸ್ಟೈಲ್ ಇದೀಗ ಫ್ರೆಂಚ್ ಬಿಯರ್ಡ್ ಆಗಿದೆ. ಕೊಹ್ಲಿ ಸ್ಟೈಲ್ ಚೇಂಜ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಹೊಸ ಲುಕ್ ಪ್ರಯತ್ನಿಸುತ್ತಿರುವುದಾಗಿ ಹೇಳಿದ ಕೊಹ್ಲಿ ಸೈಡ್ ಬಿಯರ್ಡ್ ಟ್ರಿಮ್ ಮಾಡಿದ್ದಾರೆ. ಕೊಹ್ಲಿ ಹೊಸ ಸ್ಟೈಲ್‌ಗೆ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಪ್ರತಿಕ್ರಿಯೆಸಿದ್ದಾರೆ. ಮೊದಲ ಬಿಳಿ ಗಡ್ಡ ತೆಗೆದರೆ ಉತ್ತಮ ಎಂದು ಪೀಟರ್ಸ್ ಹೇಳಿದ್ದಾರೆ. ಕೊಹ್ಲಿ ಹೊಸ ಲುಕ್‌ಗೆ ಅಭಿಮಾನಿಗಳಿ ಕೂಡ ಪ್ರತಿಕ್ರಿಯಿಸಿದ್ದಾರೆ. ಹಲವರು ಚೆನ್ನಾಗಿದೆ ಎಂದರೆ ಇನ್ನೂ ಕೆಲವರು ಹಳೇ ಸ್ಟೈಲ್ ಉತ್ತಮವಾಗಿತ್ತು ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.