ಸಚಿನ್ ಜತೆ ಕ್ರಿಕೆಟ್ ಆಡಿದ ರಣ್ಬೀರ್ ಕಪೂರ್ ಚಿತ್ರ ಹಂಚಿಕೊಂಡ ನೀತು ಕಪೂರ್..!

Suvarna News   | Asianet News
Published : Apr 19, 2020, 06:40 PM IST
ಸಚಿನ್ ಜತೆ ಕ್ರಿಕೆಟ್ ಆಡಿದ ರಣ್ಬೀರ್ ಕಪೂರ್ ಚಿತ್ರ ಹಂಚಿಕೊಂಡ ನೀತು ಕಪೂರ್..!

ಸಾರಾಂಶ

ಬಾಲಿವುಡ್ ತಾರೆ ರಣ್ಬೀರ್ ಕಪೂರ್ ಅವರ ಹಳೆಯ ಫೋಟೋವೊಂದನ್ನು ಅವರ ತಾಯಿ ನೀತು ಹಂಚಿಕೊಂಡಿದ್ದಾರೆ. ರಣ್ಬೀರ್ ಕ್ರಿಕೆಟ್ ಆಡುತ್ತಿದ್ದು, ಸಚಿನ್ ತೆಂಡುಲ್ಕರ್ ಸಾಥ್ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.    

ನವದೆಹಲಿ(ಏ.19): ಬಾಲಿವುಡ್ ಹಿರಿಯ ನಟಿ ನೀತು ಕಪೂರ್ ಕೆಲದಿನಗಳಿಂದ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮಗ ರಣ್ಬೀರ್ ಕಪೂರ್ ಹಳೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹಂಚಿಕೊಂಡ ಒಂದು ಚಿತ್ರದಲ್ಲಿ ರಣ್ಬೀರ್ ಕಪೂರ್ ಕ್ರಿಕೆಟ್ ಆಡುತ್ತಿದ್ದು, ಇವರಿಗೆ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಸಾಥ್ ನೀಡಿದ್ದಾರೆ.

ಈ ಫೋಟೋದಲ್ಲಿ ಸಚಿನ್ ತೆಂಡುಲ್ಕರ್ ಬ್ಯಾಟ್ ಹಿಡಿದು ನಿಂತಿದ್ದರೆ, ರಣ್ಬೀರ್ ಸ್ಮೈಲ್‌ನೊಂದಿಗೆ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ಈ ಫೋಟೋದೊಂದೊಗೆ  ಆಶಾದಾಯಕ ಸಾಲೊಂದನ್ನು ನೀತು ಪೋಣಿಸಿದ್ದಾರೆ. ಕಾಯಿಲೆ, ಒತ್ತಡದಿಂದ ಬಳಲುವಂತೆ ಮಾಡಿರುವ ವೈರಸನ್ನು ಈ ಜಗತ್ತಿನಿಂದಲೇ ಒದ್ದೋಡಿಸುವ ಶಕ್ತಿಯನ್ನು ನಾವೆಲ್ಲ ಹೊಂದುವಂತಾಗಲಿ ಎಂದು ಬರೆದುಕೊಂಡಿದ್ದಾರೆ. 

ಎರಡು ವರ್ಷಗಳ ಹಿಂದೆ ಸಂಜು ಸಿನೆಮಾ ವೀಕ್ಷಿಸಿದ ನಂತರ ರಣ್ಬೀರ್ ಬಗ್ಗೆ ಸಚಿನ್ ತೆಂಡುಲ್ಕರ್, ಸಂಜು ಸಿನೆಮಾವನ್ನು ಎಂಜಾಯ್ ಮಾಡಿದೆ. ಅದರಲ್ಲೂ ರಣ್ಬೀರ್ ಪ್ರದರ್ಶನ ಅದ್ಭುತವಾಗಿತ್ತು. ಪರೇಶ್ ರಾವಲ್, ವಿಕಿ ಕೌಶಲ್ ಎಲ್ಲರೂ ಪಾತ್ರದಲ್ಲಿ ಪರಕಾಶ ಪ್ರವೇಶಿಸಿದ್ದರು ಎಂದು ಟ್ವೀಟ್ ಮಾಡಿದ್ದರು.

ಒಂದೇ ದಿನ 33 ಸಾವಿರ ಕೊರೋನಾ ಕೇಸ್, ಅಮೆರಿಕದಲ್ಲಿ ವೈರಸ್ ಬಿರುಗಾಳಿ!

ಸದ್ಯ ರಣ್ಬೀರ್ ತನ್ನ ಪೋಷಕರೊಂದಿಗೆ ಲಾಕ್‌ಡೌನ್ ಆಗಿಲ್ಲ, ಬದಲಾಗಿ ಆಲಿಯಾ ಭಟ್ ಅವರೊಂದಿಗೆ ಲಾಕ್ ಆಗಿದ್ದಾರೆ. ಕೆಲದಿನಗಳ ಹಿಂದಷ್ಟೇ ಈ ಜೋಡಿ ಒಟ್ಟಾಗಿ ಮನೆಯ ಮುಂದೆ ನಾಯಿಯೊಂದನ್ನು ಹಿಡಿದು ಓಡಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಆರ್ಯನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಚಿತ್ರದಲ್ಲಿ ಆಲಿಯಾ ಹಾಗೂ ರಣ್ಬೀರ್ ಮೊದಲ ಬಾರಿಗೆ ಬಿಗ್ ಸ್ಕ್ರೀನ್‌ನಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!