ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವು ಕೇವಲ ಒಂದೂವರೆ ದಿನಕ್ಕೆ ಮುಕ್ತಾಯವಾಗಿತ್ತು. ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ ಕೇವಲ 55 ರನ್‌ಗಳಿಗೆ ಸರ್ವಪತನ ಕಂಡಿತ್ತು.
ಕೇಪ್‌ಟೌನ್(ಜ.05): ಪಿಚ್‌ಗಳಿಗೆ ರೇಟಿಂಗ್ ನೀಡುವ ವಿಚಾರದಲ್ಲಿ ಐಸಿಸಿ ತಟಸ್ಥವಾಗಿರಬೇಕು ಅಳವಡಿಸಬೇಕು ಎಂದು ಭಾರತದ ನಾಯಕ ರೋಹಿತ್ ಶರ್ಮಾ ಕಿಡಿಕಾರಿದ್ದು, ಕೇಪ್‌ಟೌನ್ ಪಿಚ್ ವರ್ತಿಸಿದ್ದನ್ನು ನೋಡಲು ಮ್ಯಾಚ್ ರೆಫ್ರಿಗಳು ಕಣ್ಣು ತೆರೆಯುವ ಅಗತ್ಯವಿದೆ ಎಂದಿದ್ದಾರೆ.
ಈ ಬಗ್ಗೆ 2ನೇ ಟೆಸ್ಟ್ ಬಳಿಕ ಮಾತನಾಡಿದ ಅವರು, ‘ಕೇಪ್‌ಟೌನ್ ಪಿಚ್ ಹೇಗೆ ವರ್ತಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಂತಹ ಪಿಚ್‌ನಲ್ಲಿ ಆಡುವುದು ನಮಗೆ ಕಷ್ಟವೇನಲ್ಲ. ಆದರೆ ಭಾರತದ ಪಿಚ್ ಬಗ್ಗೆ ಮಾತನಾಡುವವರು ಈಗ ಬಾಯಿಗೆ ಬೀಗ ಹಾಕಿದ್ದಾರೆ. ಕೇಪ್‌ಟೌನ್ ಪಿಚ್ ಅಪಾಯಕಾರಿ ಮತ್ತು ಸವಾಲಿನದ್ದಾಗಿತ್ತು. ಅದೇ ರೀತಿ ಭಾರತಕ್ಕೆ ಸರಣಿ ಆಡಲು ಬಂದಾಗಲೂ ಇಂತಹ ಪಿಚ್‌ಗಳನ್ನು ಎದುರಿಸಬೇಕು. ಭಾರತ ಪಿಚ್‌ಗಳಲ್ಲಿ ತಿರುವು ಕಂಡುಬಂದಾಗ ಎಲ್ಲರೂ ಮಾತನಾಡುತ್ತಾರೆ. ಕೇಪ್‌ಟೌನ್ ಪಿಚ್‌ಗೆ ಹೇಗೆ ರೇಟಿಂಗ್ ಕೊಡುತ್ತಾರೆ ನೋಡಬೇಕು ಎಂದು ಟೀಕಿಸಿದ್ದಾರೆ.
undefined
ಸೌರವ್ ಗಂಗೂಲಿ ಪುತ್ರಿ ಸನಾ ಇಂಟರ್ನ್‌ಶಿಪ್ ಸಂಬಳವೇ ಲಕ್ಷ ಲಕ್ಷ..!
ಇನ್ನು, ವಿಶ್ವಕಪ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಅಹಮದಾಬಾದ್ ಪಿಚ್‌ಗೆ ಸಾಧಾರಣ ರೇಟಿಂಗ್ ನೀಡಿದ್ದಕ್ಕೆ ಕಿಡಿಕಾರಿರುವ ರೋಹಿತ್, ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ. ರೆಫ್ರಿಗಳು ಆತಿಥ್ಯ ದೇಶವನ್ನು ನೋಡದೆ ಪಿಚ್ ವರ್ತನೆಯನ್ನು ನೋಡಿ ರೇಟಿಂಗ್ ನೀಡಬೇಕು ಎಂದು ತಿಳಿಸಿದ್ದಾರೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವು ಕೇವಲ ಒಂದೂವರೆ ದಿನಕ್ಕೆ ಮುಕ್ತಾಯವಾಗಿತ್ತು. ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ ಕೇವಲ 55 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ್ದ ಭಾರತ ಕೂಡಾ 153 ರನ್‌ಗಳಿಗೆ ಆಲೌಟ್ ಅಗಿತ್ತು. ಮೊದಲ ದಿನದಾಟದಲ್ಲೇ ಬರೋಬ್ಬರಿ 23 ವಿಕೆಟ್‌ಗಳು ಪತನವಾಗಿದ್ದವು.
ಜಸ್ಪ್ರೀತ್ ಬುಮ್ರಾ ಬೆಂಕಿ ಬೌಲಿಂಗ್, ಕೇಪ್‌ಟೌನ್ ಟೆಸ್ಟ್ ಗೆಲ್ಲಲು ಭಾರತಕ್ಕೆ ಕೇವಲ 79 ರನ್ ಗುರಿ
ಇನ್ನು ಎರಡನೇ ದಿನದಾಟದಲ್ಲಿ ಏಯ್ಡನ್ ಮಾರ್ಕ್‌ರಮ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಹರಿಣಗಳ ಪಡೆ 176 ರನ್ ಕಲೆಹಾಕಿತು. ಈ ಮೂಲಕ ಭಾರತಕ್ಕೆ ಗೆಲ್ಲಲು 79 ರನ್‌ಗಳ ಸಾಧಾರಣ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಭಾರತ ಕೇವಲ 12 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿತು. ಇದಷ್ಟೇ ಅಲ್ಲದೇ ಕೇಪ್‌ಟೌನ್‌ನಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿದ ಏಷ್ಯಾದ ಮೊದಲ ಕ್ರಿಕೆಟ್ ತಂಡ ಎನ್ನುವ ಹಿರಿಮೆಗೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಪಾತ್ರವಾಗಿದೆ.
ಈ ಸ್ಟೇಡಿಯಂನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ತಲಾ 4 ಟೆಸ್ಟ್ ಪಂದ್ಯಗಳನ್ನಾಡಿದ್ದು, ಒಮ್ಮೆಯೂ ಗೆದ್ದಿಲ್ಲ. ಇನ್ನೊಂದೆಡೆ ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಈ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯವನ್ನಾಡಿಲ್ಲ.