IPL ನಿಯಮದ ವಿರುದ್ಧವೇ ತಿರುಗಿ ಬಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ..!

By Suvarna News  |  First Published Apr 20, 2024, 2:11 PM IST

ಪಂದ್ಯ ನಡೆಯುವಾಗ ಒಂದು ತಂಡ ಬದಲಿ ಆಟಗಾರನನ್ನು ಅಂದ್ರೆ ಬ್ಯಾಟರ್ ಅಥವಾ ಬೌಲರ್ಸ್ ಅನ್ನ ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು. ಇದನ್ನೇ ಇಂಪ್ಯಾಕ್ಟ್ ಪ್ಲೇಯರ್ ಅಂತ ಕರೆಯಲಾಗ್ತಿದೆ.


ಬೆಂಗಳೂರು(ಏ.20): ಐಪಿಎಲ್ ತಂಡದ ನಾಯಕರಿಗೆ ಒಂದು ಚಿಂತೆಯಾದ್ರೆ, ಟೀಂ ಇಂಡಿಯಾ ನಾಯಕನಿಗೆ ಮತ್ತೊಂದು ಚಿಂತೆ. ಟಿ20 ವಿಶ್ವಕಪ್‌ಗೆ ಆಲ್ರೌಂಡರ್ಸ್ ಸಿಗ್ತಿಲ್ಲ ಅಂತ ರೋಹಿತ್ ಶರ್ಮಾ ಹೇಳಿದ್ದಾರೆ. ಇದಕ್ಕೆ ಐಪಿಎಲ್ ನಿಯಮ ಕಾರಣ ಅಂತಲೂ ಆರೋಪಿಸಿದ್ದಾರೆ. ಹಾಗಾದ್ರೆ ಟೀಂ ಇಂಡಿಯಾಗೆ ಮಾರಕವಾಗಿರೋ ಆ ರೂಲ್ಸ್ ಯಾವುದು ಅನ್ನೋದನ್ನ ನೋಡೋಣ ಬನ್ನಿ.

ಇಂಪ್ಯಾಕ್ಟ್ ಪ್ಲೇಯರ್ಸ್‌ನಿಂದ ಟೀಂ ಇಂಡಿಯಾಗೆ ಆಗ್ತಿದೆ ನಷ್ಟ..!

Tap to resize

Latest Videos

ಐಪಿಎಲ್ ಒಂದು ಫ್ರಾಂಚೈಸಿ ಲೀಗ್, ಕಲರ್ ಫುಲ್ ಟೂರ್ನಿಯ ಕಿಕ್ ಹೆಚ್ಚಿಸಲು ಪ್ರತಿ ವರ್ಷ ಒಂದಲ್ಲ ಒಂದು ಹೊಸತವನ್ನ ಬಿಸಿಸಿಐ ಜಾರಿಗೆ ತರುತ್ತಲೇ ಇದೆ. ಚೀಯರ್ ಗರ್ಲ್ಸ್, ಡಿಆರ್‌ಎಸ್‌, ಟೈಮ್ ಔಟ್, ಹೀಗೆ ಅನೇಕ ನಿಯಮಗಳನ್ನ ಜಾರಿಗೆ ತಂದ ಬಿಸಿಸಿಐ, ಕಳೆದ ವರ್ಷ ಇಂಪ್ಯಾಕ್ಟ್ ಪ್ಲೇಯರ್ಸ್ ಅನ್ನ ಪರಿಚಯಿಸಿತ್ತು. ಕಳೆದ ಬಾರಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನ ಎಲ್ಲರೂ ಸ್ವಾಗತಿಸಿದ್ರು. ಆದ್ರೀಗ ಅದರ ವಿರುದ್ಧವೇ ಮಾತನಾಡಲು ಶುರು ಮಾಡಿದ್ದಾರೆ. ಅದರಲ್ಲೂ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಗರಂ ಆಗಿದ್ದಾರೆ.

ಐಪಿಎಲ್‌ನಲ್ಲಿ ಮರೀಚಿಕೆಯಾದ ಸೂಪರ್ ಓವರ್..! ಎರಡು ವರ್ಷದಿಂದ ಒಂದೂ ನಡೆದಿಲ್ಲ ಸೂಪರ್ ಓವರ್..!

ಪಂದ್ಯ ನಡೆಯುವಾಗ ಒಂದು ತಂಡ ಬದಲಿ ಆಟಗಾರನನ್ನು ಅಂದ್ರೆ ಬ್ಯಾಟರ್ ಅಥವಾ ಬೌಲರ್ಸ್ ಅನ್ನ ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು. ಇದನ್ನೇ ಇಂಪ್ಯಾಕ್ಟ್ ಪ್ಲೇಯರ್ ಅಂತ ಕರೆಯಲಾಗ್ತಿದೆ. ಪ್ರತಿ ತಂಡವನ್ನ ಇದರ ಪ್ರಯೋಜನ ಪಡೆಯುತ್ತಿದ್ದು, ಇಂಪ್ಯಾಕ್ಟ್ ಪ್ಲೇಯರ್ಸ್‌ನಿಂದ ಸೋಲೋ ಪಂದ್ಯಗಳನ್ನ ಗೆದ್ದಿವೆ. ಈಗ ಇದೇ ಇಂಪ್ಯಾಕ್ಟ್ ಪ್ಲೇಯರ್ ವಿರುದ್ಧವೇ ರೋಹಿತ್ ಶರ್ಮಾ ಮಾತನಾಡಿರೋದು.

ಇಂಪ್ಯಾಕ್ಟ್ ಪ್ಲೇಯರ್ ನಿಯಮವು, ಆಲ್ರೌಂಡರ್‌ಗಳ ಬೆಳವಣಿಗೆಗೆ ಮಾರಕವಾಗಲಿದೆ. ಶಿವಂ ದುಬೆ ಅವರಂತಹ ಆಲ್ರೌಂಡರ್‌ಗಳ ಬ್ಯಾಟಿಂಗ್‌ಗೆ ಮಾತ್ರ ಸೀಮಿತವಾಗುತ್ತಾರೆ. ಅವರು ಬೌಲಿಂಗ್ ಮಾಡಲು ಅವಕಾಶ ಸಿಗುತ್ತಿಲ್ಲ. ಟೀಂ ಇಂಡಿಯಾ ಪಾಲಿಗೆ ಇದು ನಿಜಕ್ಕೂ ಒಳ್ಳೆಯದಲ್ಲ. ಕ್ರಿಕೆಟ್ ಆಟವು ಒಂದು ತಂಡದಲ್ಲಿ 11 ಆಟಗಾರರೊಂದಿಗೆ ಆಡುವುದಾಗಿದೆ. 12 ಆಟಗಾರರಿಂದ ಅಲ್ಲ. ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ನನಗೇನು ಇಷ್ಟವಿಲ್ಲ. ಅಲ್ಪಸ್ವಲ್ಪ ಮನರಂಜನೆ ಹೆಚ್ಚಿಸಲು ಆಟದ ಸತ್ವವನ್ನು ಕಳೆದುಕೊಳ್ಳಲಾಗುತ್ತಿದೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.

IPL 2024: ಚೆನ್ನೈ ಸೂಪರ್ ಕಿಂಗ್ಸ್ ಬಗ್ಗುಬಡಿದು ಗೆಲುವಿನ ಹಳಿಗೆ ಮರಳಿದ ಲಖನೌ ಸೂಪರ್ ಜೈಂಟ್ಸ್‌

ಆಲ್ರೌಂಡರ್ ದುಬೆ ಬೌಲಿಂಗೇ ಮಾಡಿಲ್ಲ

ಯೆಸ್, ರೋಹಿತ್ ಶರ್ಮಾ ಹೇಳೋದ್ರಲ್ಲೂ ಸತ್ಯವಿದೆ. ಸಿಎಸ್ಕೆ ಪರ ಆಡುತ್ತಿರುವ ಶಿವಂ ದುಬೆ, ಬೇಸಿಕಲಿ ಆಲ್ರೌಂಡರ್. ವೇಗದ ಬೌಲಿಂಗ್ ಜೊತೆ ಬ್ಯಾಟಿಂಗ್ ಸಹ ಮಾಡಲಿದ್ದಾರೆ. ಆದ್ರೆ ಸಿಎಸ್‌ಕೆಗೆ ಅವರನ್ನ ಹೆಚ್ಚಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸ್ತಿದೆ. ಹಾಗಾಗಿ ಅವರು ಕೇವಲ ಬ್ಯಾಟಿಂಗ್ ಮಾಡಿ ಹೋಗುತ್ತಾರೆ. 6 ಪಂದ್ಯಗಳಿಂದ ಅವರು ಒಂದೇ ಒಂದು ಎಸೆತವನ್ನೂ ಎಸೆದಿಲ್ಲ. ಈಗ ಅವರನ್ನ ಟಿ20 ವಿಶ್ವಕಪ್‌ಗೆ ಯಾವ ಆಧಾರದ ಮೇಲೆ ಸೆಲೆಕ್ಟ್ ಮಾಡಬೇಕು ಹೇಳಿ. ಇದನ್ನೇ ರೋಹಿತ್ ಹೇಳಿರೋದು.

ಬೌಲರ್ಸ್‌ಗೆ ಮಾರಕವಾಗ್ತಿದೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ

ಯೆಸ್, ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬೌಲರ್ಸ್‌ಗೆ ಮಾರಕವಾಗ್ತಿದೆ. ಕಳೆದ 16 ಸೀಸನ್ ಐಪಿಎಲ್‌ನಲ್ಲಿ ಒಂದೆರಡು ಬಾರಿ ಇನ್ನಿಂಗ್ಸ್ ವೊಂದರಲ್ಲಿ 250 ಪ್ಲಸ್ ರನ್ ಬರುತ್ತಿದ್ದವು. ಈ ಸಲ ಆಗ್ಲೇ ನಾಲ್ಕು ಸಲ 250ಕ್ಕೂ ಅಧಿಕ ರನ್ ಬಂದಿವೆ. ಒಬ್ಬ ಆಟಗಾರ ಸೆಂಚುರಿ ಬಾರಿಸಿದ್ರೆ ಆ ತಂಡ ಗೆಲ್ಲುವ ಚಾನ್ಸಸ್ ಜಾಸ್ತಿ ಇರುತ್ತಿತ್ತು. ಆದ್ರೆ ಈಗ ಶತಕ ಬಾರಿಸಿದ್ರೂ ಎದುರಾಳಿ ಇಂಪ್ಯಾಕ್ಟ್ ಪ್ಲೇಯರ್‌ನಿಂದ ಗೆಲ್ಲುವ ಸಾಧ್ಯತೆ ಕಡಿಮೆಯಾಗ್ತಿದೆ. ಇದು ಕ್ರಿಕೆಟ್‌ಗೆ ಮಾರಕ ಅಂತ ಮಾಜಿ ಕ್ರಿಕೆಟರ್‌ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಷ್ಟೇಲ್ಲ ಆದ್ರೂ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನ ತೆಗೆಯುವುದಿಲ್ಲ. ಯಾಕಂದ್ರೆ ಇದು ಐಪಿಎಲ್ ಕಿಕ್ ಹೆಚ್ಚಿಸಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!