
ಬರ್ಮಿಂಗ್‌ಹ್ಯಾಮ್(ಜು.09): ವಿರಾಟ್ ಕೊಹ್ಲಿ ನಂತರ ಕ್ಯಾಪ್ಟನ್ ಆದ ರೋಹಿತ್ ಶರ್ಮಾ, ಟೀಂ ಇಂಡಿಯಾವನ್ನು ಮುನ್ನಡೆಸಿದಕ್ಕಿಂತ ಹೊರಗುಳಿದಿದ್ದೇ ಹೆಚ್ಚು. ಇಂಜುರಿ ಮತ್ತು ವಿಶ್ರಾಂತಿಯಿಂದಾಗಿ ಅವರು ಸತತವಾಗಿ ಟೀಂ ಇಂಡಿಯಾವನ್ನು ಲೀಡ್ ಮಾಡಿಯೇ ಇಲ್ಲ. ಐಪಿಎಲ್ ಬಳಿಕ ಭಾರತ ಮೂರು ಸರಣಿ ಆಡಿದ್ರೂ ರೋಹಿತ್ ಒಂದರಲ್ಲೂ ನಾಯಕತ್ವ ವಹಿಸಿಕೊಳ್ಳಲಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ಮೂಲಕ ಮತ್ತೆ ಕ್ಯಾಪ್ಟನ್ಸಿಗೆ ಮರಳಿದ್ದು, ಹಲವು ದಾಖಲೆಗೆ ಪಾತ್ರರಾಗಿದ್ದಾರೆ.
ರೋಹಿತ್ ನಾಯಕತ್ವದಲ್ಲಿ ಭಾರತಕ್ಕೆ ಸತತ 13 ಜಯ:
ರೋಹಿತ್ ಶರ್ಮಾ (Rohit Sharma) ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಸತತ 13 ಟಿ20 ಪಂದ್ಯಗಳನ್ನ ಗೆದ್ದಿದೆ. ನ್ಯೂಜಿಲೆಂಡ್, ವಿಂಡೀಸ್, ಲಂಕಾ ವಿರುದ್ಧ ಒಂದೂ ಸೋಲು ಕಾಣದೇ ಟಿ20 ಸರಣಿ ಗೆದ್ದಿದ್ದ ಭಾರತ, ಮೊನ್ನೆ ಇಂಗ್ಲೆಂಡ್ ವಿರುದ್ಧವೂ ಗೆದ್ದಿತು. ಇದಕ್ಕೂ ಮುಂಚೆ ಕೊಹ್ಲಿ ಅನುಪಸ್ಥಿತಿಯಲ್ಲಿ ಕೆಲ ಪಂದ್ಯಗಳನ್ನ ಮುನ್ನಡೆಸಿದ್ದರು. ಸತತ 13 ಪಂದ್ಯ ಗೆಲ್ಲಿಸಿಕೊಟ್ಟ ವಿಶ್ವ ದಾಖಲೆಯನ್ನು ರೋಹಿತ್ ಶರ್ಮಾ ನಿರ್ಮಿಸಿದ್ದಾರೆ. ಇನ್ನು ಅವರು ಟೀಂ ಇಂಡಿಯಾ (Team India) ನಾಯಕರಾದ್ಮೇಲೆ ಮೂರು ಫಾರ್ಮ್ಯಾಟ್ನಲ್ಲೂ ಸತತ 15 ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ.
ನಾಯಕನಾಗಿ ವೇಗವಾಗಿ ಸಾವಿರ ರನ್ ಗಳಿಸಿದ ರೋಹಿತ್:
ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ ವೇಗವಾಗಿ ಒಂದು ಸಾವಿರ ರನ್ ಬಾರಿಸಿದ ದಾಖಲೆ ನಿರ್ಮಿಸಿದ್ದಾರೆ. 29 ಪಂದ್ಯಗಳಿಂದ 150ರ ಸ್ಟ್ರೈಕ್ರೇಟ್ನಲ್ಲಿ ರೋಹಿತ್ ಸಾವಿರ ರನ್ ಬಾರಿಸಿದ್ದಾರೆ. ಈ ಸಾಧನೆ ಮಾಡಿರುವ ಮೊದಲ ಭಾರತೀಯ ನಾಯಕ ಎನ್ನುವ ಹೆಗ್ಗಳಿಕೆ ಹಿಟ್‌ಮ್ಯಾನ್ ಹೆಸರಿನಲ್ಲಿದೆ.
ಮುಗಿಯಿತಾ ಈ ಇಬ್ಬರು Team India ಸ್ಟಾರ್ ಕ್ರಿಕೆಟಿಗರ ಟಿ20 ವೃತ್ತಿಬದುಕು..?
ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 900 ಬೌಂಡರಿ.. 400 ಸಿಕ್ಸರ್:
ಯೆಸ್, ಟಿ20 ಕ್ರಿಕೆಟ್‌ನಲ್ಲಿ ರೋಹಿತ್, 900ಕ್ಕೂ ಅಧಿಕ ಬೌಂಡರಿ ಮತ್ತು 400ಕ್ಕೂ ಅಧಿಕ ಸಿಕ್ಸರ್ಗಳನ್ನ ಸಿಡಿಸಿರುವ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಹಿಟ್ ಮ್ಯಾನ್ ಅವರ ಟಿ20 ಆಕೌಟ್ನಲ್ಲಿ 904 ಬೌಂಡರಿಗಳು ಹಾಗೂ 435 ಸಿಕ್ಸರ್ಗಳಿವೆ.
ರೋಹಿತ್ ನಾಯಕತ್ವದಲ್ಲಿ ಭಾರತಕ್ಕೆ 25 ಜಯ ಕೇವಲ 4 ಸೋಲು:
ರೋಹಿತ್ ಶರ್ಮಾ 29 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದು, 25 ಗೆಲ್ಲಿಸಿ, ಕೇವಲ ನಾಲ್ಕನ್ನು ಮಾತ್ರ ಸೋಲಿಸಿದ್ದಾರೆ. ಅವರ ನಾಯಕತ್ವದಲ್ಲಿ ವಿನ್ನಿಂಗ್ ಪರ್ಸಂಟೇಜ್ 86.20. ಧೋನಿ ಮತ್ತು ಕೊಹ್ಲಿ ಅವರನ್ನೂ ನಾಯಕತ್ವದಲ್ಲಿ ಹಿಂದಿಕ್ಕಿದ್ದಾರೆ ಹಿಟ್‌ಮ್ಯಾನ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.