T20 World Cup: ಭಾರತಕ್ಕೆ ಟಫ್​ ಚಾಲೆಂಜ್​; ಸ್ವಲ್ಪ ಯಾಮಾರಿದ್ರೂ ಈ ನಾಲ್ವರು ಪ್ಲೇಯರ್ಸ್​ ಮಿಸ್!

Published : Jul 25, 2022, 01:49 PM IST
T20 World Cup: ಭಾರತಕ್ಕೆ ಟಫ್​ ಚಾಲೆಂಜ್​; ಸ್ವಲ್ಪ ಯಾಮಾರಿದ್ರೂ ಈ ನಾಲ್ವರು ಪ್ಲೇಯರ್ಸ್​ ಮಿಸ್!

ಸಾರಾಂಶ

2022ರ ಟಿ20 ವಿಶ್ವಕಪ್​​ನಲ್ಲಿ ಭಾರತಕ್ಕೆ ಟಫ್​ ಚಾಲೆಂಜ್​ ಸ್ವಲ್ಪ ಯಾಮಾರಿದ್ರೂ ಈ ನಾಲ್ವರು ಪ್ಲೇಯರ್ಸ್​ ಮಿಸ್​​  ಚತುರ್ಥರು ಹೊರಬಿದ್ರೆ ಭಾರತದ ಕಥೆ ಹರೋಹರ..!

ಬೆಂಗಳೂರು (ಜು.25 ): ಮಿನಿ ವಿಶ್ವಕಪ್​ ಎಂದೇ ಕರೆಯಲ್ಪಡೋ ಟಿ20 ವಿಶ್ವಕಪ್​​​ ಸಮೀಪಿಸ್ತಿದೆ. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಟೂರ್ನಿ ನಡೆಯಲಿದ್ದು, ಆರಂಭಕ್ಕೆ ಇನ್ನೂ ಜಸ್ಟ್​​ ಮೂರು ತಿಂಗಳಷ್ಟೇ ಬಾಕಿ ಇದೆ. ಟೀಮ್​ ಇಂಡಿಯಾ ಸೇರಿ ಎಲ್ಲ ತಂಡಗಳು ಈಗಿನಿಂದಲೆ ಸಿದ್ಧತೆ ಆರಂಭಿಸಿವೆ. ದಿ ಬೆಸ್ಟ್​​​ ತಂಡ ಕಟ್ಟಲು ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್​​ ದ್ರಾವಿಡ್​ ಪ್ರಯತ್ನಿಸ್ತಿದ್ದಾರೆ. ಆದರೂ ಕೆಲ ಸೂಪರ್​ ಸ್ಟಾರ್​​​ ಆಟಗಾರರ ಗಾಯದ ಭೀತಿ ​​​ ಟೀಮ್​ ಮ್ಯಾನೇಜ್​​ಮೆಂಟ್​​​​​ ಚಿಂತೆ ಹೆಚ್ಚಿಸಿದೆ. ಒಂದು ವೇಳೆ ಈ ನಾಲ್ವರು ಪ್ಲೇಯರ್ಸ್​ ಕೊಂಚ ಯಾಮಾರಿದ್ರೂ ಟಿ20ವಿಶ್ವಕಪ್​​ ಅನ್ನೇ ಮಿಸ್​ ಮಾಡಿಕೊಳ್ಳಲಿದ್ದಾರೆ.

T20 World cup 2022: 13 ಪಂದ್ಯಗಳಲ್ಲಿ ರೆಡಿಯಾಗಬೇಕು ಟೀಮ್ ಇಂಡಿಯಾ

ತಂಡದ ಸಾರಥಿನೇ ಮಿಸ್​​​​​ ಆಗುವ ಆತಂಕ : 
 ರೋಹಿತ್​​ ಶರ್ಮಾ(Rohit sharm) ಟೀಮ್​ ಇಂಡಿಯಾ(Team India)ದ ಬೆನ್ನೆಲುಬು. ನಾಯಕನಾಗಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸ್ತಿದ್ದಾರೆ. ಆದ್ರೆ ಇತ್ತೀಚೆಗೆ ಹಿಟ್​​ಮ್ಯಾನ್​​(Hitman)ಗೆ ಫಿಟ್ನೆಸ್(Fitness)ಸಮಸ್ಯೆ ಹೆಚ್ಚಾಗಿ ಕಾಡ್ತಿದೆ. ಇದು ತಂಡದ ಟೆನ್ಷನ್ ಹೆಚ್ಚಿಸಿದೆ. ವಿಶ್ವಕಪ್​​​​​ಗೂ ಮುನ್ನ ಇನ್ನುಳಿದ 4 ಸರಣಿಗಳಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ. ಇಲ್ಲವಾದ್ರೆ ಸ್ಟಾರ್​ ನಾಯಕನಿಲ್ಲದೇ ಐಸಿಸಿ ಬಿಗ್ ಈವೆಂಟ್​​(ICC Big Event)ನಲ್ಲಿ ಕಣಕ್ಕಿಳಿಯಬೇಕಾಗುತ್ತೆ.

ಇಂಜುರಿ ಸಾಕು, ಫಿಟ್ನೆಸ್​ ಕಾಪಾಡಿಕೊಳ್ಳಬೇಕಿದೆ ರಾಹುಲ್​ :
ಸ್ಟಾರ್ ಓಪನರ್​​​ ಕೆಎಲ್ ರಾಹುಲ್​(K.L.Rahul) ಬಗ್ಗೆ ಟೀಮ್​ ಇಂಡಿಯಾ ತೀವ್ರ ಆತಂಕದಲ್ಲಿದೆ.ಈ ವರ್ಷ ಕನ್ನಡಿಗ ಆಡಿದ್ದಕ್ಕಿಂತ ಹೆಚ್ಚಾಗಿ ಇಂಜುರಿಯಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ರಾಹುಲ್ ಗೆ ​​ ಸದ್ಯ ಕೊವಿಡ್​​​ ದೃಢಪಟ್ಟಿದೆ. ವಿಂಡೀಸ್​ ಟಿ20 ಸರಣಿ ಆಡುವುದು ಅನುಮಾನ ಎನ್ನಲಾಗ್ತಿದೆ. ಪದೇ ಪದೇ ಗಾಯಗೊಳ್ಳುತ್ತಿರುವ ಭಾರತಕ್ಕೆ ರಾಹುಲ್ ಫಿಟ್ನೆಸ್ ದೊಡ್ಡ ತಲೆನೋವಾಗಿದೆ. ಈ ಸ್ಟಾರ್​ ಓಪನರ್​​ ಇನ್ನಾದ್ರು ಫಿಟ್ನೆಸ್​ ಬಗ್ಗೆ ಹೆಚ್ಚು ಗಮನ ಕೊಡದಿದ್ದಲ್ಲಿ ಟಿ20 ವಿಶ್ವಕಪ್(T20 World Cup)​ ರೇಸ್​​​ನಿಂದ ಹೊರಬೀಳಲಿದ್ದಾರೆ.

ಖಲೀಲ್ ಅಹ್ಮದ್ ಹಿಂದೆ ಬಿಸಿಸಿಐ ಬಿದ್ದಿರೋದ್ಯಾಕೆ..?

ಹಾರ್ದಿಕ್​​​​(Hardhik) ಮತ್ತೆ ಇಂಜುರಿ ಆದ್ರೆ ವಿಶ್ವಕಪ್​​​​​ ಹಾದಿ ದುರ್ಗಮ: ಬೆನ್ನುನೋವಿನಿಂದಾಗಿ ಸುದೀರ್ಘ ಕಾಲ ಹೊರಗುಳಿದಿದ್ದ  ಹಾರ್ದಿಕ್​​ ಪಾಂಡ್ಯ ಸದ್ಯ ತಂಡದಲ್ಲಿ ಹಲ್​​ಚಲ್​ ಎಬ್ಬಿಸಿದ್ದಾರೆ. ಬ್ಯಾಟಿಂಗ್​​​​​​ ಹಾಗೂ ಬೌಲಿಂಗ್​​ನಲ್ಲಿ ತಂಡಕ್ಕೆ ನೆರವಾಗ್ತಿದ್ದಾರೆ. ಇದುವೇ ತಂಡದ ಆತಂಕಕ್ಕೆ ಕಾರಣವಾಗಿದೆ.ಯಾಕಂದ್ರೆ  ಹಾರ್ದಿಕ್​​ ಮೇಲೆ ಒತ್ತಡ ಹೆಚ್ಚಿದಂತೆ ಇಂಜುರಿ ಪರಿಸ್ಥಿತಿಯೂ ಹೆಚ್ಚುತ್ತದೆ. ಹಾಗೇನಾದ್ರು ಪಾಂಡ್ಯ ಇಂಜುರಿಯಿಂದ ಬಳಲಿದ್ರೆ ಅವರ ಟಿ20 ವಿಶ್ವಕಪ್​ ಹಾದಿ ಕಠಿಣವೆನಿಸಿದೆ.

ಇದೇ ಫಿಟ್ನೆಸ್​​ ಉಳಿಸಿಕೊಳ್ಳಬೇಕಿದೆ ಭುವಿ : 
ಸದ್ಯ ಇಂಜುರಿಯಿಂದ ಸಂಪೂರ್ಣ ಗುಣಮುಖರಾದ ಭುವನೇಶ್ವರ್​ ಕುಮಾರ್​ ಇಂಪ್ರೆಸ್ಸಿವ್​​ ಆಟದಿಂದ ಗಮನ ಸೆಳೆಯುತ್ತಿದ್ದಾರೆ. ಟೆಸ್ಟ್​​​​ನಲ್ಲಿ ಭುವಿಯನ್ನ ಆಡಿಸ್ತಿಲ್ಲ. ಕೇವಲ ಟಿ20 ಮತ್ತು ಒನ್ಡೆಗೆ ಮಾತ್ರ ಪರಿಗಣಿಸಲಾಗ್ತಿದೆ. ಒತ್ತಡ ಕಮ್ಮಿ ಮಾಡಲು ವಿಶ್ರಾಂತಿ ಕೂಡ ನೀಡಲಾಗ್ತಿದೆ.ಆದ್ರೂ ಭುವಿಗೆ ಇಂಜುರಿ ಭೂತ ಬೆನ್ನು ಬಿಟ್ಟಿಲ್ಲ. ಹೀಗಾಗಿ ಸೀನಿಯರ್ ಬೌಲರ್​​​​​​ ಫಿಟ್ನೆಸ್​​ ಕೂಡ ಟಿ20 ವಿಶ್ವಕಪ್​​​​​​​​ ಮೊದಲು   ಭಾರತಕ್ಕೆ ಟೆನ್ಷನ್  ತಂದೊಡ್ಡಿದೆ.

ಎನಿವೇ ಮೇಲಿನ ಈ ಚತುರ್ಥರು ಭಾರತಕ್ಕೆ ಮ್ಯಾಚ್​ ವಿನ್ನರ್ಸ್​. ಟಿ20 ವಿಶ್ವಕಪ್​​ವರೆಗೆ ಫಿಟ್ನೆಸ್​​​​ ಕಡೆ ಹೆಚ್ಚು ಗಮನ ವಹಿಸಲಿ. ಕೊಂಚ ಯಾಮಾರಿದ್ರೂ ಟೀಮ್​ ಇಂಡಿಯಾ ಕಥೆ ಹರೋಹರ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!
U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!