
ಕೋಲ್ಕತಾ: ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ 2ನೇ ಬಾರಿ ಫೈನಲ್‌ಗೇರಿದೆ. ಪ್ರಶಸ್ತಿ ಸನಿಹದಲ್ಲಿ ಎಡವಿ ಬೀಳುವ ಮೂಲಕ ‘ಚೋಕರ್ಸ್’ ಹಣೆಪಟ್ಟಿ ಕಟ್ಟಿಕೊಂಡಿರುವ ದಕ್ಷಿಣ ಆಫ್ರಿಕಾ ತಂಡದ ಸತತ 2ನೇ ಫೈನಲ್ ಕನಸು ಭಗ್ನಗೊಂಡಿತು. ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ದ.ಆಫ್ರಿಕಾ ವಿರುದ್ಧ ಕಿವೀಸ್ 9 ವಿಕೆಟ್ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ದ.ಆಫ್ರಿಕಾ ಆರಂಭಿಕ ಕುಸಿತದ ಹೊರತಾಗಿಯೂ 8 ವಿಕೆಟ್‌ಗೆ 169 ರನ್ ಗಳಿಸಿತು. 12ಕ್ಕೆ 2, 77ಕ್ಕೆ 5 ವಿಕೆಟ್ ಬಿದ್ದರೂ, ಬ್ರೆವಿಸ್ 34, ಸ್ಟಬ್ಸ್ 29, ಮಾರ್ಕೊ ಯಾನ್ಸನ್ 30 ಎಸೆತಕ್ಕೆ ಔಟಾಗದೆ 55 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.
ಆದರೆ ದ.ಆಫ್ರಿಕಾ ಕಷ್ಟಪಟ್ಟು ಸೇರಿಸಿದ ಮೊತ್ತವನ್ನು ಕಿವೀಸ್ ಸಲೀಸಾಗಿ ಬೆನ್ನತ್ತಿ ಗೆದ್ದಿತು. ಆರಂಭಿಕರಾದ ಫಿನ್ ಆ್ಯಲೆನ್-ಟಿಮ್ ಸೀಫರ್ಟ್ ಸ್ಫೋಟಕ ಆಟವಾಡಿ 9.1 ಓವರ್‌ಗಳಲ್ಲಿ 117 ರನ್ ಜೊತೆಯಾಟವಾಡಿದರು. ಸೀಫರ್ಟ್ 33 ಎಸೆತಕ್ಕೆ 58 ರನ್ ಗಳಿಸಿ ಔಟಾದರೂ, ಆ್ಯಲೆನ್ 33 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 100 ರನ್ ಪೂರ್ಣಗೊಳಿಸಿ ತಂಡವನ್ನು ಗೆಲ್ಲಿಸಿದರು.
ಭಾನುವಾರ ಅಹಮದಾಬಾದ್‌ನಲ್ಲಿ ಫೈನಲ್ ನಡೆಯಲಿದ್ದು, ಕಿವೀಸ್ ತಂಡ ಭಾರತ ಅಥವಾ ಇಂಗ್ಲೆಂಡ್ ವಿರುದ್ಧ ಆಡಲಿದೆ.
ಸ್ಕೋರ್: ದ.ಆಫ್ರಿಕಾ 20 ಓವರಲ್ಲಿ 169/8 (ಯಾನ್ಸನ್ 55*, ಬ್ರೆವಿಸ್ 34, ಮೆಕಾಂಚಿ 2-9), ನ್ಯೂಜಿಲೆಂಡ್ 12.5 ಓವರಲ್ಲಿ 173/1 (ಆ್ಯಲೆನ್ 100*, ಸೀಫರ್ಟ್ 58, ರಬಾಡ 1-28)
ಪಂದ್ಯಶ್ರೇಷ್ಠ: ಫಿನ್ ಆ್ಯಲೆನ್
ಆ್ಯಲೆನ್ 33 ಎಸೆತಕ್ಕೆ ಶತಕ ಪೂರ್ಣಗೊಳಿಸಿದರು. ಇದು ಟಿ20 ವಿಶ್ವಕಪ್‌ನಲ್ಲೇ ಅತಿ ವೇಗದ ಶತಕ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಿಸ್ ಗೇಲ್ 47 ಎಸೆತಕ್ಕೆ ಶತಕ ಬಾರಿಸಿದ್ದು ಈವರೆಗೆ ದಾಖಲೆಯಾಗಿತ್ತು. ಇನ್ನು, ಅಂ.ರಾ. ಟಿ20ಯಲ್ಲಿ ಕಿವೀಸ್ ಪರ ಈವರೆಗೂ ಅತಿ ವೇಗದ ಶತಕದ ದಾಖಲೆ ಇದ್ದಿದ್ದು ಗ್ಲೆನ್ ಫಿಲಿಪ್ಸ್ ಹೆಸರಿನಲ್ಲಿ. ಅವರು 2020ರಲ್ಲಿ ವಿಂಡೀಸ್ ವಿರುದ್ಧ 46 ಎಸೆತಕ್ಕೆ ಶತಕ ಸಿಡಿಸಿದ್ದರು.
33 ಎಸೆತಆ್ಯಲೆನ್ ಅಂ.ರಾ. ಟಿ20ಯಲ್ಲಿ 3ನೇ ಅತಿ ವೇಗದ ಶತಕದ ದಾಖಲೆ ಬರೆದರು. ಎಸ್ಟೋನಿಯಾದ ಸಾಹಿಲ್ ಸೈಪ್ರಸ್ ವಿರುದ್ಧ 27, ಟರ್ಕಿಯ ಫಹದ್ ಬಲ್ಗೇರಿಯಾ ವಿರುದ್ಧ 29 ಎಸತಕ್ಕೆ ಶತಕ ಬಾರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.