ಇಂದಿನಿಂದ ಟಿ20 ವಿಶ್ವಕಪ್‌: ಹಾಲಿ ಚಾಂಪಿಯನ್‌ ಭಾರತಕ್ಕೆ ಶುಭಾರಂಭ ನಿರೀಕ್ಷೆ, ಆದ್ರೆ ಸೂರ್ಯ ಪಡೆಗೆ ಆರಂಭದಲ್ಲೇ ವಿಘ್ನ

Kannadaprabha News   | Kannada Prabha
Published : Feb 07, 2026, 12:15 PM IST
India vs USA T20 World Cup 2026

ಸಾರಾಂಶ

2026ರ ಟಿ20 ವಿಶ್ವಕಪ್‌ನಲ್ಲಿ ಭಾರತವು ಅಮೆರಿಕ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಸತತ ಎರಡು ಬಾರಿ ಟ್ರೋಫಿ ಗೆದ್ದು ದಾಖಲೆ ಬರೆಯುವ ಗುರಿ ಹೊಂದಿರುವ ಭಾರತಕ್ಕೆ, ಆರಂಭಿಕ ಪಂದ್ಯದಲ್ಲಿ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಜ್ವರದಿಂದಾಗಿ ಅಲಭ್ಯರಾಗುವ ಸಾಧ್ಯತೆಯಿದೆ.

ಮುಂಬೈ: ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್‌ಗೆ ಶನಿವಾರ ಚಾಲನೆ ಸಿಗಲಿದ್ದು, ಹಾಲಿ ಚಾಂಪಿಯನ್‌ ಭಾರತ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕದ ಸವಾಲು ಎದುರಿಸಲಿದೆ. ವಿಶ್ವಕಪ್‌ನಲ್ಲಿ ಈ ವರೆಗೂ ಯಾವುದೇ ತಂಡಕ್ಕೆ ಸತತ 2 ಬಾರಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಜೊತೆಗೆ ಯಾವ ದೇಶವೂ ಆತಿಥ್ಯ ವಹಿಸಿದಾಗ ಚಾಂಪಿಯನ್‌ ಆಗಿಲ್ಲ. ಈ ಎರಡೂ ದಾಖಲೆಗಳನ್ನು ಬರೆಯಲು ಪಣತೊಟ್ಟಿರುವ ಭಾರತ, 2011ರಲ್ಲಿ ತಾನು ಏಕದಿನ ವಿಶ್ವಕಪ್ ಗೆದ್ದ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಭಾರತ ಟ್ರೋಫಿ ಗೆಲ್ಲುವ ಫೇವರೇಟ್ ತಂಡ

ಟ್ರೋಫಿ ಗೆಲ್ಲುವ ಫೇವರಿಟ್‌ ಆಗಿ ಭಾರತ ಟೂರ್ನಿಗೆ ಕಾಲಿಡಲಿದೆ. ತಂಡದ ಇತ್ತೀಚನ ಲಯ ಯಾವುದೇ ಎದುರಾಳಿಯನ್ನಾದರೂ ನಡುಗಿಸಲಿದೆ. ಇಶಾನ್‌ ಕಿಶನ್‌ರ ಸೇರ್ಪಡೆ, ತಂಡದ ಬ್ಯಾಟಿಂಗ್‌ ಬಲ ಹೆಚ್ಚಿಸಲಿದ್ದು, ಅಭಿಷೇಕ್‌ ಶರ್ಮಾ ಜೊತೆಗೂಡಿ ಕಿಶನ್‌ ಎದುರಾಳಿಗಳನ್ನು ಚೆಂಡಾಡಲು ಕಾಯುತ್ತಿದ್ದಾರೆ. ಸೂರ್ಯಕುಮಾರ್‌, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ, ರಿಂಕು ಸಿಂಗ್ ಹೀಗೆ ಟಿ20 ತಜ್ಞ ಬ್ಯಾಟರ್‌ಗಳ ದಂಡೇ ಇದೆ. ಬುಮ್ರಾ, ಅರ್ಶ್‌ದೀಪ್‌, ವರುಣ್‌, ಕುಲ್ದೀಪ್‌, ಅಕ್ಷರ್‌ರಂಥ ಅನುಭವಿ ಬೌಲರ್‌ಗಳಿದ್ದು, ತಂಡ ಸಮತೋಲನದಿಂದ ಕೂಡಿದೆ.

ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ?:

ಹೌದು, ಟೀಂ ಇಂಡಿಯಾ ಪ್ರೀಮಿಯರ್ ವೇಗಿ ಜಸ್ಪ್ರೀತ್ ಬುಮ್ರಾ, ಯುಎಸ್‌ಎ ಎದುರಿನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದು ಕೊಂಚ ಅನುಮಾನ ಎನಿಸಿದೆ. ಮೊದಲ ಪಂದ್ಯಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯಕ್ಕೆ ಬುಮ್ರಾಗೆ ರೆಸ್ಟ್ ಸಿಗುವ ಸಾಧ್ಯತೆಯಿದೆ. ಹೀಗಾದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ವೇಗದ ಬೌಲರ್‌ ಆಗಿ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆಯಿದೆ.

ಮೊಹಮ್ಮದ್ ಸಿರಾಜ್, ಈ ಮೊದಲು ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಘೋಷಿಸಿದಾಗ ಸ್ಥಾನ ಪಡೆದಿರಲಿಲ್ಲ. ಆದರೆ ಮೊಣಕಾಲು ಗಾಯದಿಂದ ಹರ್ಷಿತ್ ರಾಣಾ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಭಾರತ ತಂಡ ಕೂಡಿಕೊಂಡಿದ್ದಾರೆ.

ಮತ್ತೊಂದೆಡೆ ಅಮೆರಿಕ ತಂಡದಲ್ಲಿ ಭಾರತೀಯ ಮೂಲದ ಆಟಗಾರರೇ ಹೆಚ್ಚಿದ್ದು, ಪಾಕಿಸ್ತಾನ ಮೂಲದ ಮೂವರಿದ್ದಾರೆ. ಕಳೆದ ಆವೃತ್ತಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿ, ಸೂಪರ್‌-8 ಹಂತಕ್ಕೆ ಪ್ರವೇಶಿಸಿದ್ದ ಅಮೆರಿಕ ಈ ಬಾರಿಯೂ ಗಮನ ಸೆಳೆಯಲು ಎದುರು ನೋಡುತ್ತಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಅಭಿಷೇಕ್‌ ಶರ್ಮಾ, ಇಶಾನ್ ಕಿಶನ್‌, ತಿಲಕ್‌ ವರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ಹಾರ್ದಿಕ್‌ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಅಕ್ಷರ್‌ ಪಟೇಲ್, ಅರ್ಶ್‌ದೀಪ್‌ ಸಿಂಗ್, ಮೊಹಮ್ಮದ್ ಸಿರಾಜ್, ವರುಣ್‌ ಚಕ್ರವರ್ತಿ.

ಅಮೆರಿಕ: ಸಾಯಿತೇಜ, ಆ್ಯಂಡ್ರೆಯೆಸ್‌, ಜಹಂಗೀರ್‌, ಮೊನಾಂಕ್‌(ನಾಯಕ್‌), ಮಿಲಿಂದ್‌, ಹರ್ಮೀತ್‌, ಶುಭಂ, ಮೊಹ್ಸಿನ್‌, ಶ್ಯಾಡ್ಲೆ, ಸೌರಭ್‌, ಅಲಿ ಖಾನ್‌.

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಹಾಟ್‌ ಸ್ಟಾರ್‌

ಇಂದಿನ ಇತರ ಪಂದ್ಯಗಳು

ಪಾಕಿಸ್ತಾನ vs ನೆದರ್‌ಲೆಂಡ್ಸ್‌, ಕೊಲಂಬೊ, ಬೆಳಗ್ಗೆ 11ಕ್ಕೆ

ವೆಸ್ಟ್‌ಇಂಡೀಸ್‌ vs ಸ್ಕಾಟ್ಲೆಂಡ್‌, ಕೋಲ್ಕತಾ, ಮಧ್ಯಾಹ್ನ 3ಕ್ಕೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಟಾರ್ ಕ್ರಿಕೆಟಿಗ ಟಿ20 ವಿಶ್ವಕಪ್‌ನಿಂದ ಔಟ್; DSP ಸಿರಾಜ್‌ಗೆ ಬುಲಾವ್! ಇದರ ನಡುವೆ ಮಾರಕ ವೇಗಿಗೆ ಜ್ವರ!
T20 World Cup: ಟೀಮ್ ಇಂಡಿಯಾಗೆ ಶಾಕಿಂಗ್ ನ್ಯೂಸ್; ಮೊದಲ ಪಂದ್ಯದಿಂದ ಪ್ರಮುಖ ಆಟಗಾರ ಔಟ್