ಗೆಲ್ಲಲು ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಬಾಬರ್ ಅಜಂ 13 ರನ್ ಗಳಿಸಿದಾಗ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಇನ್ನು ಉಸ್ಮಾನ್ ಖಾನ್ 13 ರನ್ ಗಳಿಸಿ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಫಖರ್ ಜಮಾನ್(13) ಹಾಗೂ ಶದಾಬ್ ಖಾನ್‌ಗೆ(4) ಹಾರ್ದಿಕ್ ಪಾಂಡ್ಯ ಪೆವಿಲಿಯನ್ ಹಾದಿ ತೋರಿಸಿದರು.
ನ್ಯೂಯಾರ್ಕ್: ಟೀಂ ಇಂಡಿಯಾ ವೇಗಿಗಳು ಮತ್ತೊಮ್ಮೆ ತಂಡದ ಆಪತ್ಬಾಂಧವರೆನಿಸಿದರು. ಪಾಕಿಸ್ತಾನ ಎದುರು ಕೇವಲ 120 ರನ್‌ಗಳನ್ನು ರಕ್ಷಿಸಿಕೊಳ್ಳುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಬುಮ್ರಾ, ಪಾಂಡ್ಯ ಮಿಂಚಿನ ದಾಳಿಯ ನೆರವಿನಿಂದ ಟೀಂ ಇಂಡಿಯಾ ಬದ್ದ ಎದುರಾಳಿ ಪಾಕಿಸ್ತಾನ ಎದುರು 6 ರನ್ ರೋಚಕ ಜಯ ಸಾಧಿಸಿದೆ. ಈ ಮೂಲಕ 'ಎ' ಗುಂಪಿನಲ್ಲಿ ಭಾರತ ಅಗ್ರಸ್ಥಾನಕ್ಕೇರಿದರೆ, ಪಾಕಿಸ್ತಾನದ ಸೂಪರ್ 8 ಕನಸು ಮತ್ತಷ್ಟು ಕಮರುವಂತೆ ಮಾಡಿದೆ. ಗೆಲ್ಲಲು ಕೇವಲ 120 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 113 ರನ್ ಗಳಿಸಲಷ್ಟೇ ಶಕ್ತವಾಗಿದೆ.
ಗೆಲ್ಲಲು ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಬಾಬರ್ ಅಜಂ 13 ರನ್ ಗಳಿಸಿದಾಗ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಇನ್ನು ಉಸ್ಮಾನ್ ಖಾನ್ 13 ರನ್ ಗಳಿಸಿ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಫಖರ್ ಜಮಾನ್(13) ಹಾಗೂ ಶದಾಬ್ ಖಾನ್‌ಗೆ(4) ಹಾರ್ದಿಕ್ ಪಾಂಡ್ಯ ಪೆವಿಲಿಯನ್ ಹಾದಿ ತೋರಿಸಿದರು.
T20 World Cup 2024: ಪಾಕಿಗಳ ಕರಾರುವಕ್ಕಾದ ದಾಳಿ, ಸಾಧಾರಣ ಮೊತ್ತ ಕಲೆಹಾಕಿದ ಭಾರತ
ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಆಡುವ ಯತ್ನ ನಡೆಸಿದ್ದ ಮೊಹಮ್ಮದ್ ರಿಜ್ವಾನ್ 31 ರನ್ ಗಳಿಸಿ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಅಲ್ಲಿಯವರೆಗೂ ಗೆಲುವಿನ ಆಸೆ ಜೀವಂತವಾಗಿರಿಸಿಕೊಂಡಿದ್ದ ಪಾಕ್, ಆ ಬಳಿಕ ಸೋಲಿನತ್ತ ಮುಖ ಮಾಡಿತು. ಇನ್ನು ಕೊನೆಯಲ್ಲಿ ಇಫ್ತಿಕಾರ್ ಅಹಮದ್ 5 ರನ್ ಗಳಿಸಿ ಬುಮ್ರಾಗೆ ಮೂರನೇ ಬಲಿಯಾದರು. ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲ್ಲಲು 18 ರನ್ ಗಳಿಸಬೇಕಿತ್ತು. ಆದರೆ ಆರ್ಶದೀಪ್ ಸಿಂಗ್ ಕೇವಲ 11 ರನ್ ನೀಡಿ ಭಾರತಕ್ಕೆ ವಿರೋಚಿತ ಗೆಲುವು ತಂದುಕೊಟ್ಟರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಯಿತು. ಕೊಹ್ಲಿ 4 ರನ್ ಗಳಿಸಿದರೆ, ರೋಹಿತ್ ಶರ್ಮಾ 13 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ 42 ಹಾಗೂ ಅಕ್ಷರ್ ಪಟೇಲ್ 20 ರನ್ ಸಿಡಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.