ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಗುಡ್ ನ್ಯೂಸ್, ಐಸಿಸಿ ಪ್ರತಿಷ್ಠಿತ ಪ್ರಶಸ್ತಿ!

By Suvarna News  |  First Published Nov 7, 2022, 4:20 PM IST

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಇದೀಗ ಈ ಮಹತ್ವದ ಹೋರಾಟಕ್ಕೂ ಮುನ್ನ ಕೊಹ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಐಸಿಸಿ ಪ್ರತಿಷ್ಠಿತ ಪ್ರಶಸ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ.
 


ಸಿಡ್ನಿ(ನ.07):  ಟಿ20 ವಿಶ್ವಕಪ್ ಟೂರ್ನಿ ಇದೀಗ ಅಂತಿಮ ನಾಲ್ಕರ ಘಟ್ಟ ತಲುಪಿದೆ. ನವೆಂಬರ್ 9 ರಿಂದ ಸೆಮಿಫೈನಲ್ ಪಂದ್ಯಗಳು ಆರಂಭಗೊಳ್ಳುತ್ತಿದೆ. ನವೆಂಬರ್ 10 ರಂದು ಭಾರತ ಹಾಗೂ ಇಂಗ್ಲೆಂಡ್ ಫೈನಲ್ ಪ್ರವೇಶಕ್ಕೆ ಹೋರಾಟ ನಡೆಸಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಆತ್ಮವಿಶ್ವಾಸ ಡಬಲ್ ಆಗಿದೆ. ಟಿ20 ವಿಶ್ವಕಪ್ ಟೂರ್ನಿ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಕೊಹ್ಲಿ ಅಬ್ಬರದಿಂದ ಟೀಂ ಇಂಡಿಯಾ ಅಧಿಕಾರಯುತವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಅದ್ಭುತ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಇದೀಗ ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 12 ಹಂತದ 5 ಪಂದ್ಯದಲ್ಲಿ ವಿರಾಟ್ ಕೊಹ್ಲಿ 246 ರನ್ ಸಿಡಿಸಿದ್ದಾರೆ ಇದರಲ್ಲಿ 3 ಅರ್ಧಶತಕ ಒಳಗೊಂಡಿದೆ.

ಸತತ ವೈಫಲ್ಯ ಅನುಭವಿಸುವ ಮೂಲಕ ಟೀಕೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ(Virat Kohli) ಇದೀಗ ಅತ್ಯುತ್ತಮ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮೂಲಕ ಟೀಕೆಗಳಿಗೆ ತಮ್ಮ ಪ್ರದರ್ಶನದ ಮೂಲಕ ಉತ್ತರಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯ(T20 World cup Cricket) ಮೊದಲ ಪಂದ್ಯದಲ್ಲಿ ಕೊಹ್ಲಿ ಅಬ್ಬರ ಆರಂಭಗೊಂಡಿದೆ. ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ ಅಜೇಯ 82 ರನ್ ಸಿಡಿಸಿದ್ದರು. ಈ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದ್ದರು. ನವೆಂಬರ್ 5 ರಂದು ಹುಟ್ಟು ಹಬ್ಬ ಆಚರಿಸಿಕೊಂಡ ಕೊಹ್ಲಿಗೆ ಇದೀಗ ಪ್ರಶಸ್ತಿಯೂ ಕೈಸೇರಿದೆ. ಗುರುವಾರ ನಡೆಯಲಿರುವ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ, ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ಸೆಣಸಾಡಲಿದೆ.

Latest Videos

undefined

ಭಾರತ-ಪಾಕಿಸ್ತಾನ ಫೈನಲ್ ಮುಖಾಮುಖಿಗೆ ಇದೆ ಅವಕಾಶ, ಮರುಕಳಿಸುತ್ತಾ 2007ರ ಇತಿಹಾಸ!

ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಗರಿಷ್ಠ ರನ್‌ ಸರದಾರ!
ಭಾರತದ ವಿರಾಟ್‌ ಕೊಹ್ಲಿ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಸರದಾರ ಎನಿಸಿಕೊಂಡಿದ್ದಾರೆ. ಬುಧವಾರ ಬಾಂಗ್ಲಾದೇಶ ವಿರುದ್ಧ ಔಟಾಗದೆ 64 ರನ್‌ ಸಿಡಿಸಿದ ಕೊಹ್ಲಿ ಮೊದಲ ಸ್ಥಾನಕ್ಕೇರಿದರು. ಶ್ರೀಲಂಕಾದ ಮಹೇಲಾ ಜಯವರ್ಧನೆ ಅವರ ದಾಖಲೆಯನ್ನು ವಿರಾಟ್‌ ಮುರಿದರು. ಜಯವರ್ಧನೆ 31 ಪಂದ್ಯಗಳಲ್ಲಿ 1016 ರನ್‌ ಗಳಿಸಿದ್ದರು. ಕೊಹ್ಲಿ ಕೇವಲ 23 ಇನ್ನಿಂಗ್ಸ್‌ಗಳಲ್ಲಿ 88.75ರ ಸರಾಸರಿಯಲ್ಲಿ 1065 ರನ್‌ ಕಲೆಹಾಕಿದ್ದಾರೆ. ಕೊಹ್ಲಿಯಿಂದ 13 ಅರ್ಧಶತಕ ಸಹ ದಾಖಲಾಗಿದೆ. ವಿಂಡೀಸ್‌ನ ಕ್ರಿಸ್‌ ಗೇಲ್‌(965), ಭಾರತದ ನಾಯಕ ರೋಹಿತ್‌ ಶರ್ಮಾ(921) ಕ್ರಮವಾಗಿ 3 ಹಾಗೂ 4ನೇ ಸ್ಥಾನದಲ್ಲಿದ್ದಾರೆ.

1992ರಲ್ಲೂ ಆಗಿತ್ತು ಹೀಗೆ, ಈ ಬಾರಿ ಕಪ್ ಪಾಕಿಸ್ತಾನ ಕೈಗೆ ಎಂದ ಅಭಿಮಾನಿ!

ಕೊಹ್ಲಿ ತಮ್ಮ 34ನೇ ಹುಟ್ಟು ಹಬ್ಬವನ್ನು ಆಸ್ಪ್ರೇಲಿಯಾದಲ್ಲಿ ಆಚರಿಸಿದರು. ಸಹ ಆಟಗಾರರು, ಕೋಚ್‌, ಸಹಾಯಕ ಸಿಬ್ಬಂದಿ ಜೊತೆ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಅವರಿಗೆ ಐಸಿಸಿ, ಬಿಸಿಸಿಐ, ಆರ್‌ಸಿಬಿ, ಸಚಿನ್‌ ತೆಂಡುಲ್ಕರ್‌ ಸೇರಿದಂತೆ ಹಲವು ಮಾಜಿ, ಹಾಲಿ ಆಟಗಾರರು, ಅಪಾರ ಅಭಿಮಾನಿಗಳು ಶುಭಕೋರಿದ್ದಾರೆ. ಬತ್‌ರ್‍ಡೇ ಅಂಗವಾಗಿ ಹೈದರಾಬಾದ್‌ನಲ್ಲಿ ಅಭಿಮಾನಿಗಳು ಕೊಹ್ಲಿಯ ಕಟೌಟ್‌ ಅಳವಡಿಸಿದ್ದು, ಫೋಟೋಗಳು ವೈರಲ್‌ ಆಗಿವೆ.

click me!