T20 World Cup: 500 ಸಿಕ್ಸರ್‌ ಸನಿಹ ರೋಹಿತ್‌, ವಿಶ್ವಕಪ್‌ನ ಗರಿಷ್ಠ ಸ್ಕೋರರ್‌ ಆಗ್ತಾರಾ ಕೊಹ್ಲಿ?

By Santosh Naik  |  First Published Oct 30, 2022, 2:49 PM IST

ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್‌ನಲ್ಲಿ ಟಿ20 ವಿಶ್ವಕಪ್‌ನ ಮಹತ್ವದ ಮುಖಾಮುಖಿಗೆ ಭಾರತ ಸಜ್ಜಾಗಿದೆ. ಇದರ ನಡುವೆ ಭಾರತದ ಮೂರು ಪ್ರಮುಖ ಬ್ಯಾಟ್ಸ್‌ಮನ್‌ಗಳ ಐದು ದಾಖಲೆಗಳನ್ನು ಮಾಡಲು ಸಜ್ಜಾಗಿದ್ದಾರೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಹಾಗೂ ಹಾರ್ದಿಕ್‌ ಪಾಂಡ್ಯ ಎದುರು ಇರುವಂಥ ದಾಖಲೆಗಳ ಪಟ್ಟಿ ಇಲ್ಲಿದೆ.
 


ಪರ್ತ್‌ (ಅ. 30): ಟಿ20 ವಿಶ್ವಕಪ್ ಸೂಪರ್-12 ಹಂತದ ಮೊದಲೆರಡು ಪಂದ್ಯಗಳನ್ನು ಗೆದ್ದು ಅಮೋಘ ಆರಂಭ ಕಂಡಿರುವ ಟೀಂ ಇಂಡಿಯಾ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಭಾರತದ ಆಟಗಾರರು 5 ದೊಡ್ಡ ದಾಖಲೆಗಳನ್ನು ಮಾಡಬಹುದು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ ಇನ್ನೆರಡು ದಾಖಲೆಗಳನ್ನು ದಾಖಲು ಮಾಡುವ ಸನಿಹದಲ್ಲಿದ್ದರೆ  ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಆಗುವ ಹಾದಿಯಲ್ಲಿದ್ದಾರೆ. ಇವರಲ್ಲದೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 3000 ರನ್ ಪೂರೈಸುವ ಸಾಧ್ಯತೆ ಇದೆ. ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ರೋಚಕವಾಗಿ ಬಗ್ಗು ಬಡಿದರೆ, 2ನೇ ಪಂದ್ಯದಲ್ಲಿ ನೆದರ್ಲೆಂಡ್‌ ವಿರುದ್ಧ ಸಲೀಸಾದ ವಿಜಯ ಕಂಡಿತ್ತು. ಆದರೆ, ತಂಡಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧದ ಸವಾಲು ಮುಖ್ಯವಾಗಿದ್ದು, ಗೆಲುವು ಕಂಡಲ್ಲಿ ಸೆಮಿಫೈನಲ್‌ ಸ್ಥಾನ ನಿಶ್ಚಯವಾಗಲಿದೆ. ಭಾನುವಾರದ ಪಂದ್ಯದಲ್ಲಿ ಭಾರತದ ಆಟಗಾರರ ಎದುರಲ್ಲಿರುವ ಐದು ದಾಖಲೆಗಳ ವಿವರಗಳಿವೆ.

28 ರನ್‌ ಬಾರಿಸಿದರೆ, ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ದಾಖಲೆ ಮಾಡ್ತಾರೆ ಕೊಹ್ಲಿ: 2022 ರ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ವಿರುದ್ಧ ಎರಡು ಅರ್ಧ ಶತಕಗಳನ್ನು ಬಾರಿಸಿರುವ ವಿರಾಟ್, ಭಾನುವಾರದ ಪಂದ್ಯದಲ್ಲಿ ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಬಹುದು. ಜಯವರ್ಧನೆ ದಾಖಲೆಯಿಂದ ಕೊಹ್ಲಿ 28 ರನ್‌ಗಳ ದೂರದಲ್ಲಿದ್ದಾರೆ. ಟಿ20 ವಿಶ್ವಕಪ್‌ನ 23 ಪಂದ್ಯಗಳಲ್ಲಿ ವಿರಾಟ್ 90 ರ ಸರಾಸರಿಯಲ್ಲಿ 989 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 132.04 ಆಗಿದೆ. ಅದೇ ಸಮಯದಲ್ಲಿ, ಮಹೇಲಾ ಜಯವರ್ಧನೆ 31 ಪಂದ್ಯಗಳಲ್ಲಿ 39.07 ರ ಸರಾಸರಿಯಲ್ಲಿ 1016 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿಯ ನಂತರದಲ್ಲಿ ಕ್ರಿಸ್‌ ಗೇಲ್‌ ಇದ್ದಾರೆ. ಅವರು 33 ಪಂದ್ಯಗಳಲ್ಲಿ 34.46 ಸರಾಸರಿಯಲ್ಲಿ 965 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 35 ಪಂದ್ಯಗಳಲ್ಲಿ 37.66 ಸರಾಸರಿಯಲ್ಲಿ 904 ರನ್ ಗಳಿಸಿದ್ದಾರೆ.

Tap to resize

Latest Videos

undefined

5 ಸಿಕ್ಸರ್‌ ಬಾರಿಸಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್‌ 500 ಸಿಕ್ಸರ್‌: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಭಾನುವಾರ ದೊಡ್ಡ ದಾಖಲೆಯನ್ನು ನಿರ್ಮಿಸಬಹುದು. ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್‌ 5 ಸಿಕ್ಸರ್ ಬಾರಿಸಿದರೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 500 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಳ್ಳಲಿದ್ದಾರೆ. 483 ಪಂದ್ಯಗಳಿಂದ 553 ಸಿಕ್ಸರ್‌ ಬಾರಿಸಿರುವ ಕ್ರಿಸ್‌ ಗೇಲ್‌ ಅಗ್ರಸ್ಥಾನದಲ್ಲಿದ್ದಾರೆ. 476 ಸಿಕ್ಸರ್‌ ಬಾರಿಸಿರುವ ಶಾಹಿದ್‌ ಅಫ್ರಿದಿ 3ನೇ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಟಿ20ಯಲ್ಲಿ 50 ಕ್ಯಾಚ್‌ ಸನಿಹ ಕೊಹ್ಲಿ: ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 49 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ ಒಂದು ಕ್ಯಾಚ್ ಪಡೆದರೆ, ಅವರ 50 ಕ್ಯಾಚ್‌ಗಳು ಪೂರ್ಣವಾಗಲಿದೆ. ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ರೋಹಿತ್ ಶರ್ಮಾ ಭಾರತ ಪರ 144 ಪಂದ್ಯಗಳಲ್ಲಿ 57 ಕ್ಯಾಚ್‌ಗಳನ್ನು  ಪಡೆದುಕೊಂಡಿದ್ದಾರೆ.

T20 WORLD CUP: ವಿರಾಟ್‌ ಕೊಹ್ಲಿಗೆ ವಿಶ್ವದಾಖಲೆ ನಿರ್ಮಿಸಲು ಬೇಕಿದೆ ಕೇವಲ 28 ರನ್‌..!

3000 ಸಾವಿರ ರನ್‌ ಪೂರೈಸ್ತಾರಾ ಹಾರ್ದಿಕ್‌ ಪಾಂಡ್ಯ:  ಹಾರ್ದಿಕ್ ಪಾಂಡ್ಯ ದಕ್ಷಿಣ ಆಫ್ರಿಕಾ ವಿರುದ್ಧ 53 ರನ್‌ಗಳ ಇನ್ನಿಂಗ್ಸ್ ಆಡಿದರೆ, ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3000 ರನ್ ಪೂರ್ಣಗೊಳಿಸುತ್ತಾರೆ. ಈ ಸಾಧನೆ ಮಾಡಿದ ಭಾರತದ 40ನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಇದೀಗ ಅವರು 152 ಪಂದ್ಯಗಳಲ್ಲಿ 2947 ರನ್ ಗಳಿಸಿದ್ದಾರೆ.

T20 world cup- ಭಾರತ vs ನೆದರ್ಲ್ಯಾಂಡ್ಸ್ ಪಂದ್ಯಕ್ಕೆ ಗ್ಲಾಮರ್ ಸೇರಿಸಿದ ಆಸ್ಟ್ರೇಲಿಯನ್ ಆಂಕರ್

ಗೇಲ್‌ ದಾಖಲೆ ಮುರಿಯಬಹುದು ರೋಹಿತ್‌ ಶರ್ಮ: ದಕ್ಷಿಣ ಆಫ್ರಿಕಾ ವಿರುದ್ಧದ ಇಂದಿನ ಪಂದ್ಯದಲ್ಲಿ ರೋಹಿತ್ 64 ರನ್ ಗಳಿಸಿದರೆ, ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಲಿದ್ದಾರೆ. ರೋಹಿತ್ ಇದುವರೆಗೆ ಆಡಿರುವ 35 ಪಂದ್ಯಗಳಲ್ಲಿ 904 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಗೇಲ್ 33 ಪಂದ್ಯಗಳಲ್ಲಿ 965 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 23 ಪಂದ್ಯಗಳಲ್ಲಿ 989 ರನ್ ಗಳಿಸಿ ಎರಡನೇ ಸ್ಥಾನಲ್ಲಿದ್ದಾರೆ.
 

click me!