T20 World Cup: Aus vs Pak ಆಸ್ಟ್ರೇಲಿಯಾಗೆ ಸ್ಪರ್ಧಾತ್ಮಕ ಟಾರ್ಗೆಟ್‌ ನೀಡಿದ ಪಾಕಿಸ್ತಾನ!

By Suvarna NewsFirst Published Nov 11, 2021, 9:17 PM IST
Highlights

* ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕ್‌-ಆಸೀಸ್ ಕಾದಾಟ
* ಟಾಸ್‌ ಗೆದ್ದ ಫಿಂಚ್ ಪಡೆ : ಬೌಲಿಂಗ್ ಆಯ್ಕೆ‌ 
* 4 ವಿಕೆಟ್‌ ಕಳೆದುಕೊಳ್ಳುವ ಮೂಲಕ ಆಸ್ಟ್ರೇಲಿಯಾಗೆ 177 ರನ್‌ ಗುರಿ ನೀಡಿದ ಪಾಕಿಸ್ತಾನ

ದುಬೈ(ನ.11): ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್‌ ಹಾಗೂ  ಫಖರ್ ಜಮಾನ್ ಸ್ಫೋಟಕ ಬ್ಯಾಟಿಂಗ್  ಮೂಲಕ ಪಾಕಿಸ್ತಾನ 4 ವಿಕೆಟ್‌  ಕಳೆದುಕೊಂಡು 176  ರನ್‌ ಸಿಡಿಸಿದೆ. ಆಸ್ಟ್ರೇಲಿಯಾಗೆ ಫೈನಲ್‌ ತಲುಪಲು ಸ್ಪರ್ಧಾತ್ಮಕ  177   ರನ್‌ ಸಿಡಿಸಬೇಕಿದೆ.

7ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಎರಡನೇ ಸೆಮೀಪೈನಲ್‌ ಪಂದ್ಯದಲ್ಲಿ ಟಾಸ್‌ ಗೆಲ್ಲುವ ಮೂಲಕ  ಆಸ್ಟ್ರೇಲಿಯಾ ನಾಯಕ ಆರನ್ ಫಿಂಚ್ ಬೌಲಿಂಗ್‌ ಆಯ್ಕೆ ಮಾಡಿಕೊಂಡರು.  ಸೆಕೆಂಡ್ ಬ್ಯಾಟಿಂಗ್ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು ಅನ್ನೋದು ಈ ಹಿಂದಿನ ಪಂದ್ಯಗಳಿಂದ ಸಾಬೀತಾಗಿದೆ. ಹೀಗಾಗಿ  ಫಿಂಚ್  ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್ ಆಹ್ವಾನಿಸಿದರು. ಆರಂಭಿಕವಾಗಿ ಕಣಕ್ಕಿಲಿದ ಮೊಹಮದದ್‌ ರಿಜ್ವಾನ್‌ ಹಾಗೂ ಬಾಬರ್‌ ಅಜಮ್‌ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಪವರ್‌ ಪ್ಲೇ ಮುಕ್ತಾಯದ ವೇಳೆಗೆ ಪಾಕಿಸ್ತಾನ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 47 ರನ್‌ ಬಾರಿಸಿತು. 7ನೇ ವೋವರ್‌ ಕೊನೆಯಲ್ಲಿ ಬಾಬರ್‌ ರಿಜ್ವಾನ್‌ ಜೋಡಿ ಅರ್ಧಶತಕದ ಜತೆಯಾಟ ಪೂರೈಸಿತು.  

ಹತ್ತನೇ ಒವರ್‌ ಕೊನೆ ಎಸೆತದಲ್ಲಿ ಬಾಬರ್‌ ಅಜಮ್‌,  ಡೆವಿಡ್‌ ವಾರ್ನರ್‌ಗೆ ಕ್ಯಾಚ್‌ ನೀಡುವ ಮೂಲಕ ವಿಕೆಟ್‌ ಒಪ್ಪಿಸಿದರು. 4 ಬೌಂಡರಿ ಬಾರಿಸಿ 34 ಎಸೆತಗಳಲ್ಲಿ 39 ರನ್‌ ಬಾರಿಸಲು ಬಾಬರ್‌ ಸಫಲರಾದರು. ಹಾಗಾಗಿ 10ನೇ ಓವರ್‌ ಕೊನೆಯಲ್ಲಿ ಪಾಕಿಸ್ತಾನ 1 ವಿಕೆಟ್‌ ಕಳೆದುಕೊಂಡು 71ರನ್‌ ಸಿಡಿಸಿತು. ನಂತರ ಕಣಕ್ಕಿಲಿದ ಫಖರ್ ಜಮಾನ್ ರಿಜ್ವಾನ್‌ಗೆ ಉತ್ತಮ ಜತೆಯಾಟ ನೀಡಿದರು. 14ನೇ ಓವರ ಅಂತ್ಯಕ್ಕೆ ರಿಜ್ವಾನ್‌ 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 

16ನೇ ಓವರ್‌ನಲ್ಲಿ ರಿಜ್ವಾನ್‌, ಫಖರ್‌ ಜೋಡಿ ಅರ್ಧಶತಕದ ಜತೆಯಾಟ ಪೂರೈಸಿತು. ಆದರೆ 17ನೇ ಎರಡನೇ ಎಸೆತದಲ್ಲಿ ರಿಜ್ವಾನ್‌ ಓಟಕ್ಕೆ ಆಸ್ಟ್ರೇಲಿಯಾ ಬ್ರೇಕ್‌ ಹಾಕಿತು. ರಿಜ್ವಾನ್‌ ತಂಡಕ್ಕೆ 52 ಎಸತೆಗಳಲ್ಲಿ 67 ರನ್‌ ಗಳ ಕೊಡುಗೆ ನೀಡಿದರು.  ನಂತರ ಕಣಕ್ಕಿಲಿದ ಆಸಿಫ್ ಅಲಿ ಯಾವುದೇ ರನ್‌ ಗಳಿಸಿದೆ ಡಕೌಟ್‌ ಆದರು. ನಂತರ ಬಂದ ಶೋಯೆಬ್ ಮಲಿಕ್ ಕೇವಲ 1 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.  ಫಖರ್‌ ಅಜೇಯ 55 ರನ್‌ ಸಿಡಿಸುವುದರ ಮೂಲಕ ಪಾಕಿಸ್ತಾನ 4 ವಿಕೆಟ್‌ ಕಳೆದುಕೊಂಡು 176 ರನ್‌  ಗಳಿಸಲು ಸಾಧ್ಯವಾಯಿತು.

ಸೂಪರ್‌-12 ಹಂತದಲ್ಲಿ ಸೋಲು ಕಾಣದ ಏಕೈಕ ತಂಡ

2009ರ ಚಾಂಪಿಯನ್‌ ಪಾಕಿಸ್ತಾನ, ಸೂಪರ್‌-12 ಹಂತದಲ್ಲಿ ಸೋಲು ಕಾಣದ ಏಕೈಕ ತಂಡವಾಗಿದ್ದು, ಆಡಿರುವ ಐದೂ ಪಂದ್ಯಗಳಲ್ಲಿ ಜಯಿಸಿದೆ. ಪಾಕ್‌ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಆಸೀಸ್‌ ಕಾತರಿಸುತ್ತಿದೆ. ಆಸೀಸ್‌ ಪ್ರಧಾನ ಸುತ್ತಿನಲ್ಲಿ ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ಸೋಲುಂಡರೂ ಉಳಿದ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಸೆಮೀಸ್‌ಗೆ ಅರ್ಹತೆ ಪಡೆದಿದೆ. 2010ರ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳ ನಡುವಿನ ಅತೀ ರೋಚಕ ಸೆಮಿಫೈನಲ್‌ ಕಾದಾಟದಲ್ಲಿ ಆಸ್ಪ್ರೇಲಿಯಾ ಗೆದ್ದು ಬೀಗಿತ್ತು. ಈ ಸೋಲಿಗೆ ಸೇಡು ತೀರಿಸಿಕೊಂಡು 3ನೇ ಬಾರಿಗೆ ಫೈನಲ್‌ ಪ್ರವೇಶಿಸುವ ಕಾತರದಲ್ಲಿ ಪಾಕ್‌ ಇದ್ದರೆ, ಚೊಚ್ಚಲ ವಿಶ್ವಕಪ್‌ ಗೆಲ್ಲುವ ಕನಸು ಹೊತ್ತಿರುವ ಆಸೀಸ್‌ 2ನೇ ಬಾರಿ ಫೈನಲ್‌ ಪ್ರವೇಶಿಸಿ ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳಲು ಎದುರು ನೋಡುತ್ತಿದೆ. ಆಸ್ಟ್ರೇಲಿಯಾಗೆ ಫೈನಲ್‌ ತಲುಪಲು ಸ್ಪರ್ಧಾತ್ಮಕ  177   ರನ್‌ ಸೀಡಿಸಬೇಕಿದೆ. 
 

click me!