* ಅಬುಧಾಬಿಯಲ್ಲಿಂದು ಭಾರತ-ನ್ಯೂಜಿಲೆಂಡ್ ಮುಖಾಮುಖಿ
* ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತಕ್ಕೆ ಸೋಲಕು
* ಯಾವ ಹಂತದಲ್ಲಿಯೂ ಪಂದ್ಯ ಬಿಟ್ಟುಕೊಡದ ನ್ಯೂಜಿಲೆಂಡ್
* ನ್ಯೂಜಿಲೆಂಡ್ ಗೆ ಭರ್ಜರಿ ಜಯ
ದುಬೈ(ಅ.31): ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಭಾರತ ((Team India) ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬಿಗಿ ಬೌಲಿಂಗ್ ದಾಳಿ ನಡೆಸಿದ್ದು ಭಾರತ 110 ರನ್ ಗಳಿಸಲು ಮಾತ್ರ ಶಕ್ತವಾಗಿತ್ತು. ಈ ಮೊತ್ತವನ್ನು ಬಹಳ ಸಲೀಸಾಗಿ ಚೇಸ್ ಮಾಡಿದ ನ್ಯೂಜಿಲೆಂಡ್ ಮೊದಲ ಜಯ ಸಂಪಾದನೆ ಮಾಡಿಕೊಂಡಿದೆ.
ಬೌಲಿಂಗ್ ನಲ್ಲಿ ಸಂಘಟಿತ ಪ್ರದರ್ಶನ ನೀಡಿದ್ದ ನ್ಯೂಜಿಲೆಂಡ್ ಭರ್ಜರಿ ಎಂಟು ವಿಕೆಟ್ ಗಳ ಜಯ ಪಡೆದುಕೊಂಡಿದೆ. 5. 3 ಓವರೆf ಗಳು ಬಾಕಿ ಇರುವಂತೆ ಕೀವಿಸ್ ಪಮದ್ಯ ಗೆದ್ದುಕೊಂಡಿದೆ. ಈ ಮೂಲಕ ರನ್ ರೇಟ್ ಸಹ ಹೆಚ್ಚಿಸಿಕೊಂಡಿದೆ.
T20 World Cup: ಟ್ರೆಂಟ್ ಬೌಲ್ಟ್‌ಗೆ ಎಚ್ಚರಿಕೆ ಕೊಟ್ಟ ವಿರಾಟ್ ಕೊಹ್ಲಿ..!
ಟ್ರೆಂಟ್ ಬೋಲ್ಟ್ ಮೂರು ವಿಕೆಟ್ ಪಡೆದುಕೊಂಡು ಭಾರತದ ಬ್ಯಾಟಿಂಗ್ ಶಕ್ತಿಗೆ ಆಘಾತ ನೀಡಿದರು. ಯಾವ ಬೌಲರ್ ಗಳು ಹೆಚ್ಚು ರನ್ ಬಿಟ್ಟುಕೊಡಲಿಲ್ಲ. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯಾ(23) ಮತ್ತು ರವೀಂದ್ರ ಜಡೇಜಾ( 26) ರನ್ ಗಳಿಸಿ ಮೊತ್ತ ಹೆಚ್ಚಿಸುವ ಯತ್ನ ಮಾಡಿದರು. ಆದರೆ ನಿರೀಕ್ಷಿತ ಸ್ಕೋರ್ ದಾಖಲಾಗಲಿಲ್ಲ.
ಪಾಕಿಸ್ತಾನದ ವಿರುದ್ಧ ಬೌಲಿಂಗ್ ವೈಫಲ್ಯದಿಂದ ಭಾರತ ಹತ್ತು ವಿಕೆಟ್ ಗಳ ಅಂತರದ ಸೋಲು ಕಂಡಿತ್ತು. ನ್ಯೂಜಿಲೆಂಡ್ ವಿರುದ್ಧ ಬ್ಯಾಟಿಂಗ್ ವೈಫಲ್ಯದಿಂದ ಸೋಲು ಕಂಡಿದೆ. ಈ ಸೋಲಿನಿಂದ ಟಿ ಟ್ವೆಂಟಿ ವಿಶ್ವಕಪ್ ಸರಣಿಯಲ್ಲಿ ಮುಂದುವರಿಯಲು ಭಾರತ ಹರಸಾಹಸ ಮಾಡಬೇಕಾಗಿ ಬಂದಿದೆ. ಭಾರತ ಮುಂದಿನ ಪಂದ್ಯವನ್ನು ಅಫ್ಘನ್ ವಿರುದ್ಧ ಆಡಲಿದೆ.
ಟಾಸ್ ಸೋಲು ಮತ್ತು ಭಾರತೀಯ ಬ್ಯಾಟ್ಸ್ ಮನ್ ಗಳು ಆಯ್ಕೆ ಮಾಡಿಕೊಂಡ ಶಾಟ್ ಸೆಲೆಕ್ಷನ್ ಭಾರತದ ಸೋಲಿಗೆ ಕಾರಣವಾಯಿತು ಎಂದು ಹೇಳಬಹುದು.