ಸೂರ್ಯಗೆ ಆದ ಅನುಭವ ಅಯ್ಯರ್‍‌ಗೆ ಪಾಠ ಆಗಬೇಕು, ತಿದ್ದಿಕೊಳ್ಳದಿದ್ದರೆ ಶ್ರೇಯಸ್‌ಗೂ ಅದೇ ಗತಿ

Published : Oct 31, 2026, 09:04 PM IST
Shreyas iyer captainncy win record

ಸಾರಾಂಶ

ಟೀಂ ಇಂಡಿಯಾದ ಟಿ20 ನಾಯಕ ಶ್ರೇಯಸ್ ಅಯ್ಯರ್ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದರೂ, ಅವರ ಕಳಪೆ ಬ್ಯಾಟಿಂಗ್ ಫಾರ್ಮ್ ಆತಂಕ ಸೃಷ್ಟಿಸಿದೆ. ಈ ಹಿಂದೆ ಸೂರ್ಯಕುಮಾರ್ ಯಾದವ್ ಕೂಡ ನಾಯಕರಾಗಿದ್ದಾಗ ಕಳಪೆ ಫಾರ್ಮ್‌ನಿಂದ ಸ್ಥಾನ ಕಳೆದುಕೊಂಡಿದ್ದರು. ಇದೀಗ ಅಯ್ಯರ್ ಕೂಡ ತಮ್ಮ ಬ್ಯಾಟಿಂಗ್ ಸುಧಾರಿಸಿಕೊಳ್ಳದಿದ್ದರೆ ಅದೇ ಗತಿ ಎದುರಿಸಬೇಕಾಗಬಹುದು.

ಶ್ರೇಯಸ್‌ ಅಯ್ಯರ್ ಟೀಂ ಇಂಡಿಯಾದ ಟಿ20 ಕ್ಯಾಪ್ಟನ್ ಆದ ಮೇಲೆ ಆರಂಭದಲ್ಲಿ ಪಂದ್ಯ ಗೆಲ್ಲಿಸಿಕೊಡುವಲ್ಲಿ ವಿಫಲರಾದರು. ಪ್ರಸ್ತುತ ಗೆಲುವಿನ ವಿಚಾರದಲ್ಲಿ ಅವರ ನೇತೃತ್ವದ ತಂಡ ಒಂದು ಲಯ ಕಂಡುಕೊಂಡಿದೆ. ಆದರೆ ಶ್ರೇಯಸ್ ಅ್ಯಯ್ಯರ್ ಹೊಸದೊಂದು ತಲೆನೋವು ಎದುರಿಸುತ್ತಿದ್ದಾರೆ. ಅದು ಕಂಟಿನ್ಯೂ ಆದರೆ.. ಈ ಹಿಂದಿನ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಆದ ಗತಿಯೇ ಆದರೂ ಅಚ್ಚರಿ ಇಲ್ಲ.

ಪ್ರಸ್ತುತ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 3-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಅಯ್ಯರ್ ಅವರ ವೈಯಕ್ತಿಕ ಸ್ಕೋರ ಅಂತಾ ಬಂದಾಗ ಡಮ್ಮಿ ಆಗಿ ಕಾಣ್ತಿದ್ದಾರೆ. ಅವರು ನ್ಯೂಜಿಲೆಂಡ್ ವಿರುದ್ಧ ಆಡಿದ ನಾಲ್ಕು ಇನ್ನಿಂಗ್ಸ್‌ನಲ್ಲೂ 76 ರನ್‌ಗಳಿಸಿದ್ದಾರೆ. ಇತ್ತೀಚೆಗಿನ ಅವರ ರನ್ ಚಿಂತಾಜನಕವಾಗಿದೆ.

ಸೂರ್ಯಗೆ ಆಗಿದ್ದೂ ಇದೇ..

ಈ ಹಿಂದೆ ಸೂರ್ಯಕುಮಾರ್ ಯಾದವ್ ಟಿ20 ತಂಡಕ್ಕೆ ನಾಯಕರಾಗಿದ್ದರು. ಅವರು ಅನೇಕ ಸರಣಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಟೀಂ ಇಂಡಿಯಾಗೆ ವಿಶ್ವಕಪ್ ಕೂಡ ಗೆಲ್ಲಿಸಿಕೊಟ್ಟಿದ್ದಾರೆ. ಆದರೆ.. ನಾಯಕರಾಗಿ ಅವರ ಬ್ಯಾಟಿಂಗ್ ಫಾರ್ಮ್ ಮಾತ್ರ ಪಾತಾಳಕ್ಕೆ ಕುಸಿದಿತ್ತು. ಅವರು ಯಾವುದೇ ಕಳಪೆ ಬ್ಯಾಟಿಂಗ್ ಫಾರ್ಮ್‌ನಿಂದ ಮುಂದೊಂದು ದಿನ ತಂಡದಲ್ಲಿ ಸ್ಥಾನವನ್ನೇ ಕಳೆದುಕೊಂಡು ಬಿಟ್ಟರು. ಇದೀಗ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಫಾರ್ಮ್‌ ಕೂಡ ಅದೇ ಚರ್ಚೆಯನ್ನ ಹುಟ್ಟಿಹಾಕಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ಅವರು ಈಗಿನಿಂದಲೇ ಎಚ್ಚೆತ್ತುಕೊಂಡು ಬ್ಯಾಟಿಂಗ್ ಸುಧಾರಿಸಿಕೊಳ್ಳಬೇಕು ಎಂಬ ಟೀಕೆಗಳು ಶುರುವಾಗಿವೆ.

ನಾಯಕರಾಗಿ ಅಯ್ಯರ್ ಬ್ಯಾಟಿಂಗ್

ಟೀಂ ಇಂಡಿಯಾ ನಾಯಕನಾದ ಮೇಲೆ ಅಯ್ಯರ್ ಇಲ್ಲಿಯವರೆಗೆ 25 ಪಂದ್ಯಗಳನ್ನ ಮುನ್ನಡೆಸಿದ್ದಾರೆ. 25 ಪಂದ್ಯಗಳಲ್ಲಿ ಅವರು 666 ರನ್‌ಗಳಿಸಿದರು. ಸರಾಸರಿ 26.58. ಇನ್ನು ಇಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ 218 ರನ್‌ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸಿರೀಸ್‌ನಲ್ಲಿ 54.5 ಸರಾಸರಿ ಆಗಿದೆ. ವಿಂಡೀಸ್‌ ವಿರುದ್ಧದ ಐದು ಟಿ20 ಪಂದ್ಯಗಳಲ್ಲಿ 181 ರನ್‌ಗಳಿಸಿದ್ದರು. ಇದರಲ್ಲಿ ಒಂದು ಅಜೇಯ ಶತಕ ಕೂಡ ಸೇರಿತ್ತು. ಇನ್ನು ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳಲ್ಲಿ 80 ರನ್‌ಗಳಿಸಿದರು. ಐರ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಕೇವಲ 13 ರನ್ ಅಫ್ಘಾನಿಸ್ತಾನದ ವಿರುದ್ಧದ ಮೂರು ಪಂದ್ಯಗಳಲ್ಲಿ 48 ರನ್‌ಗಳಿಸಿದರು.

ಪಾಕಿಸ್ತಾನದ ವಿರುದ್ಧ ಒಂದು ಪಂದ್ಯದಲ್ಲಿ 21 ರನ್‌ಗಳಿಸಿದ್ರೆ, ಶ್ರೀಲಂಕಾ ವಿರುದ್ಧ 13 ರನ್, ಜಪಾನ್ ವಿರುದ್ಧ 16 ರನ್‌ಗಳಿಸಿದರು. ಅಂದರೆ ಕೆಲವು ಸರಣಿಗಳಲ್ಲಿ ಉತ್ತಮವಾಗಿ ಆಡಿದರೂ, ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಂಡುಕೊಳ್ಳಲು ಕಷ್ಟಪಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಈಗಾಗಲೇ 3-1 ಅಂತರದಿಂದ ಮುನ್ನಡೆ ಸಾಧಿಸಿರುವುದರಿಂದ, ತಂಡದ ಪ್ರದರ್ಶನದ ವಿಷಯದಲ್ಲಿ ಅಯ್ಯರ್ ಸ್ವಲ್ಪ ನಿರಾಳವಾಗಿದ್ದಾರೆ. ಆದರೆ ನಾಯಕನಾಗಿ ಮುಂದುವರಿಯಲು.. ತಂಡದ ಗೆಲುವಿನಲ್ಲಿ ಮಾತ್ರವಲ್ಲದೆ ಅವರ ವೈಯಕ್ತಿಕ ಪ್ರದರ್ಶನದಲ್ಲೂ ಸುಧಾರಣೆ ಸಾಧಿಸಬೇಕಾಗಿದೆ. ಸೂರ್ಯಕುಮಾರ್ ಪ್ರಕರಣದಲ್ಲಿ ಸಂಭವಿಸಿದಂತೆ.. ಅಯ್ಯರ್ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

21 ವರ್ಷಗಳಿಂದ ಧೋನಿ ದಾಖಲೆ ಹಾಗೆಯೇ ಇದೆ, ಯಾವ ಕ್ರಿಕೆಟ್ ದೈತ್ಯರಿಂದಲೂ ಬ್ರೇಕ್ ಮಾಡಲು ಆಗಿಲ್ಲ
IPL 2027: ಪಂಜಾಬ್ ಕಿಂಗ್ಸ್ ತಂಡದಲ್ಲಿ ಮೇಜರ್ ಸರ್ಜರಿ, ಮಿನಿ ಹರಾಜಿಗೂ ಮುನ್ನ ಈ ಐವರಿಗೆ ಗೇಟ್‌ಪಾಸ್..! ಲಿಸ್ಟ್‌ನಲ್ಲಿ ಅಚ್ಚರಿ ಹೆಸರು