
ಸೂರ್ಯಕುಮಾರ್ ಯಾದವ್ ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. ಐದು ವರ್ಷಗಳ ಕಾಲ ಟೀಂ ಇಂಡಿಯಾದ ಭಾಗವಾಗಿದ್ದ ಅವರನ್ನು ಬಿಸಿಸಿಐ ದಿಢೀರ್ ಕೈಬಿಟ್ಟು ಶಾಕ್ ನೀಡಿತು. ಇದರಿಂದ ಸೂರ್ಯ ಅನುಭವಿಸಿದ ಮುಜುಗರ ಅಷ್ಟಿಷ್ಟಲ್ಲ. ತಾವು ಎಂಥ ನೋವು ಅನುಭವಿಸಿದೆ ಎಂಬುದನ್ನು ಅವರ ಇತ್ತೀಚೆಗಿನ ಮಾತುಗಳಿಂದಲೇ ಅರ್ಥ ಆಗ್ತಿದೆ.
ಹಾಗಿದ್ದೂ ಸೂರ್ಯ ಬದುಕಿನ ಭರವಸೆಗಳನ್ನು ಕಳೆದುಕೊಂಡಿಲ್ಲ. ಪ್ರತಿ ಕಷ್ಟದ ನಂತರ ಒಳ್ಳೆಯ ಸಮಯಗಳು ಬಂದೇ ಬರುತ್ತವೆ ಎಂಬುವುದನ್ನ ಅರಿತುಕೊಂಡಿದ್ದಾರೆ. ಇದೀಗ ಮತ್ತೆ ಟೀಂ ಇಂಡಿಯಾಗೆ ಪುನರ್ ಆಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ನಾಗ್ಪುರದಲ್ಲಿ ಮಾತನ್ನಾಡಿರುವ ಸೂರ್ಯ, ಟೀಂ ಇಂಡಿಯಾದಿಂದ ದೂರ ಇರೋದು ತುಂಬಾ ನೋವಿನ ಸಂಗತಿ ಎಂದಿದ್ದಾರೆ.
ಖಂಡಿತ, ಟೀಂ ಇಂಡಿಯಾದಿಂದ ದೂರ ಇರೋದು ತುಂಬಾ ನೋವಿನ ಸಂಗತಿ. ನೀವು ಐದು ವರ್ಷಗಳ ಕಾಲ ಟೀಂ ಇಂಡಿಯಾದ ಭಾಗವಾಗಿ ನಿರಂತರವಾಗಿ ಕ್ರಿಕೆಟ್ ಆಡುತ್ತಿರಿ. ನಂತರ ಇದ್ದಕ್ಕಿದ್ದಂತೆ ಆಡಲು ಸಾಧ್ಯವಾಗುವುದಿಲ್ಲ. ಇದು ತುಂಬಾ ನೋವು ಉಂಟುಮಾಡುತ್ತದೆ. ಆಟವೂ ಹಾಗೆಯೇ ಮಾಡುತ್ತದೆ. ನನಗೆ ಕಳೆದ ಎರಡು ವರ್ಷಗಳಲ್ಲಿ ಆಟವು ತುಂಬಾ ಕಲಿಸಿದೆ. ಸುರಂಗದ ಕೊನೆಯಲ್ಲಿ ಯಾವಾಗಲೂ ಬೆಳಕು ಇದ್ದೇ ಇರುತ್ತದೆ. ಬದುಕು ಕತ್ತಲೆಯಿಂದ ಹೊರಗೆ ಬರಲೇಬೇಕು. ಅಲ್ಲಿವರೆಗೆ ನಮ್ಮ ಆಟ, ಪ್ರಯತ್ನ ಮುಂದುವರಿಯಬೇಕು ಎಂದಿದ್ದಾರೆ.
ಐಪಿಎಲ್ ಬಗ್ಗೆ ಯೋಚಿಸ್ತಿಲ್ಲ-ಸೂರ್ಯ
ಪ್ರಸ್ತುತ ಸೂರ್ಯಕುಮಾರ್ ಯಾದವ್ ಅವರು ಮುಂಬೈ ಪರ ದೇಶಿಯ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಐಪಿಎಲ್ ಬಗ್ಗೆ ಹೆಚ್ಚು ಯೋಚನೆ ಮಾಡಿಲ್ಲವಂತೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಆಡುವುದು, ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚುವುದು ಜೊತೆಗೆ ರಣಜಿ ತಂಡಗಳಲ್ಲಿ ಭಾಗಿಯೋದು ನನ್ನ ಪ್ಲಾನ್ ಎಂದಿದ್ದಾರೆ. ಈ ಎಲ್ಲಾ ಟೂರ್ನಿಗಳಲ್ಲಿ ಬರುವ ಸೂಪರ್ ಲೀಗ್‌ಗಳನ್ನ ಗೆಲ್ಲುವುದು ಹಾಗೂ ಫೈನಲ್ ಆಡುವುದು ನನ್ನ ಏಕೈಕ ಗುರಿ. ನಾನು ಇದರ ಮೇಲೆ ಹೆಚ್ಚು ಕೇಂದ್ರಿಕರಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ತಮ್ಮ ಬ್ಯಾಟಿಂಗ್ ಶೈಲಿಯನ್ನು ಸಮರ್ಥಿಸಿಕೊಂಡಿರುವ ಅವರು, ಕಳೆದ ಎರಡು ವರ್ಷಗಳಿಂದ ಬ್ಯಾಟಿಂಗ್‌ನಲ್ಲಿ ನಾನು ಸ್ಥಿರವಾಗಿ ಪ್ರದರ್ಶನ ನೀಡುತ್ತಿದ್ದೇನೆ. ದೇಶಕ್ಕಾಗಿ ಆಡುವಾಗ ಯಾವ ರೀತಿ ಬ್ಯಾಟಿಂಗ್ ಮಾಡುತ್ತಿದ್ದೇನೋ ಅದೇ ರೀತಿ ಕಂಟಿನ್ಯೂ ಆಗಿದೆ. ಈಗ ಮುಂಬೈ ಪರ ಬ್ಯಾಟಿಂಗ್ ಮಾಡುವಾಗಲೂ ನನಗೆ ಯಾವುದೇ ವ್ಯತ್ಯಾಸ ಆಗಿಲ್ಲ.ಕಳೆದ ಹತ್ತು ವಾರಗಳಿಂದ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದೇನೆ ಎಂದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೂರ್ಯಕುಮಾರ್ ಯಾದವ್ ಎರಡು ಅರ್ಧ ಶತಕಗಳನ್ನ ಬಾರಿಸಿ ಹೊಸ ಭರವಸೆ ಮೂಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.