ಗಣಿತದಲ್ಲಿ ನಾನು ವೀಕ್, ಮಗಳು ಪ್ರಶ್ನೆ ಕೇಳಿದರೆ ಖೇಲ್ ಖತಂ ಎಂದ ವಿರಾಟ್ ಕೊಹ್ಲಿ!

Published : Mar 31, 2023, 07:44 PM IST
ಗಣಿತದಲ್ಲಿ ನಾನು ವೀಕ್, ಮಗಳು ಪ್ರಶ್ನೆ ಕೇಳಿದರೆ ಖೇಲ್ ಖತಂ ಎಂದ ವಿರಾಟ್ ಕೊಹ್ಲಿ!

ಸಾರಾಂಶ

ವಿರಾಟ್ ಕೊಹ್ಲಿ ಹಾಗೂ  ಸುನಿಲ್ ಚೇತ್ರಿ ಕ್ರೀಡೆ ಹಾಗೂ ಜೀವನದ ಕುರಿತು ಮಹತ್ವದ ಪಾಠಗಳನ್ನ ಹೇಳಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ರೀಡಾ ದಿಗ್ಗಜರು ಹಲವು ರೋಚಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ ತಮ್ಮ ಗಣಿತ ಅಧ್ಯಯನ ಹಾಗೂ ಭವಿಷ್ಯದಲ್ಲಿ ಮಗಳಿಂದ ಎದುರಾಗಬಹುದಾದ ಬೌನ್ಸರ್ ಕುರಿತು ರೋಚಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 

ಬೆಂಗಳೂರು(ಮಾ.31): ಗಣಿತ ವಿಷಯದಲ್ಲಿ ನಾನು ಬಹಳ ವೀಕ್. ನನಗೆ ಶಾಲಾ ದಿನಗಳಲ್ಲಿ ಗಣಿತ ವಿಷಯ ಅರ್ಥವೇ ಆಗುತ್ತಿರಲಿಲ್ಲ. ಇದೀಗ ನನ್ನ ಚಿಂತೆ ಅದಲ್ಲ. ಮುಂದೆ ನನ್ನ ಮಗಳು ಗಣಿತ ಪ್ರಶ್ನೆ ಕೇಳಿದರೆ ಉತ್ತರಿಸುವುದು ಹೇಗೆ ಅನ್ನೋ ಚಿಂತೆ ಶುರುವಾಗಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪುಮಾ ಇಂಡಿಯಾ ಆಯೋಜಿಸಿದ್ದ 'ಲೆಟ್ ದೇರ್ ಬಿ ಸ್ಪೋರ್ಟ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಹಲವು ರೋಚಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. 
 
ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಫುಟ್ಬಾಲ್ ದಿಗ್ಗಜ ಸುನಿಲ್ ಛೇತ್ರಿ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವ್ಯಾಪಕ ಮಟ್ಟದಲ್ಲಿ ಕ್ರೀಡೆ ಮತ್ತು ಫಿಟ್ನೆಸ್ಗೆ ಆದ್ಯತೆ ನೀಡುವ ಮತ್ತು ದೇಶದ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮದಲ್ಲಿ ಅದನ್ನು ಒಂದು ಸಂಬಂಧಿತ ವಿಷಯವಾಗಿ ಸೇರಿಸುವ ಅಗತ್ಯವನ್ನು ಇವರು ಒತ್ತಿ ಹೇಳಿದರು.ಈ ವೇಳೆ ಮಾತನಾಡಿದ ವಿರಾಟ್ ಕೊಹ್ಲಿ ನನಗೆ ಕ್ರೀಡೆ ಬೇಡ, ವಿದ್ಯಭ್ಯಾಸದ ಕಡೆಗೆ ಗಮನ ನೀಡು ಎಂದು ಒತ್ತಾಯ ಮಾಡಿಲ್ಲ. ಪೋಷಕರು ನನ್ನ ಆಯ್ಕೆಯನ್ನು ಗೌರವಿಸಿ ಬೆಂಬಲಿಸಿದ್ದರು. ನಾನು ಅಧ್ಯಯನ ಹಾಗೂ ಕ್ರೀಡೆ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ.

ಐಪಿಎಲ್ 2023 ಅದ್ಧೂರಿ ಚಾಲನೆ, ಅರ್ಜಿತ್, ರಶ್ಮಿಕಾ, ತಮನ್ನ ಮೋಡಿಗೆ ಫ್ಯಾನ್ಸ್ ಫಿದಾ!

ತರಗತಿಯಲ್ಲಿ ಗಣಿತ ವಿಚಾರ ಕೊಂಚ ಅಳುಕು. ಕಾರಣ ಅರ್ಥವಾಗುತ್ತಿರಲಿಲ್ಲ. ನನ್ನ ಮಗಳು ಶಾಲೆ ಆರಂಭಿಸಿದ ಬಳಿಕ ಅವಳು ಕೇಳುವ ಗಣಿತದ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದು ಹೇಗೆ? ನನಗೆ ಗಣಿತ ಅರ್ಥವಾಗಿಲ್ಲ, ನಾನು ಉತ್ತರ ಹೇಗೆ ಕೊಡಲಿ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿ ಕಲಿಕೆ ಹಾಗೂ ಕ್ರೀಡೆಯಲ್ಲಿ ಗಮನಕೇಂದ್ರೀಕರಿಸಬೇಕು ಎಂದು ಕೊಹ್ಲಿ ಹೇಳಿದ್ದಾರೆ.

ಪುಮಾ ಇಂಡಿಯಾ ಮತ್ತು ಆಗ್ನೇಯ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿ ಅವರು ನಿರೂಪಿಸಿದ ಸಂವಾದದಲ್ಲಿಸಂವಾದದಲ್ಲಿ, ಕೊಹ್ಲಿ ಮತ್ತು ಛೇತ್ರಿ ತಮ್ಮ ಕ್ರೀಡಾ ಜೀವನದ ಸ್ಪೂರ್ತಿದಾಯಕ ಕಥೆಗಳನ್ನು ಹೇಳಿಕೊಂಡರು. ದೈನಂದಿನ ಜೀವನದ ಭಾಗವಾಗಿ ಕ್ರೀಡೆ ಮತ್ತು ಫಿಟ್ನೆಸ್ ಅನ್ನು ಸೇರಿಸಿಕೊಳ್ಳಲು ಬಯಸುವವರಿಗೆ ಮಹತ್ವದ ಮಾರ್ಗದರ್ಶನ ಇದಾಗಿದೆ.

ಕ್ರೀಡೆ ಮತ್ತು ಫಿಟ್ನೆಸ್ ಯಾವಾಗಲೂ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ.  ಪುಮಾ ಹಮ್ಮಿಕೊಂಡಿರುವ ಲೆಟ್ ದೇರ್ ಬಿ ಸ್ಪೋರ್ಟ್ ಕಾನ್ಕ್ಲೇವ್ನ ಭಾಗವಾಗಲು ನನಗೆ ಸಂತೋಷವಾಗಿದೆ. ಈ ವೇದಿಕೆಯಲ್ಲಿ ಇಂದು ಹಂಚಿಕೊಂಡ ವಿವರಗಳು, ಫಿಟ್ನೆಸ್ ಅನ್ನು ಜೀವನದ ಧ್ಯೇಯವನ್ನಾಗಿ ಮಾಡಿಕೊಳ್ಳಲು ರಾಷ್ಟ್ರವನ್ನು ಪ್ರೇರೇಪಿಸುತ್ತವೆ ಎಂದು ನಮಗೆ ವಿಶ್ವಾಸವಿದೆ. ಜನರೊಂದಿಗೆ ಆಳವಾಗಿ ತೊಡಗಿಸಿಕೊಳ್ಳಲು, ಪ್ರವರ್ಧಮಾನಕ್ಕೆ ಬರುತ್ತಿರುವ ಕ್ರೀಡಾ ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಲು, ಸದೃಢ ಭಾರತವನ್ನು ಅಭಿವೃದ್ಧಿಪಡಿಸಲು ನಾವು ಮಹತ್ವ ಪ್ರತಿಜ್ಞೆ ಮಾಡಿದ್ದೇವೆ ಎಂದರು. 

10ನೇ ಕ್ಲಾಸ್‌ ಅಂಕಪಟ್ಟಿ ಹಂಚಿಕೊಂಡ ಕೊಹ್ಲಿ! ವಿರಾಟ್‌ SSLC ಯಲ್ಲಿ ಪಡೆದ ಸ್ಕೋರ್ ಎಷ್ಟು?

ಭಾರತ ದೊಡ್ಡ ದೇಶ ಮತ್ತು ಜಾಗತಿಕ ಕ್ರೀಡಾ ಸೂಪರ್ ಪವರ್ ಆಗಲು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ,ಆ ನಿಟ್ಟಿನಲ್ಲಿ ಮಹತ್ವದ ಸಾಧನೆಗೆ ನಾವು ಕ್ರೀಡೆಯಲ್ಲಿ ಭಾಗವಹಿಸುವಿಕೆ ಮತ್ತು ಫಿಟ್ನೆಸ್ ಅನ್ನು ಹವ್ಯಾಸಕ್ಕೆ ಸಂಕುಚಿತಗೊಳಿಸುವ ಬದಲು ದೈನಂದಿನ ಜೀವನದ ಅತ್ಯಗತ್ಯ ಅಭ್ಯಾಸವಾಗಿ ಪರಿಗಣಿಸಬೇಕಾಗಿದೆ. ಕ್ರೀಡೆಯು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸುತ್ತದೆ ಮತ್ತು ವ್ಯಕ್ತಿಯ ಮನೋಭಾವವನ್ನು ಧನಾತ್ಮಕವಾಗಿ ಪ್ರಭಾವಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿಯೊಬ್ಬರೂ ಆಟವಾಡುವುದನ್ನು ಮತ್ತು ವ್ಯಾಯಾಮವನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕೆಂದು ನಾನು ಕೇಳಿಕೊಳ್ಳುತ್ತೇನೆ ಎಂದು ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೇತ್ರಿ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana