ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವು ಸಂಪೂರ್ಣ ಬಿಗಿ ಹಿಡಿತ ಸಾಧಿಸಿದೆ. ಇನ್ನು 8 ವಿಕೆಟ್ ಕಬಳಿಸಿದರೆ ಟೆಸ್ಟ್ ಸರಣಿ ಇಂಗ್ಲೆಂಡ್ ಪಾಲಾಗಲಿದೆ. ಈ ಕುರಿತಾದ ಒಂದು ರಿಫೋರ್ಟ್ ಇಲ್ಲಿದೆ ನೋಡಿ
ಮ್ಯಾಂಚೆಸ್ಟರ್(ಜು.27): ಅನುಭವಿ ವೇಗೆ ಸ್ಟುವರ್ಟ್ ಬ್ರಾಡ್ ಮಾರಕ ದಾಳಿ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ರೋರಿ ಬರ್ನ್ಸ್ ಅವರ ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡವು ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂತ್ಯದ ವೇಳೆಗೆ ವೆಸ್ಟ್ ಇಂಡೀಸ್ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ. ಇನ್ನು ಇನ್ನು ವಿಂಡೀಸ್‌ನ 8 ವಿಕೆಟ್ ಕಬಳಿಸಿದರೆ ನಿರ್ಣಾಯಕ ಟೆಸ್ಟ್ ಪಂದ್ಯ ಇಂಗ್ಲೆಂಡ್ ಪಾಲಾಗಲಿದೆ.
ಹೌದು, ಮೊದಲ ಇನಿಂಗ್ಸ್‌ನಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ (6-31) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪ್ರವಾಸಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ನಿರ್ಣಾಯಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದೆ. 3ನೇ ದಿನವಾದ ಭಾನುವಾರ 6 ವಿಕೆಟ್‌ಗೆ 137 ರನ್‌ಗಳಿಂದ ಇನ್ನಿಂಗ್ಸ್ ಮುಂದುವರಿಸಿದ ವಿಂಡೀಸ್ 197 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಹೋಲ್ಡರ್ (46) ಗರಿಷ್ಠ ಸ್ಕೋರರ್ ಎನಿಸಿದರು.
undefined
ಒಟ್ಟಾರೆ 172 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಚಹಾ ವಿರಾಮಕ್ಕೆ ವಿಕೆಟ್ ನಷ್ಟವಿಲ್ಲದೇ 86 ರನ್‌ಗಳಿಸಿತ್ತು. ಬಳಿಕ ರೋರಿ ಬರ್ನ್ಸ್ ಹಾಗೂ ಡಾಮಿನಿಕ್ ಸಿಬ್ಲಿ ಜೋಡಿ ಮೊದಲ ವಿಕೆಟ್‌ಗೆ 114 ರನ್‌ಗಳ ಶತಕದ ಜತೆಯಾಟವಾಡಿತು. ಈ ವೇಳೆ 56 ರನ್ ಗಳಿಸಿದ್ದ ಸಿಬ್ಲಿಯನ್ನು ನಾಯಕ ಹೋಲ್ಡರ್ ಪೆವಿಲಿಯನ್ನಿಗಟ್ಟಿದರು. ನಂತರ ಚುರುಕಿನ ಆಟಕ್ಕೆ ಮೊರೆಹೋದ ಇಂಗ್ಲೆಂಡ್ ನಾಯಕ ಜೋ ರೂಟ್(68 ರನ್ 56 ಎಸೆತ) ಹಾಗೂ ರೋರಿ ಬರ್ನ್ಸ್(90) ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು. ಶತಕದ ಅಂಚಿನಲ್ಲಿ ಬರ್ನ್ಸ್ ವಿಕೆಟ್ ಒಪ್ಪಿಸಿದರು. ಬರ್ನ್ಸ್ ವಿಕೆಟ್ ಒಪ್ಪಿಸಿದಾಗ ಇಂಗ್ಲೆಂಡ್ ತಂಡ 226 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಇಂಗ್ಲೆಂಡ್‌ಗೆ ಗೆಲ್ಲಲು 399ರನ್‌ಗಳ ಗುರಿ ನೀಡಿದೆ.
ICC ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಸೂಕ್ತ ಎಂದ ಕುಮಾರ ಸಂಗಕ್ಕಾರ
ಇನ್ನು ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಮತ್ತೊಮ್ಮೆ ಆರಂಭಿಕ ಆಘಾತ ಅನುಭವಿಸಿದೆ. ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿದ್ದ ಬ್ರಾಡ್ ಇದೀಗ ಎರಡನೇ ಇನಿಂಗ್ಸ್‌ನಲ್ಲಿ ಮತ್ತೆರಡು ವಿಕೆಟ್ ಕಬಳಿಸಿದ್ದಾರೆ. ಈಗಾಗಲೇ ಜಾನ್ ಕ್ಯಾಂಬೆಲ್ ಹಾಗೂ ನೈಟ್ ವಾಚ್‌ಮನ್ ಕೀಮರ್ ರೋಚ್ ಪೆವಿಲಿಯನ್ ಸೇರಿದ್ದು, ಕ್ರೆಗ್ ಬ್ರಾಥ್‌ವೇಟ್ ಹಾಗೂ ಶಾಯ್ ಹೋಮ್ ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೂರನೇ ದಿನದಾಟದಂತ್ಯಕ್ಕೆ ವಿಂಡೀಸ್ ತಂಡ 2 ವಿಕೆಟ್ ಕಳೆದುಕೊಂಡು 10 ರನ್ ಗಳಿಸಿದ್ದು, ಗೆಲ್ಲಲು ಇನ್ನು 389 ರನ್‌ಗಳ ಅವಶ್ಯಕತೆಯಿದೆ.
ಸ್ಕೋರ್: ಇಂಗ್ಲೆಂಡ್ 369 ಮತ್ತು 226/2 ಡಿಕ್ಲೇರ್
ವಿಂಡೀಸ್ 197/10/ ಮತ್ತು 10/2