ಏಷ್ಯಾಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಸೋಲು ಕಂಡ ಬೆನ್ನಲ್ಲಿಯೇ ಕೊಲಂಬೊ ಮೈದಾನದಲ್ಲಿದ್ದ ಭಾರತೀಯ ಅಭಿಮಾನಿಗಳ ಮೇಲೆ ಶ್ರೀಲಂಕನ್ನು ಹಲ್ಲೆ ಮಾಡಿದ್ದಾರೆ.
ಕೊಲಂಬೊ (ಸೆ.13): ಏಷ್ಯಾಕಪ್ ಹಾಲಿ ಚಾಂಪಿಯನ್ ಶ್ರೀಲಂಕಾ ವಿರುದ್ಧ ಮಂಗಳವಾರ ಕೊಲಂಬೊ ಪ್ರೇಮದಾಸ ಮೈದಾನದಲ್ಲಿ ನಡೆದ ಭಾರತ- ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಅಲ್ಪ ಮೊತ್ತಕ್ಕೆ ಕುಸಿತ ಕಂಡು ಸೋಲೊಪ್ಪಿಕೊಂಡಿತು. ಇದರ ಬೆನ್ನಲ್ಲಿಯೇ ಸಂಭ್ರಮಾಚರಣೆಯಲ್ಲಿದ್ದ ಭಾರತೀಯ ಅಭಿಮಾನಿಗಳ ಮೇಲೆ ಹೀನಾಮಾನವಾಗಿ ಶ್ರೀಲಂಕಾ ತಂಡದ ಅಭಿಮಾನಿಗಳು ಹಲ್ಲೆ ಮಾಡಿರುವ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಏಷ್ಯಾಕಪ್ (Asia Cup 2023) ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಗೆಲುವಿನ ನಾಗಲೋಟ ಮುಂದುವರಿಸಿದೆ. ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವಿನ ಬಳಿಕ ಇದೀಗ ಶ್ರೀಲಂಕಾ ವಿರುದ್ಧ ರೋಚಕ ಗೆಲುವು ದಾಖಲಿಸಿದೆ. ಲಂಕಾ ತಂಡಕ್ಕೆ 214ರನ್ ಸುಲಭ ಟಾರ್ಗೆಟ್ ನೀಡಿದ ಟೀಂ ಇಂಡಿಯಾ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸುವ ಮೂಲಕ 172 ರನ್‌ಗೆ ಆಲೌಟ್ ಮಾಡಿದೆ. ಈ ಮೂಲಕ 41 ರನ್ ಗೆಲುವು ದಾಖಲಿಸಿತ್ತು.
undefined
ಕುಲ್ದೀಪ್ ಸ್ಪಿನ್ ಮೋಡಿಗೆ ಶ್ರೀಲಂಕಾ 172 ರನ್‌ಗೆ ಆಲೌಟ್, ಏಷ್ಯಾಕಪ್ ಫೈನಲ್‌ಗೆ ಭಾರತ!
ಶ್ರೀಲಂಕಾ ಸತತ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದ ಭಾರತ: ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಗೆಲುವಿನ ನಾಗಾಲೋಟಕ್ಕೆ ಭಾರತ ಬ್ರೇಕ್ ಹಾಕಿದೆ. ಸತತ 13 ಪಂದ್ಯ ಗೆದ್ದು ಸಾಧನೆ ಮಾಡಿದ್ದ ಶ್ರೀಲಂಕಾ ಇದೀಗ 14ನೇ ಗೆಲುವು ಸಾಧ್ಯವಾಗಿಲ್ಲ. ಈ ಕನಸನ್ನು ಟೀಂ ಇಂಡಿಯಾ ಛಿದ್ರಗೊಳಿಸಿದೆ. ಭಾರತ ತಂಡ ನಿರೀಕ್ಷತ ಬ್ಯಾಟಿಂಗ್ ಪ್ರದರ್ಶನ ಮಾಡಲು ವಿಫಲವಾಗಿತ್ತು. ದುನಿತ್ ವೆಲ್ಲಲಾಗೆ ಸ್ಪಿನ್ ಮೋಡಿಗೆ ಸಿಲುಕಿದ ಟೀಂ ಇಂಡಿಯಾ 213 ರನ್‌ಗೆ ಆಲೌಟ್ ಆಗಿತ್ತು.
ಏಕದಿನದಲ್ಲಿ ಸತತ ಗೆಲುವಿನ ದಾಖಲೆಗಳು:
21 ಗೆಲುವು - ಆಸ್ಟ್ರೇಲಿಯಾ (ಜನವರಿ 2003 ರಿಂದ ಮೇ 2003)
13 ಗೆಲುವು - ಶ್ರೀಲಂಕಾ (ಜೂನ್ 2023 ರಿಂದ ಸೆಪ್ಟೆಂಬರ್ 2023)
12 ಗೆಲುವು - ಸೌತ್ ಆಫ್ರಿಕಾ (ಫೆಬ್ರವರಿ 2005 ರಿಂದ ಅಕ್ಟೋಬರ್ 2005)
12 ಗೆಲುವು- ಪಾಕಿಸ್ತಾನ (ನವೆಂಬರ್ 2007 ರಿಂದ ಜೂನ್ 2008)
12 ಗೆಲುವು - ಸೌತ್ ಆಫ್ರಿಕಾ (ಸೆಪ್ಟೆಂಬರ್ 2016 ರಿಂದ ಫೆಬ್ರವರಿ 2017)
Asia Cup 2023: ಗುರುವಾರ ಪಾಕ್-ಲಂಕಾ ನಡುವೆ ‘ವರ್ಚುವಲ್’ ಸೆಮೀಸ್!
25 ರನ್‌ಗೆ 3 ವಿಕೆಟ್ ಕಳೆದುಕೊಂಡ ಲಂಕಾಗೆ ಸಂಕಷ್ಟ: ಸುಲಭ ಟಾರ್ಗೆಟ್ ಪಡೆದ ಶ್ರೀಲಂಕಾ ತಂಡಕ್ಕೆ ಟೀಂ ಇಂಡಿಯಾ ಬೌಲರ್ಸ್ ಶಾಕ್ ನೀಡಿದರು. ಆರಂಭದಲ್ಲೇ ಜಸ್ಪ್ರೀತ್ ಬುಮ್ರಾ ದಾಳಿಗೆ ಲಂಕಾ ತತ್ತರಿಸಿತು. ಪಥುಮ್ ನಿಸಾಂಕ ಹಾಗೂ ಕುಸಾಲ್ ಮೆಂಡಿಸ್ ವಿಕೆಟ್ ಕೈಚೆಲ್ಲಿದರು. ಇನ್ನು ಮೊಹಮ್ಮದ್ ಸಿರಾಜ್ ದಾಳಿಯಲ್ಲಿ ದಿಮುತ್ ಕರುಣಾರತ್ನೆ ನಿರ್ಗಮಿಸಿದರು. 25 ರನ್‌ಗೆ 3 ವಿಕೆಟ್ ಕಳೆದುಕೊಂಡ ಲಂಕಾ ಸಂಕಷ್ಟಕ್ಕೆ ಸಿಲುಕಿತು. ಮೂರು ವಿಕೆಟ್ ಪತನದ ಬಳಿಕ ಕುಲ್ದೀಪ್ ಯಾದವ್ ಸ್ಪಿನ್ ಮೋಡಿ ಆರಂಭಗೊಂಡಿತು. ಶ್ರೀಲಂಕಾದ ಒಂದೊಂದೆ ವಿಕೆಟ್ ಪತನ ಆರಂಭಗೊಂಡಿತು. ಸದೀರಾ ಸಮರವಿಕ್ರಮ, ಚಾರಿತ್ ಅಸಲಂಕ ಪೆವಿಲಿಯನ್ ಸೇರಿದರು. ಇತ್ತ ರವೀಂದ್ರ ಜಡೇಜಾ ಕೂಡ ಉತ್ತಮ ಸ್ಪಿನ್ ದಾಳಿ ಮೂಲಕ ಶ್ರೀಲಂಕಾ ತಂಡದ ಮೇಲೆ ಒತ್ತಡ ಹೆಚ್ಚಿಸಿದರು. ಧನಂಜಯ ಡಿಸಿಲ್ವ, ನಾಯಕ ದಸೂನ್ ಶನಕ ಕೂಡ ನಿರ್ಗಮಿಸಿದರು. 41.3ಓವರ್‌ಗಳಲ್ಲಿ ಶ್ರೀಲಂಕಾ 172 ರನ್‌ಗೆ ಆಲೌಟ್ ಆಯಿತು.
Viral: Fans Fight After India`s Win Over Sri Lanka In Asia Cup 2023 Super 4 Match In Colombo pic.twitter.com/OzQIHgJhK5
— noshaba (@MNoshaba97107)