ಪಿಂಕ್ ಬಾಲ್ ಟೆಸ್ಟ್: ಜಸ್ಪ್ರೀತ್ ಬುಮ್ರಾಗೆ ಡಬಲ್‌ ಪ್ರೊಮೋಷನ್‌!

By Suvarna NewsFirst Published Dec 19, 2020, 9:04 AM IST
Highlights

ಟೀಂ ಇಂಡಿಯಾ ಯಾರ್ಕರ್ ಸ್ಪೆಷಲಿಸ್ಟ್‌ ಜಸ್ಪ್ರೀತ್‌ ಬುಮ್ರಾಗೆ ಆಸ್ಟ್ರೇಲಿಯಾ ವಿರುದ್ದದ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಒಂದೇ ದಿನ ಡಬಲ್ ಪ್ರಮೋಷನ್ ಸಿಕ್ಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಡಿಲೇಡ್(ಡಿ.19): ಪಿಂಕ್‌ ಬಾಲ್‌ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಬಾರಿಸಿದ್ದ ಜಸ್ಪ್ರೀತ್ ಬುಮ್ರಾಗೆ ಒಂದೇ ದಿನ ಎರಡು ಬಾರಿ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಡ್ತಿ ದೊರೆಯಿತು. 

ಸಾಮಾನ್ಯವಾಗಿ 11ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಿದ್ದ ಬುಮ್ರಾ, ಮೊದಲ ಇನ್ನಿಂಗ್ಸ್‌ನಲ್ಲಿ ಶಮಿಗಿಂತ ಮೊದಲೇ ಅಂದರೆ 10ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದರು. ಇಶಾಂತ್‌ ಶರ್ಮಾ ಅನುಪಸ್ಥಿತಿಯಲ್ಲಿ ನೈಟ್‌ ವಾಚ್‌ಮನ್‌ ಕೊರತೆ ಎದುರಾದ ಕಾರಣ, 2ನೇ ಇನ್ನಿಂಗ್ಸ್‌ನಲ್ಲಿ ಬುಮ್ರಾಗೆ 3ನೇ ಕ್ರಮಾಂಕದಲ್ಲಿ ಆಡುವ ಅವಕಾಶ ನೀಡಲಾಯಿತು. 11 ಎಸೆತಗಳನ್ನು ಎದುರಿಸಿದ ಬೂಮ್ರಾ, ಆಕರ್ಷಕ ರಕ್ಷಣಾತ್ಮಕ ಬ್ಯಾಟಿಂಗ್‌ ಪ್ರದರ್ಶನ ತೋರಿ 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಪಿಂಕ್ ಬಾಲ್ ಟೆಸ್ಟ್‌: ಆಸ್ಟ್ರೇಲಿಯಾ ಆಲೌಟ್ @191; ಭಾರತಕ್ಕೆ 53 ರನ್‌ಗಳ ಮುನ್ನಡೆ

ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ದಿನದಂತ್ಯಕ್ಕೆ 6 ವಿಕೆಟ್‌ಗೆ 233 ರನ್‌ ಗಳಿಸಿದ್ದ ಭಾರತ, 2ನೇ ದಿನವಾದ ಶುಕ್ರವಾರ ಆ ಮೊತ್ತಕ್ಕೆ ಕೇವಲ 11 ರನ್‌ಗಳನ್ನಷ್ಟೇ ಸೇರಿಸಲು ಶಕ್ತವಾಯಿತು. 244 ರನ್‌ಗೆ ಆಲೌಟ್‌ ಆದ ಭಾರತ, ನಿರೀಕ್ಷೆಗೂ ಮೀರಿ ಬೌಲಿಂಗ್‌ ಪ್ರದರ್ಶನ ತೋರಿತು. ಇದರ ಪರಿಣಾಮ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಪ್ರೇಲಿಯಾ 72.1 ಓವರ್‌ಗಳಲ್ಲಿ 191 ರನ್‌ಗೆ ಆಲೌಟ್‌ ಆಗಿ, ಭಾರತಕ್ಕೆ 53 ರನ್‌ಗಳ ಮುನ್ನಡೆ ಬಿಟ್ಟುಕೊಟ್ಟಿತು. 2ನೇ ಇನ್ನಿಂಗ್ಸ್‌ನಲ್ಲಿ ಭಾರತ 2ನೇ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 9 ರನ್‌ ಗಳಿಸಿದ್ದು, ಒಟ್ಟು 62 ರನ್‌ ಮುನ್ನಡೆ ಸಂಪಾದಿಸಿದೆ.


 

click me!