ಐಪಿಎಲ್‌ಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ ಸೌರವ್ ಗಂಗೂಲಿ, ಮತ್ತೆ ದಾದಾಗಿರಿ ಆರಂಭ

Published : Oct 06, 2026, 02:59 PM IST
Sourav Ganguly

ಸಾರಾಂಶ

ಐಪಿಎಲ್ ಟೂರ್ನಿಗೆ ಸೌರವ್ ಗಂಗೂಲಿ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಗಂಗೂಲಿ ಯಾವ ತಂಡ ಸೇರಿಕೊಂಡಿದ್ದಾರೆ? ಜವಾಬ್ದಾರಿ ಏನು?

ನವದೆಹಲಿ (ಅ.06) ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ 2008ರಲ್ಲಿ ಐಪಿಎಲ್ ಪ್ರಯಾಣ ಆರಂಭಿಸಿದ್ದ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಇದೀಗ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ, ಡೈರೆಕ್ಟರ್ ಆಫ್ ಕ್ರಿಕೆಟ್, ಕೋಚಿಂಗ್ ಸ್ಟಾಫ್ ಆಗಿ ಜವಾಬ್ದಾರಿ ನಿರ್ವಹಿಸಿರುವ ಸೌರವ್ ಗಂಗೂಲಿ ಇದೀಗ ಬ್ರೇಕ್ ಬಳಿಕ ಭರ್ಜರಿಯಾಗಿ ಮರಳಿದ್ದಾರೆ. ಇದೀಗ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರಧಾನ ಕೋಚ್ ಆಗಿ ನೇಮಕೊಂಡಿದ್ದಾರೆ. 2027ರ ಐಪಿಎಲ್ ಆವೃತ್ತಿಯಲ್ಲಿ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಹೆಡ್ ಕೋಚ್

ಐಪಿಎಲ್ ಟೂರ್ನಿಯಲ್ಲಿ ಸೌರವ್ ಗಂಗೂಲಿ ಹಲವು ಜವಾಬ್ದಾರಿ ನಿರ್ವಹಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಸೌರವ್ ಗಂಗೂಲಿ ಹೆಡ್ ಕೋಚ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಸೌರವ್ ಗಂಗೂಲಿ ರಿಕಿ ಪಾಂಟಿಂಗ್ ಹೆಡ್ ಕೋಚ್ ಅವಧಿಯಲ್ಲಿ ಡೈರೆಕ್ಟರ್ ಆಫ್ ಕ್ರಿಕೆಟ್, ಕೋಚಿಂಗ್ ಸ್ಟಾಫ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚಿಂಗ್ ಜವಾಬ್ದಾರಿಯನ್ನು ಹೇಮಂಗ್ ಬದಾನಿ ವಹಿಸಿಕೊಂಡ ಬಳಿಕ ಡೆಲ್ಲಿ ತಂಡದಿಂದ ಸೌರವ್ ಗಂಗೂಲಿ ನಿರ್ಗಮಿಸಿದ್ದರು. ಇದೀಗ ಬ್ರೇಕ್ ಬಳಿಕ ಸೌರವ್ ಗಂಗೂಲಿ ಮರಳಿದ್ದಾರೆ.

ಸೌತ್ ಆಫ್ರಿಕಾ ಟಿ20 ಲೀಗ್ ಟೂರ್ನಿಯಲ್ಲಿ ಸೌರವ್ ಗಂಗೂಲಿ ಪೆಟ್ರೋರಿಯ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಸೌರವ್ ಗಂಗೂಲಿಗೆ ಕ್ರಿಕೆಟ್ ಟೆಕ್ನಿಕ್ ಮಾತ್ರವಲ್ಲ, ಉತ್ತಮ ಆಡಳಿತಗಾರನೂ ಹೌದು. ಬಿಸಿಸಿಐ ಅಧ್ಯಕ್ಷರಾಗಿ, ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿಯೂ ಸೌರವ್ ಗಂಗೂಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗಂಗೂಲಿ ಸೂಕ್ತ ಕೋಚ್ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಮರಳುತ್ತಿದೆ ದಾದಾಗಿರಿ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಶಿಯಲ್ ಮೀಡಿಯಾ ಮೂಲಕ ಸೌರವ್ ಗಂಗೂಲಿ ಪ್ರಧಾನ ಕೋಚ್ ಮಾಹಿತಿ ಬಯಲು ಮಾಡಿದೆ. ಇದೇ ವೇಳೆ ತಂಡದಲ್ಲಿ ಮತ್ತೆ ದಾದಾಗಿರಿ ಆರಂಭಗೊಳ್ಳುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಐಪಿಎಲ್ ಟ್ರೋಫಿ ಬರ ನೀಗಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. 2008ರಿಂದ ಇಲ್ಲೀವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ದಿಗ್ಗಜ ಕ್ರಿಕೆಟಿಗರು ಆಡಿದ್ದಾರೆ. ಅಬ್ಬರಿಸಿದ್ದಾರೆ. ಆದರೆ ಟ್ರೋಫಿ ಗೆಲ್ಲಲು ವಿಫಲವಾಗಿದೆ.

ಸದ್ಯ ಸೌರವ್ ಗಂಗೂಲಿ ಮುಂದೆ ಆಟಗಾರರ ರಿಟೇನ್, ರಿಲೀಸ್ ಮೊದಲ ಟಾಸ್ಕ್ ಆಗಿದೆ. ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಅನ್ನೋದು ನಿರ್ಧರಿಸಲಿದ್ದಾರೆ. ಅಳೆದು ತೂಗಿ ಬಲಿಷ್ಠ ತಂಡವನ್ನು ಕಟ್ಟುವ ಜವಾಬ್ದಾರಿ ಸೌರವ್ ಗಂಗೂಲಿ ಮೇಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket; ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌‌ಗೆ ಸೇರಿದ್ದ 4 ಭಾರತೀಯ ಸ್ಟಾರ್ಸ್‌; ಒಬ್ಬನ ಬ್ಯಾಟಿಂಗ್‌ ಧಮಾಕಾಗೆ ಜಗತ್ತೇ ಫಿದಾ!
2027ರ ಏಕದಿನ ವಿಶ್ವಕಪ್‌ಗೆ ಭಾರತದ ಟಾಪ್-6 ಆಟಗಾರರ ಹೆಸರು ಫೈನಲ್ ಮಾಡಿದ ಆಕಾಶ್ ಚೋಪ್ರಾ..! ಯಾರಿಗೆಲ್ಲಾ ಸಿಕ್ಕಿದೆ ಸ್ಥಾನ?