
ನವದೆಹಲಿ(ಫೆ.09): 2019ರ ಐಪಿಎಲ್‌ನಲ್ಲಿ (IPL 2019) ಕಳಪೆ ಪ್ರದರ್ಶನ ನೀಡಿದಾಗ ಕ್ರಿಕೆಟ್ ಬಿಟ್ಟು ತಂದೆಯ ಜೊತೆ ಆಟೋ ಓಡಿಸುವಂತೆ ಹೇಳಿದ್ದ ಜನರೇ ಈಗ ನನ್ನನ್ನು ಹೊಗಳುತ್ತಿದ್ದಾರೆ. ಎಂ.ಎಸ್.ಧೋನಿಯ (MS Dhoni) ಸ್ಫೂರ್ತಿದಾಯಕ ಮಾತುಗಳು ನಾನು ಕ್ರಿಕೆಟ್‌ನಲ್ಲಿ ಮುಂದುವರಿಯಲು ಕಾರಣವಾಯಿತು ಎಂದು ಯುವ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಹೇಳಿದ್ದಾರೆ.
ಆರ್‌ಸಿಬಿ (RCB) ತಂಡ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘2019ರ ಐಪಿಎಲ್ ನನ್ನ ವೃತ್ತಿ ಜೀವನದ ಅಂತ್ಯ ಎಂದೇ ಭಾವಿಸಿದ್ದೆ. ಆದರೆ ಫ್ರಾಂಚೈಸಿ, ಸಹ ಆಟಗಾರರು ನನ್ನ ಬೆಂಬಲಕ್ಕೆ ನಿಂತರು. ಧೋನಿ, ಪ್ರದರ್ಶನ ಕೆಟ್ಟದಾಗಿದ್ದರೆ ಜನ ನಿಂದಿಸುತ್ತಾರೆ. ಒಳ್ಳೆಯ ಆಟವಾಡಿದರೆ ನಿಂದಿಸಿದವರೇ ನೀವು ಅತ್ಯುತ್ತಮ ಬೌಲರ್ ಎನ್ನುತ್ತಾರೆ. ಹೊರಗಿನವರ ಮಾತುಗಳಿಗೆ ಗಮನ ಕೊಡಬೇಡಿ’ ಎಂದು ಸ್ಫೂರ್ತಿ ತುಂಬಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ರೀಟೈನ್ ಮಾಡಿಕೊಂಡಿದೆ. ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ಮೊಹಮ್ಮದ್ ಸಿರಾಜ್ ಐಪಿಎಲ್ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ
ಆರ್‌ಸಿಬಿ ಬಿಟ್ಟು ಹರಾಜಿಗೆ ಬನ್ನಿ ಎಂದು ಹಲವರು ಕೇಳಿದ್ದರು: ವಿರಾಟ್
ನವದೆಹಲಿ: ಈ ಹಿಂದೆ ಹಲವು ಬಾರಿ ವಿವಿಧ ಫ್ರಾಂಚೈಸಿಗಳು ನನ್ನನ್ನು ಆರ್‌ಸಿಬಿ ಬಿಟ್ಟು ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಕೇಳಿದ್ದರು ಎಂದು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಬಹಿರಂಗಪಡಿಸಿದ್ದಾರೆ. 2008ರ ಮೊದಲ ಆವೃತ್ತಿಯಲ್ಲಿ ಆರ್‌ಸಿಬಿ ಸೇರಿದ್ದ ಕೊಹ್ಲಿ, ಫ್ರಾಂಚೈಸಿಯೊಂದಿಗೆ ತಮ್ಮ ಬಾಂಧವ್ಯದ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
IPL Auction 2022: ಮೆಗಾ ಹರಾಜು ಆರಂಭ ಎಷ್ಟು ಗಂಟೆಯಿಂದ..? ಇಲ್ಲಿದೆ ಉತ್ತರ
‘ನಾನು ಆರ್‌ಸಿಬಿಗೆ ಯಾವತ್ತೂ ನಿಷ್ಠೆಯಿಂದ ಇದ್ದೇನೆ. ಯಾವುದೋ ತಂಡದ ಜೊತೆ ನೀವು ಟ್ರೋಫಿ ಗೆದ್ದಿದ್ದೀರಿ ಎಂದು ಹೇಳುವುದಕ್ಕಿಂತ ನನಗೆ ಈ ತಂಡದಲ್ಲೇ ಹೆಚ್ಚು ಸಂತೋಷವಿದೆ. ಮೊದಲ ಮೂರು ಆವೃತ್ತಿಗಳಲ್ಲಿ ಆರ್‌ಸಿಬಿ ಫ್ರಾಂಚೈಸಿ ನನ್ನ ಮೇಲೆ ಇರಿಸಿದ ನಂಬಿಕೆ ತುಂಬಾ ವಿಶೇಷವಾದದ್ದು. ಬೇರೆ ತಂಡಗಳಿಗೆ ಅವಕಾಶಗಳಿದ್ದರೂ ಅವರು ನನ್ನನ್ನು ಬೆಂಬಲಿಸಲಿಲ್ಲ ಮತ್ತು ನನ್ನಲ್ಲಿ ನಂಬಿಕೆ ಇರಿಸಿರಲಿಲ್ಲ’ ಎಂದಿದ್ದಾರೆ.
ತಗ್ಗದ ಬೇಡಿಕೆ: 7 ದಿನದಲ್ಲಿ 3 ಬ್ರ್ಯಾಂಡ್ ಜತೆ ಧೋನಿ ಒಪ್ಪಂದ!
ಚೆನ್ನೈ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ 2 ವರ್ಷಗಳಾದರೂ 40 ವರ್ಷದ ಎಂ.ಎಸ್.ಧೋನಿಯ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ. ಐಪಿಎಲ್‌ನ 4 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿರುವ ಧೋನಿ ಕಳೆದ 7 ದಿನದಲ್ಲಿ 3 ಬ್ರ್ಯಾಂಡ್‌ಗಳ ರಾಯಭಾರಿಯಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇನ್ಶೂರೆನ್ಸ್ ಆಧಾರಿತ ಕಂಪೆನಿ ಟರ್ಟಲ್‌ಮಿಂಟ್, ರಿಯಲ್ ಎಸ್ಟೇಟ್ ಸಂಸ್ಥೆ ಗಣೇಶ್ ಹೌಸಿಂಗ್ ಜೊತೆ ಹೊಸದಾಗಿ ಒಪ್ಪಂದ ಮಾಡಿಕೊಂಡಿರುವ ಧೋನಿ, ಓರಿಯೋ ಬಿಸ್ಕೆಟ್ ಕಂಪನಿ ಜೊತೆಗಿನ ಒಪ್ಪಂದವನ್ನು ನವೀಕರಿಸಿದ್ದರು.
ಐಪಿಎಲ್ ಹರಾಜಿಗೆ ಪರಿಗಣಿಸಿ: 8 ಕಿರಿಯ ಆಟಗಾರರ ಮನವಿ
ನವದೆಹಲಿ: ಅಂಡರ್-19 ವಿಶ್ವಕಪ್ (ICC U-19 World Cup) ವಿಜೇತ ಭಾರತ ತಂಡದಲ್ಲಿದ್ದ 8 ಆಟಗಾರರು ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲು ತಮಗೂ ಅವಕಾಶ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಂಡದ ಉಪನಾಯಕ ಶೇಖ್ ರಶೀದ್, ದಿನೇಶ್ ಬನಾ, ರವಿ ಕುಮಾರ್, ರಘುವನ್ಶಿ, ಮಾನವ್ ಪ್ರಕಾಶ್, ನಿಶಾಂತ್ ಸಿಂಧು, ಸಂಗ್ವಾನ್, ಸಿದ್ದಾರ್ಥ್ ಯಾದವ್ ಮನವಿ ಮಾಡಿದ ಆಟಗಾರರು ಎಂದು ತಿಳಿದುಬಂದಿದೆ.
ಐಪಿಎಲ್ ಹರಾಜಿನಲ್ಲಿ (IPL Auction 2022) ಪಾಲ್ಗೊಳ್ಳಲು 2 ಮಾನದಂಡಗಳಿವೆ. ಮೊದಲನೇಯದ್ದು, 19 ವರ್ಷ ತುಂಬಿರಬೇಕು. ಎರಡನೇಯದ್ದು ಅಂಡರ್-19 ಆಟಗಾರರಾಗಿದ್ದರೆ, ರಾಜ್ಯ ಹಿರಿಯರ ತಂಡದ ಪರ ಕನಿಷ್ಠ ಒಂದು ಪ್ರಥಮ ದರ್ಜೆ ಇಲ್ಲವೇ ಲಿಸ್ಟ್ ‘ಎ’ ಪಂದ್ಯ ಆಡಿರಬೇಕು. ಈ ಎಂಟೂ ಆಟಗಾರರು ಮಾನದಂಡಗಳನ್ನು ಪೂರೈಸದ ಕಾರಣ ಹರಾಜಿಗೆ ಪರಿಗಣಿಸಲಾಗಿಲ್ಲ. ಇವರ ಹೊರತಾಗಿ ಯಶ್ ಧುಳ್ ಸೇರಿದಂತೆ 8 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.