
ಮುಂಬೈ (ನ.23) ಟೀಂ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನಾ ಹಾಗೂ ಮ್ಯೂಸಿಕ್ ನಿರ್ದೇಶಕ ಪಲಾಶ್ ಮುಚ್ಚಾಲ್ ಜೋಡಿ ತಮ್ಮ ಬುದಕಿನ ಮಹತ್ವದ ಘಟ್ಟದಲ್ಲಿದ್ದರು. ಈ ಜೋಡಿ ಈಗಾಗಲೇ ಹಳದಿ ಕಾರ್ಯಕ್ರಮ, ಸಂಗೀತ ಸರೆಮನಿ ಸೇರಿದಂತೆ ಮದುವೆ ಹಿಂದಿನದ ಎಲ್ಲಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಇಂದು ಅದ್ಧೂರಿ ವಿವಾಹ ಮಹೋತ್ಸವ ಆಯೋಜನೆಗೊಂಡಿತ್ತು. ಆದರೆ ಸ್ಮತಿ ಮಂಧನಾ ತಂದೆ ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಹೀಗಾಗಿ ಮದುವೆ ಮುಂದೂಡಲಾಗಿದೆ. ಸದ್ಯ ಯಾವುದೇ ದಿನಾಂಕ ಘೋಷಣೆ ಮಾಡಿಲ್ಲ. ತಂದೆ ಆರೋಗ್ಯ ಕಾಳಜಿ ನಡುವೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಸ್ಮೃತಿ ಮಂಧನಾ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಮದುವೆ ಮುಂದೂಡಲಾಗಿದೆ.
ಸ್ಮತಿ ಮಂದನಾ ಮನೆಯಲ್ಲಿ ಮದುವೆ ಸಂಭ್ರಮದ ವಾತಾವರಣ. ಕಳೆದ ಒಂದು ವಾರದಿಂದ ಸತತ ಕಾರ್ಯಕ್ರಮ. ಎಲ್ಲಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಖುದ್ದು ಸ್ಮೃತಿ ಮಂದನಾ ಹಾಗೂ ಪಲಾಶ್ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಇತ್ತ ಭಾರತ ಮಹಿಳಾ ತಂಡದ ಸದಸ್ಯರು ಡ್ಯಾನ್ಸ್ ಮಾಡಿದ್ದಾರೆ. ಇಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಅದ್ಧೂರಿ ಮದುವೆ ಆಯೋಜನೆಗೊಂಡಿತ್ತು. ಆದರೆ ಇಂದು ಬೆಳಗ್ಗೆಯಿಂದ ಸ್ಮೃತಿ ಮಂಧನಾ ತಂದೆ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು. ಕೆಲ ಹೊತ್ತಿನ ಬಳಿಕ ಸ್ಮೃತಿ ಮಂಧನಾ ತಂದೆ ಆರೋಗ್ಯ ಕ್ಷೀಣಿಸಿದೆ. ಹೀಗಾಗಿ ತಕ್ಷಣವೇ ಸ್ಮೃತಿ ಮಂಧನಾ ತಂದೆಯನ್ನು ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀವ್ರ ಅಸ್ವಸ್ಥಗೊಂಡ ಸ್ಮೃತಿ ಮಂಧನಾ ತಂದೆಗೆ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಮೂಲಗಳ ಪ್ರಕಾರ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ವೈದ್ಯರ ತಂಡ ಸ್ಮೃತಿ ಮಂಧನಾ ತಂದೆ ಆರೋಗ್ಯದ ಮೇಲೆ ನಿಗಾವಹಿಸಿದೆ. ಇತ್ತ ಸ್ಮೃತಿ ಮಂಧನಾ ತಂದೆಯ ಆರೋಗ್ಯ ಸ್ಥಿತಿಯಲ್ಲಿ ಮದುವೆಯಾಗಲು ಮನಸ್ಸು ಒಪ್ಪುತ್ತಿಲ್ಲ ಎಂದಿದ್ದಾರೆ. ಕುಟುಂಬಸ್ಥರು ನಿಗಿದಿತ ಮುಹೂರ್ತದಲ್ಲಿ ಮದುವೆಯಾಗಲು ಸೂಚಿಸಿದ್ದರು. ಆದರೆ ಇದಕ್ಕೆ ಸ್ಮೃತಿ ಮಂಧನಾ ನಿರಾಕರಿಸಿದ್ದಾರೆ. ಪಲಾಶ್ ಮುಚ್ಚಾಲ್‌ಗೆ ಮಾಹಿತಿ ನೀಡಿದ ಸ್ಮೃತಿ ಮಂಧನಾ ಈ ಪರಿಸ್ಥಿತಿಯಲ್ಲಿ ಮದುವೆಯಾಗಲು ಸಾಧ್ಯವಿಲ್ಲ, ಮುಂದೂಡಿಕೆ ಮಾಡಲು ಸೂಚಿಸಿದ್ದಾಳೆ. ಸ್ಮೃತಿ ಮಾತಿನಂತೆ ಪಲಾಶ್ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಸದ್ಯ ತಂದೆಯ ಆರೋಗ್ಯ, ಉಳಿದಿದ್ದೆಲ್ಲಾ ಅಮೇಲೆ ಎಂದು ಸ್ಮೃತಿ ಮಂಧನಾ ಹೇಳಿದ್ದಾರೆ. ಮೂಲಗಳ ಪ್ರಕಾರ ಸ್ಮೃತಿ ಮಂಧನಾ ತಂದೆಗೆ ಹೃದಯಾಘಾತವಾಗಿದೆ ಅನ್ನೋ ವರದಿಗಳು ಹರಿದಾಡುತ್ತಿದೆ. ಸದ್ಯ ಆರೋಗ್ಯದ ಕುರಿತು ಅಪ್‌ಡೇಟ್ ಲಭ್ಯವಾಗಿಲ್ಲ. ಆದರೆ ಸತತ ಚಿಕಿತ್ಸೆ ಮುಂದುವರಿದಿದೆ ಎಂದು ಮಂಧನಾ ಮ್ಯಾನೇಜರ್ ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ಸ್ಮೃತಿ ಮಂಧನಾ ಹಾಗೂ ಪಲಾಶ್ ಮುಚ್ಚಾಲ್ ಮದುವೆ ಕಾರ್ಯಕ್ರಮಗಳ ವಿಡಿಯೋಗಳೇ ರಾರಾಜಿಸುತ್ತಿದೆ. ಒಂದೆಡೆ ಭಾರತ ಮಹಿಳಾ ತಂಡದ ಬಹುತೇಕ ಸದಸ್ಯರು ಹಾಜರಿದ್ದಾರೆ. ಮಹೆಂದಿ, ಹಳದಿ, ಸಂಗೀತ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಇದರ ನಡುವೆ ವಧು ವರರ ಫನ್ನಿ ಕ್ರಿಕೆಟ್ ಮ್ಯಾಚ್ ಕೂಡ ಆಯೋಜನೆ ಮಾಡಲಾಗಿತ್ತು. ಸ್ಮೃತಿ ಮಂಧನಾ ಹಾಗೂ ಪಲಾಶ್ ಇಬ್ಬರು ಬಾಲಿವುಡ್ ಶೈಲಿಯಲ್ಲಿ ಹಲವು ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಸ್ಮೃತಿ ಮಂಧನಾ ತಮ್ಮ ನಿಶ್ಚಿತಾರ್ಥ ಬಹಿರಂಗಪಡಿಸಲು ಲಗೆ ರಹೋ ಮುನ್ನಭಾಯಿ ಸಿನಿಮಾದ ಸಮ್ಜೋ ಹೋ ಹಿ ಗಯ ಹಾಡಿಗೆ ಹೆಚ್ಚೆ ಹಾಕಿದ್ದರು. ಮಹಿಳಾ ತಂಡದ ಸದಸ್ಯರು ಸಾಥ್ ನೀಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.