
ಬೆಂಗಳೂರು: ಫಿಲ್ಮ್ ಮೇಕರ್ ಹಾಗೂ ಖ್ಯಾತ ಸಿಂಗರ್ ಆಗಿರುವ ಪಲಾಶ್ ಮುಚ್ಚಲ್ ಕಳೆದ ಭಾನುವಾರ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ನವೆಂಬರ್ 23ರಂದು ಈ ಜೋಡಿ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತ-ಸ್ನೇಹಿತೆಯರ ಸಮ್ಮುಖದಲ್ಲಿ ಮದುವೆಯಾಗಲು ಎಲ್ಲಾ ಸಿದ್ದತೆ ನಡೆಸಿದ್ದರು. ಆದರೆ ತದನಂತರ ಅಂದು ದಿಢೀರ್ ಎನ್ನುವಂತೆ ಅನಿರ್ದಿಷ್ಟಾವಧಿಗೆ ಈ ಮದುವೆ ಮುಂದೂಡಲ್ಪಟ್ಟಿದೆ ಎಂದು ಪಲಾಶ್ ಮುಚ್ಚಲ್ ಸಹೋದರಿ ಪಲಕ್ ಮುಚ್ಚಲ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಳ್ಳುವ ಮೂಲಕ ತಿಳಿಸಿದ್ದರು.
ಇದಾದ ಬಳಿಕ, ಯಾಕೆ ಮದುವೆ ಮುಂದೂಡಲ್ಪಟ್ಟಿತು ಎನ್ನುವ ಕುತೂಹಲ ಹುಡುಕುತ್ತಾ ಹೊರಟಾಗ, ಮಂಧನಾ ಅವರ ತಂದೆ ಶ್ರೀನಿವಾಸ್ ಅವರಿಗೆ ಹೃದಯಾಘಾತವಾಗಿದ್ದರಿಂದ ಮದುವೆ ಮುಂದೂಡಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿತು. ತಮ್ಮ ತಂದೆ ಅನಾರೋಗ್ಯಕ್ಕೆ ಒಳಗಾದಾಗ ತಾವು ಸಂಭ್ರಮದಿಂದ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಸ್ಮೃತಿ ಮಂಧನಾ ಮದುವೆ ಮುಂದೂಡಿದ್ದಾರೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಸ್ಮೃತಿ ಮಂಧನಾ, ತಮ್ಮ ಎಂಗೇಟ್‌ಮೆಂಟ್ ಹಾಗೂ ಮದುವೆ ಸಂಭ್ರಮಾಚರಣೆಯ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಇದೀಗ ಮತ್ತೊಂದು ಸೋಷಿಯಲ್ ಮೀಡಿಯಾ ಚಾಟ್ ಲೀಕ್ ಆಗಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಹಿಳೆಯೊಬ್ಬರು ಪಲಾಶ್ ಮುಚ್ಚಲ್ ಅವರೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಚಾಟ್ ಮಾಡಿರುವ ಸ್ಕ್ರೀನ್‌ಶಾಟ್ ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ ಬೆನ್ನಲ್ಲೇ ಇದು ರೆಡ್ಡಿಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ಮೃತಿ ಮಂಧನಾ ಹಾಗೂ ಪಲಾಶ್ ಮುಚ್ಚಲ್ ಮದುವೆ ಮುಂದೂಡಿದ ಕೆಲವೇ ಗಂಟೆಗಳಲ್ಲಿ ಈ ಸ್ಕ್ರೀನ್‌ಶಾಟ್ ಬೆಳಕಿಗೆ ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮೇರಿ ಡಿ'ಕೋಸ್ಟಾ ಎನ್ನುವ ಮಹಿಳೆ ಈ ಸ್ಕ್ರೀನ್‌ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಚಾಟ್‌ನಲ್ಲಿ ಪಲಾಶ್ ಮುಚ್ಚಲ್, ಸ್ಮೃತಿ ಮಂಧನಾ ಜತೆಗಿನ ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್ ಹಾಗೂ ಆಕೆಯ ಜತೆ ಟೂರ್ ಹೋಗುವುದರ ಬಗ್ಗೆ ಆಗುವ ಸವಾಲುಗಳ ಬಗ್ಗೆ ಪಲಾಶ್ ಮುಚ್ಚಲ್ ಚಾಟ್ ಮಾಡಿದ್ದಾರೆ.
ಇದಷ್ಟೇ ಅಲ್ಲದೇ ಮೇರಿ ಡಿ'ಕೋಸ್ಟಾ ಅವರ ಜತೆ ಪಲಾಶ್ ಮುಚ್ಚಲ್ ಫ್ಲರ್ಟ್ ಮಾಡುವ ರೀತಿಯಲ್ಲಿಯೂ ಚಾಟ್ ಮಾಡಿದ್ದಾರೆ. ಇದರ ಜತೆಗೆ ಆಕೆಯನ್ನು ತಮ್ಮ ಜತೆ ಈಜಾಡಲೂ ಕರೆದಿರುವುದು ಸ್ಪಷ್ಟವಾಗಿ ಬೆಳಕಿಗೆ ಬಂದಿದೆ. ಇದೆಲ್ಲವನ್ನು ಗಮನಿಸಿದ್ರೆ ಪಲಾಶ್ ಮುಚ್ಚಲ್, ಸ್ಮೃತಿ ಮಂಧನಾ ಅವರ ಪ್ರೀತಿಗೆ ಮೋಸ ಮಾಡಿದ್ರಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಇದೀಗ ಸ್ಮೃತಿ ಮಂಧನಾ ಮಾತ್ರವಲ್ಲದೇ ಆಕೆಯ ಗೆಳತಿಯರಾದ ಜೆಮಿಮಾ ರೋಡ್ರಿಗ್ಸ್ ಸೇರಿದಂತೆ ಹಲವು ಆಪ್ತರು ಮದುವೆ ಪೂರ್ವ ಕಾರ್ಯಕ್ರಮಗಳ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿರುವುದು ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧನಾ ಮದುವೆ ಸಂಬಂಧ ಮುರಿದುಬಿತ್ತಾ ಎನ್ನುವ ಅನುಮಾನ ಹುಟ್ಟುಹಾಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.