ಸ್ಮೃತಿ ಮಂಧನಾಗೆ ಆರ್‌ಸಿಬಿ ಮಹಿಳಾ ತಂಡದ ನಾಯಕಿ ಪಟ್ಟ; ಶುಭ ಕೋರಿದ ಕೊಹ್ಲಿ, ಫಾಫ್ ಡು ಪ್ಲೆಸಿಸ್

Published : Feb 19, 2023, 10:25 AM IST
ಸ್ಮೃತಿ ಮಂಧನಾಗೆ ಆರ್‌ಸಿಬಿ ಮಹಿಳಾ ತಂಡದ ನಾಯಕಿ ಪಟ್ಟ; ಶುಭ ಕೋರಿದ ಕೊಹ್ಲಿ, ಫಾಫ್ ಡು ಪ್ಲೆಸಿಸ್

ಸಾರಾಂಶ

ಆರ್‌​ಸಿ​ಬಿ ಮಹಿಳಾ ತಂಡಕ್ಕೆ ಸ್ಮೃತಿ ಮಂಧನಾ ನಾಯ​ಕಿ ನಾಯಕಿಯ ಘೋಷಣೆ ಮಾಡಿದ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್‌ ಮಹಿಳಾ ಐಪಿಎಲ್ ಟೂರ್ನಿ ಮಾರ್ಚ್‌ 04ರಿಂದ ಆರಂಭ

ಬೆಂಗ​ಳೂ​ರು(ಫೆ.19): ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಮಹಿಳಾ ಐ​ಪಿ​ಎ​ಲ್‌​)ನ ರಾಯಲ್‌ ಚಾಲೆಂಜ​​ರ್ಸ್‌ ಬೆಂಗ​ಳೂರು ತಂಡಕ್ಕೆ ತಾರಾ ಬ್ಯಾಟರ್‌ ಸ್ಮೃತಿ ಮಂಧನಾ ನಾಯ​ಕಿ​ಯಾಗಿ ನೇಮ​ಕ​ಗೊಂಡಿ​ದ್ದಾರೆ. ಇದನ್ನು ಆರ್‌​ಸಿಬಿ ಪುರು​ಷರ ತಂಡದ ಹಾಲಿ ನಾಯಕ ಫಾಫ್‌ ಡು ಪ್ಲೆಸಿ ಹಾಗೂ ಮಾಜಿ ನಾಯಕ ವಿರಾಟ್‌ ಕೊಹ್ಲಿ ಟ್ವೀಟರ್‌ ಮೂಲಕ ಘೋಷಿ​ಸಿ​ದ್ದಾರೆ. 

ಇತ್ತೀ​ಚೆ​ಗಷ್ಟೇ ಹರಾ​ಜಿ​ನಲ್ಲಿ ಆರ್‌​ಸಿಬಿ ದಾಖ​ಲೆಯ 3.4 ಕೋಟಿ ರು. ನೀಡಿ ಸ್ಮೃತಿ ಮಂಧನಾ ಅವರನ್ನು ಖರೀ​ದಿ​ಸಿತ್ತು. 26 ವರ್ಷದ ಮಂಧನಾ ಭಾರತ ಮಹಿಳಾ ತಂಡ​ವನ್ನು ಟಿ20ಯಲ್ಲಿ 11 ಬಾರಿ ಮುನ್ನ​ಡೆ​ಸಿ​ದ್ದಾರೆ. ಈ ಪೈಕಿ ಭಾರತ 6ರಲ್ಲಿ ಗೆಲುವು ಸಾಧಿ​ಸಿದೆ. ಅವರು ಮಹಿಳಾ ಟಿ20 ಚಾಲೆಂಜ್‌ ಟೂರ್ನಿ​ಯಲ್ಲಿ ಟ್ರೈಲ್‌​ಬ್ಲೇ​ಜರ್ಸ್‌ ತಂಡಕ್ಕೂ ನಾಯ​ಕತ್ವ ವಹಿ​ಸಿ​ದ್ದರು. ಮಹಿಳಾ ಅಂತಾ​ರಾ​ಷ್ಟ್ರೀಯ ಟಿ20 ಕ್ರಿಕೆ​ಟ್‌​ನಲ್ಲಿ ಮಂಧನಾ 113 ಪಂದ್ಯ​ಗ​ಳಲ್ಲಿ 123.19ರ ಸ್ಟ್ರೈಕ್‌​ರೇ​ಟ್‌​ನಲ್ಲಿ 2,661 ರನ್‌ ಗಳಿ​ಸಿ​ದ್ದಾರೆ.

ನ್ಯೂಜಿಲೆಂಡ್‌ ಮಹಿಳಾ ತಂಡದ ಹಾಲಿ ಕೋಚ್‌ ಆಗಿರುವ ಆಸ್ಟ್ರೇಲಿಯಾ ಮೂಲದ ಬೆನ್‌ ಸಾಯರ್‌ರನ್ನು ಆರ್‌ಸಿಬಿ ಮಹಿಖಾ ತಂಡದ ಕೋಚ್‌ ಆಗಿ ನೇಮಿಸಲಾಗಿದೆ. ಆರ್‌ಸಿಬಿ ತಂಡದ ಕ್ರಿಕೆಟ್‌ ವ್ಯವಹಾರಗಳ ನಿರ್ದೇಶಕ ಮೈಕ್‌ ಹೆಸನ್‌ ಬುಧವಾರ ತಂಡದ ಸಿಬ್ಬಂದಿಯನ್ನು ಪ್ರಕಟ ಮಾಡಿದ್ದಾರೆ. ಕರ್ನಾಟಕದ ಆರ್‌ಎಕ್ಸ್‌ ಮುರಳಿ ತಂಡದ ಬ್ಯಾಟಿಂಗ್‌ ಕೋಚ್ ಆಗಿ ನೇಮಕವಾಗಿದ್ದಾರೆ.  ಪ್ರಖ್ಯಾತ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಅವರನ್ನು ತಂಡದ ಮೆಂಟರ್‌ ಆಗಿ ಘೋಷಣೆ ಮಾಡಿದ ಕೆಲವೇ ಸಮಯದಲ್ಲಿ ಆರ್‌ಸಿಬಿ ತಂಡ ತನ್ನ ಕೋಚಿಂಗ್‌ ಸಿಬ್ಬಂದಿ ವಿವರಗಳನ್ನು ನೀಡಿದೆ. 

ಆರ್‌ಸಿಬಿ ಮಹಿಳಾ ತಂಡದ ಸಿಬ್ಬಂದಿ

ಮುಖ್ಯ ಕೋಚ್: ಬೆನ್ ಸಾಯರ್
ಸಹಾಯಕ ಕೋಚ್ ಮತ್ತು ಸ್ಕೌಟಿಂಗ್ ಮುಖ್ಯಸ್ಥ: ಮಲೋಲನ್ ರಂಗರಾಜನ್
ಸ್ಕೌಟ್ ಮತ್ತು ಫೀಲ್ಡಿಂಗ್ ಕೋಚ್: ವನಿತಾ ವಿ.ಆರ್
ಬ್ಯಾಟಿಂಗ್ ಕೋಚ್: ಆರ್ ಎಕ್ಸ್ ಮುರಳಿ
ಟೀಮ್ ಮ್ಯಾನೇಜರ್ ಮತ್ತು ಟೀಮ್ ಡಾಕ್ಟರ್: ಡಾ.ಹರಿಣಿ
ಮುಖ್ಯ ಅಥ್ಲೆಟಿಕ್ ಥೆರಪಿಸ್ಟ್: ನವನಿತಾ ಗೌತಮ್

IPL 2023: ಇಲ್ಲಿದೆ ನೋಡಿ ನಮ್ಮ RCB ತಂಡದ ಸಂಪೂರ್ಣ ವೇಳಾಪಟ್ಟಿ..!

WPL ಹರಾಜಿನ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹೀಗಿದೆ ನೋಡಿ

1. ಸ್ಮೃತಿ ಮಂಧ​​ನಾ .3.4 ಕೋಟಿ ರುಪಾಯಿ
2. ರಿಚಾ ಘೋಷ್‌ 1.9 ಕೋಟಿ ರುಪಾಯಿ
3. ಎಲೈಸಿ ಪೆರ್ರಿ 1.7 ಕೋಟಿ ರುಪಾಯಿ
4. ರೇಣುಕಾ ಸಿಂಗ್‌ 1.5 ಕೋಟಿ ರುಪಾಯಿ
5. ಸೋಫಿ ಡಿವೈ​ನ್‌ 50 ಲಕ್ಷ ರುಪಾಯಿ
6. ಹೀಥರ್‌ ನೈಟ್‌ 40 ಲಕ್ಷ ರುಪಾಯಿ
7. ಮೇಗನ್‌ ಶುಟ್‌ 40 ಲಕ್ಷ ರುಪಾಯಿ
8. ಕನಿಕಾ ಅಹುಜಾ 35 ಲಕ್ಷ ರುಪಾಯಿ
9. ವಾನ್‌ ನೀಕಕ್‌ 30 ಲಕ್ಷ ರುಪಾಯಿ
10. ಎರಿನ್‌ ಬರ್ನ್ಸ್‌ 30 ಲಕ್ಷ ರುಪಾಯಿ
11. ಪ್ರೀತಿ ಬೋಸ್‌ 30 ಲಕ್ಷ ರುಪಾಯಿ
12. ಕೋಮಲ್‌ ಜಂಜದ್‌ 25 ಲಕ್ಷ ರುಪಾಯಿ
13. ಆಶಾ ಶೋಭ​ನಾ 10 ಲಕ್ಷ ರುಪಾಯಿ
14. ದಿಶಾ ಕಸಟ್‌ 10 ಲಕ್ಷ ರುಪಾಯಿ
15. ಇಂದ್ರಾನಿ ರಾಯ್‌ 10 ಲಕ್ಷ ರುಪಾಯಿ
16. ಪೂನಂ ಕೆಮ್ನ​ರ್‌ 10 ಲಕ್ಷ ರುಪಾಯಿ
17. ಸಹನಾ ಪವಾ​ರ್‌ 10 ಲಕ್ಷ ರುಪಾಯಿ
18. ಶ್ರೇಯಾಂಕಾ ಪಾಟೀ​ಲ್‌ 10 ಲಕ್ಷ ರುಪಾಯಿ.

ಮಾರ್ಚ್‌ 4ರಿಂದ ಮೊದಲ ಆವೃತ್ತಿ ಡಬ್ಲ್ಯುಪಿಎಲ್‌

ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಮಾರ್ಚ್‌ 4ರಿಂದ 26ರ ವರೆಗೂ ನಡೆಯಲಿದೆ. ಫೈನಲ್‌ ಸೇರಿ ಒಟ್ಟು 23 ಪಂದ್ಯಗಳು ನಡೆಯಲಿದ್ದು, ಮುಂಬೈನ ಬ್ರೆಬೋರ್ನ್‌ ಕ್ರೀಡಾಂಗಣ ಹಾಗೂ ನವಿ ಮುಂಬೈನ ಡಿ.ವೈ.ಪಾಟೀಲ್‌ ಕ್ರೀಡಾಂಗಣ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು
ಬ್ರೇಕ್ ಅಪ್ ಆಗೋರಿಗೆ ಮೂವ್ ಆನ್ ಆಗೋ ಬೆಸ್ಟ್ ಪಾಠ ಹೇಳಿದ ಸ್ಮೃತಿ ಮಂಧನಾ! ಕೊನೆಗೂ ಮೌನ ಮುರಿದ ಕ್ರಿಕೆಟರ್!