Ranji Trophy Final: ಪ್ರಶಸ್ತಿ ಗೆಲ್ಲುವತ್ತ ಸೌರಾಷ್ಟ್ರ ದಿಟ್ಟ ಹೆಜ್ಜೆ

Published : Feb 19, 2023, 09:41 AM IST
Ranji Trophy Final: ಪ್ರಶಸ್ತಿ ಗೆಲ್ಲುವತ್ತ ಸೌರಾಷ್ಟ್ರ ದಿಟ್ಟ ಹೆಜ್ಜೆ

ಸಾರಾಂಶ

ರಣಜಿ ಟ್ರೋಫಿ ಫೈನಲ್‌ನಲ್ಲಿ ಬಂಗಾಳ ಎದುರು ಸೌರಾಷ್ಟ್ರ ಬಿಗಿಹಿಡಿತ 4 ಬಾರಿಗೆ ರಣಜಿ ಟ್ರೋಫಿ ಚಾಂಪಿಯನ್‌ ಪಟ್ಟಕ್ಕೇರಲು ತುದಿಗಾಲಲ್ಲಿ ನಿಂತ ಸೌರಾಷ್ಟ್ರ ಸೌರಾಷ್ಟ್ರ ಕನಸಿಗೆ ಅಡ್ಡಗಾಲು ಹಾಕುತ್ತಾರಾ ಬಂಗಾಳ ನಾಯಕ ಮನೋಜ್ ತಿವಾರಿ

ಕೋಲ್ಕ​ತಾ(ಫೆ.19): ರಣಜಿ ಟ್ರೋಫಿ ಟೂರ್ನಿ​ಯಲ್ಲಿ ಸೌರಾಷ್ಟ್ರ 4ನೇ ಬಾರಿ ಚಾಂಪಿ​ಯನ್‌ ಎನಿ​ಸಿ​ಕೊ​ಳ್ಳು​ವತ್ತ ಹೆಜ್ಜೆ ಇರಿ​ಸಿದೆ. 33 ವರ್ಷಗಳಲ್ಲಿ ಚೊಚ್ಚಲ ಟ್ರೋಫಿ ಗೆಲ್ಲುವ ಬಂಗಾ​ಳದ ಕನಸು ನನ​ಸಾ​ಗುವ ಸಾಧ್ಯತೆ ಕ್ಷೀಣಿ​ಸಿದೆ. ಬಂಗಾ​ಳದ 174 ರನ್‌ಗೆ ಉತ್ತ​ರ​​ವಾಗಿ ಸೌರಾಷ್ಟ್ರ 404 ರನ್‌ ಸೇರಿ​ಸಿ 230 ರನ್‌ ಮುನ್ನಡೆ ಪಡೆದರೆ, ಬಂಗಾಳ 3ನೇ ದಿನ​ದಂತ್ಯಕ್ಕೆ 6 ವಿಕೆಟ್‌ಗೆ 163 ರನ್‌ ಗಳಿ​ಸಿದ್ದು ಇನ್ನೂ 67 ರನ್‌ ಹಿನ್ನ​ಡೆ​ಯ​ಲ್ಲಿದೆ. ಭಾನು​ವಾರ ಮೊದಲ ಅವ​ಧಿ​ಯಲ್ಲೇ ಬಂಗಾ​ಳ​ವನ್ನು ಆಲೌಟ್‌ ಮಾಡಿ ಪ್ರಶಸ್ತಿ ಗೆಲ್ಲಲು ಸೌರಾಷ್ಟ್ರ ಕಾಯು​ತ್ತಿದೆ.

2ನೇ ದಿನ 5 ವಿಕೆ​ಟ್‌ಗೆ 317 ರನ್‌ ಗಳಿ​ಸಿದ್ದ ಸೌರಾ​ಷ್ಟ್ರ ಶನಿ​ವಾರ ಆ ಮೊತ್ತಕ್ಕೆ 87 ರನ್‌ ಸೇರಿ​ಸಿ​ತು. ಅರ್ಪಿತ್‌ ವಸ​ವಾಡ 81 ರನ್‌ಗೇ ನಿರ್ಗ​ಮಿ​ಸಿ​ದರೆ, ಚಿರಾಗ್‌ ಜಾನಿ 60 ರನ್‌ ಸಿಡಿ​ಸಿ​ದರು. ಮುಕೇಶ್‌ ಕುಮಾರ್‌ 4, ಆಕಾಶ್‌ ದೀಪ್‌, ಇಶಾನ್‌ ಪೊರೆಲ್‌ ತಲಾ 3 ವಿಕೆಟ್‌ ಪಡೆ​ದ​ರು. ದೊಡ್ಡ ಹಿನ್ನ​ಡೆ​ಯೊಂದಿ​ಗೆ 2ನೇ ಇನ್ನಿಂಗ್‌್ಸ​ ಆರಂಭಿಸಿದ ಬಂಗಾಳ ಆರಂಭಿಕ ಕುಸಿತ ಕಂಡರೂ, ಅನು​ಸ್ತುಪ್‌ ಮಜುಂದಾ​ರ್‌​(61) ಹಾಗೂ ನಾಯಕ ಮನೋಜ್‌ ತಿವಾ​ರಿ(ಔ​ಟಾ​ಗದೆ 57) ಚೇತ​ರಿಕೆ ನೀಡಿ​ದರು. ಈ ಜೋಡಿ 4ನೇ ವಿಕೆ​ಟ್‌ಗೆ 99 ರನ್‌ ಜೊತೆ​ಯಾ​ಟ​ವಾ​ಡಿತು. ಉನಾ​ದ್ಕತ್‌, ಚೇತನ್‌ ಸಕಾ​ರಿಯಾ ತಲಾ 2 ವಿಕೆ​ಟ್‌ ಪಡೆ​ದಿ​ದ್ದಾರೆ.

ಸ್ಕೋರ್‌: 
ಬಂಗಾಳ 174/10 ಮತ್ತು 169/4 (ಅ​ನು​ಸ್ತುಪ್‌ 61, ತಿವಾರಿ 57*, ಉನಾ​ದ್ಕತ್‌ 2-47) 
ಸೌರಾಷ್ಟ್ರ 404/10(ವ​ಸ​ವಾಡ 81, ಚಿರಾಗ್‌ 60, ಮುಕೇಶ್‌ 4-111)

ಮೊದಲ ಟೆಸ್ಟ್‌: ಇಂಗ್ಲೆಂಡ್‌ ವಿರುದ್ಧ ಸೋಲಿ​ನತ್ತ ಕಿವೀ​ಸ್‌

ಮೌಂಟ್‌ ಮ್ಯಾಂಗ​ನು​ಯಿ: ಇಂಗ್ಲೆಂಡ್‌ ವಿರು​ದ್ಧದ ಮೊದಲ ಟೆಸ್ಟ್‌ ಪಂದ್ಯ​ದಲ್ಲಿ ಆತಿ​ಥೇಯ ನ್ಯೂಜಿ​ಲೆಂಡ್‌ ಸೋಲಿ​ನತ್ತ ಮುಖ​ಮಾ​ಡಿದೆ. ಗೆಲು​ವಿಗೆ 394 ರನ್‌ ಗುರಿ ಪಡೆ​ದಿ​ರುವ ಕಿವೀಸ್‌ 3ನೇ ದಿನ​ದಂತ್ಯಕ್ಕೆ 5 ವಿಕೆ​ಟ್‌ಗೆ 63 ರನ್‌ ಕಲೆ​ಹಾ​ಕಿ​ದ್ದು, ಇನ್ನೂ 331 ರನ್‌ ಗಳಿ​ಸಬೇ​ಕಿದೆ. 

28ಕ್ಕೆ ಪ್ರಮುಖ 5 ವಿಕೆಟ್‌ ಕಳೆ​ದು​ಕೊಂಡ ತಂಡಕ್ಕೆ ಡ್ಯಾರಿಲ್‌ ಮಿಚೆ​ಲ್‌​(13), ಬ್ರೇಸ್‌​ಬೆ​ಲ್‌​(25) ಆಸ​ರೆ​ಯಾ​ಗಿದ್ದು, ಸೋಲು ತಪ್ಪಿ​ಸಲು ಹೋರಾ​ಡು​ತ್ತಿ​ದ್ದಾರೆ. ಬ್ರಾಡ್‌ 21ಕ್ಕೆ 4 ವಿಕೆಟ್‌ ಕಿತ್ತರು. 19 ರನ್‌ ಮುನ್ನ​ಡೆ​ಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ್ದ ಇಂಗ್ಲೆಂಡ್‌ ಶನಿ​ವಾರ 374ಕ್ಕೆ ಆಲೌ​ಟಾ​ಯಿ​ತು.

ಅತಿ​ಹೆಚ್ಚು ಟೆಸ್ಟ್‌ ವಿಕೆ​ಟ್‌: ಜಿಮ್ಮಿ-ಬ್ರಾಡ್‌ ದಾಖ​ಲೆ!

ಮೌಂಟ್‌ ಮ್ಯಾಂಗ​ನು​ಯಿ: ಟೆಸ್ಟ್‌ ಕ್ರಿಕೆ​ಟ್‌​ನಲ್ಲಿ ಜೊತೆ​ಯಾಗಿ ಆಡಿ ಅತಿಹೆಚ್ಚು ವಿಕೆಟ್‌ ಕಬ​ಳಿ​ಸಿದ ಜೋಡಿ ಎಂಬ ದಾಖ​ಲೆ​ಯನ್ನು ಇಂಗ್ಲೆಂಡ್‌ನ ದಿಗ್ಗಜ ವೇಗಿ​ಗ​ಳಾದ ಜೇಮ್ಸ್‌ ಆ್ಯಂಡ​ರ್‌​ಸ​ನ್‌-ಸ್ಟುವರ್ಚ್‌ ಬ್ರಾಡ್‌ ತಮ್ಮ ಹೆಸ​ರಿಗೆ ಬರೆ​ದಿದೆ. 

Eng vs NZ: ಗುರು ಬ್ರೆಂಡನ್‌ ಮೆಕ್ಕಲಂ ಅಪರೂಪದ ದಾಖಲೆ ಮುರಿದ ಬೆನ್ ಸ್ಟೋಕ್ಸ್‌..!

ನ್ಯೂಜಿ​ಲೆಂಡ್‌ ವಿರು​ದ್ಧದ ಮೊದಲ ಟೆಸ್ಟ್‌​ನ​ಲ್ಲಿ ಡೆವೋನ್‌ ಕಾನ್‌ವೇ ಅವರನ್ನು ಬ್ರಾಡ್‌ ಔಟ್‌ ಮಾಡಿ ತಮ್ಮಿ​ಬ್ಬರ ವಿಕೆಟ್‌ ಗಳಿ​ಕೆ​ಯನ್ನು 1002ಕ್ಕೆ ಏರಿ​ಸಿ​ದರು. ಈ ಮೂಲಕ ಆಸ್ಪ್ರೇ​ಲಿ​ಯಾದ ಗ್ಲೆನ್‌ ಮೆಗ್ರಾ​ಥ್‌-ಶೇನ್‌ ವಾರ್ನ್‌ರ 1001 ವಿಕೆ​ಟ್‌(104 ಪಂದ್ಯ​)​ಗಳ ದಾಖ​ಲೆ​ಯನ್ನು ಮುರಿ​ದರು. ಆ್ಯಂಡ​ರ್‌​ಸ​ನ್‌-ಬ್ರಾಡ್‌ ಜೋಡಿ 133 ಪಂದ್ಯ​ಗ​ಳ​ಲ್ಲಿ ಜೊತೆ​ಯಾಗಿ ಆ​ಡಿ​ದ್ದಾರೆ. ಈ ಜೋಡಿ ಮೊದಲ ಬಾರಿ ಒಟ್ಟಾಗಿ ಟೆಸ್ಟ್‌ ಆಡಿದ್ದು 2008ರಲ್ಲಿ. ಟೆಸ್ಟ್‌​ನಲ್ಲಿ ಆ್ಯಂಡ​ರ್‌​ಸ​ನ್‌ 678, ಬ್ರಾಡ್‌ 571 ವಿಕೆಟ್‌ ಪಡೆ​ದಿ​ದ್ದಾರೆ.

ರೇಪ್‌: ಕ್ರಿಕೆಟಿಗ ಸಂದೀಪ್‌ ಕೈಕು​ಲು​ಕದ ಆಟ​ಗಾ​ರ​ರು

ಕಠ್ಮಂಡು: ಅತ್ಯಾ​ಚಾರ ಪ್ರಕ​ರ​ಣ​ದಲ್ಲಿ ಕಳೆದ ತಿಂಗಳು ಜಾಮೀ​ನ​ನಲ್ಲಿ ಬಿಡು​ಗ​ಡೆ​ಯಾ​ಗಿ​ರುವ ನೇಪಾಳ ಕ್ರಿಕೆ​ಟಿಗ ಸಂದೀಪ್‌ ಲಾಮಿ​ಚ್ಚಾನೆ ಅವರ ಜೊತೆ ಕೈಕು​ಲು​ಕಲು ಸ್ಕಾಟ್ಲೆಂಡ್‌ ಆಟ​ಗಾ​ರರು ನಿರಾ​ಕ​ರಿ​ಸಿದ ಘಟನೆ ನಡೆ​ಯಿತು. 

ತ್ರಿಕೋನ ಟಿ20 ಸರ​ಣಿಯ ಶುಕ್ರ​ವಾ​ರದ ಸ್ಕಾಟ್ಲೆಂಡ್‌ ವಿರು​ದ್ಧದ ಪಂದ್ಯ​ದಲ್ಲಿ ನೇಪಾಳ 3 ವಿಕೆಟ್‌ ಗೆಲುವು ಸಾಧಿ​ಸಿತು. ಪಂದ್ಯದ ಬಳಿಕ ಸ್ಕಾಟ್ಲೆಂಡ್‌ ಆಟ​ಗಾ​ರರು ನೇಪಾ​ಳ ಆಟ​ಗಾ​ರರ ಕೈಕು​ಲು​ಕಿ​ದರೂ ಸಂದೀ​ಪ್‌ ಜೊತೆ ಕೈಕು​ಲು​ಕದೆ ಮುಂದೆ ಸಾಗಿ​ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?