ಕಿಂಗ್‌ ಕೊಹ್ಲಿಗೆ ಹಾಂಕಾಂಗ್‌ ತಂಡದ ಸ್ಪೆಷಲ್‌ ಗಿಫ್ಟ್‌ 'ಒಂದು ಯುಗದ ಕ್ರಿಕೆಟಿಗರ ಸ್ಫೂರ್ತಿ ನೀವು' ಎಂದ ಟೀಮ್‌

By Santosh NaikFirst Published Sep 1, 2022, 4:39 PM IST
Highlights

ಏಷ್ಯಾಕಪ್‌ನಲ್ಲಿ ಹಾಂಕಾಂಗ್‌ ವಿರುದ್ಧ ಟೀಮ್‌ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಆ ಬಳಿಕ ಹಾಂಕಾಂಗ್‌ ತಂಡ ತನ್ನ ಎಲ್ಲಾ ಆಟಗಾರರ ಸಹಿ ಇದ್ದ ಟೀಮ್‌ ಜೆರ್ಸಿಯನ್ನು ವಿರಾಟ್‌ ಕೊಹ್ಲಿಗೆ ಉಡುಗೊರೆಯಾಗಿ ನೀಡಿದೆ. ಸ್ವತಃ ವಿರಾಟ್ ಕೊಹ್ಲಿ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಇದನ್ನು ಹಂಚಿಕೊಂಡಿದ್ದಾರೆ.
 

ದುಬೈ (ಸೆ. 1):  ಏಷ್ಯಾ ಕಪ್ 2022 ರ ತಂಡದ ಎರಡನೇ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ 44 ಎಸೆತಗಳಲ್ಲಿ 59 ರನ್ ಗಳಿಸಿದ ಭಾರತೀಯ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಕಿಂಗ್ ಕೊಹ್ಲಿ ಫಾರ್ಮ್‌ಗೆ ಮರಳಿ ಅರ್ಧಶತಕ ಬಾರಿಸಿದರೆ, ಭಾರತದ ಕ್ರಿಕೆಟ್‌ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿತ್ತು. ಪಂದ್ಯ ಮುಗಿದ ಬಳಿಕ ವಿರಾಟ್‌ ಕೊಹ್ಲಿ ಎದುರಾಳಿ ತಂಡದಿಂದ ಹೃದಯಸ್ಪರ್ಶಿ ಉಡುಗೊರೆಯನ್ನೂ ಪಡೆದುಕೊಂಡರು. ಇದನ್ನು ಕಿಂಗ್‌ ಕೊಹ್ಲಿ ಇನ್ಸ್‌ಟಾಗ್ರಾಮ್‌ನಲ್ಲಿಯೂ ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್‌ನಲ್ಲಿ ವಿರಾಟ್‌ ಕೊಹ್ಲಿ ಕೆಟ್ಟ ಫಾರ್ಮ್‌ನಲ್ಲಿದ್ದರು ಎನ್ನುವುದು ಜಗತ್ತಿಗೆ ಗೊತ್ತಾಗಿತ್ತು. ಸ್ವತಃ ವಿರಾಟ್‌ ಕೊಹ್ಲಿ ಕೂಡ ಇದನ್ನು ಒಪ್ಪಿಕೊಂಡಿದ್ದರು. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಉತ್ತಮವಾಗಿ ಪ್ರದರ್ಶನ ತೋರಿದ್ದ ವಿರಾಟ್‌ ಕೊಹ್ಲಿ, ಹಾಂಕಾಂಗ್‌ನಲ್ಲಿ ಇದೇ ಆಟವನ್ನು ಮುಂದುವರಿಸಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಸೂರ್ಯಕುಮಾರ್‌ ಯಾದವ್‌, ಸ್ಫೋಟಕ ಆಟವಾಡುವ ಮೂಲಕ, ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರೆ, ವಿರಾಟ್‌ ಕೊಹ್ಲಿ ಆಡಿದ ಅರ್ಧತಕದ ಇನ್ನಿಂಗ್ಸ್‌ ಭಾರತದ ಬ್ಯಾಟಿಂಗ್‌ ಅನ್ನು ಆಧರಿಸಿತ್ತು.

ಪಂದ್ಯ ಮುಕ್ತಾಯವಾದ ಬಳಿಕ, ಹಾಂಕಾಂಗ್‌ ಕ್ರಿಕೆಟ್‌ ಟೀಮ್‌, ವಿರಾಟ್‌ ಕೊಹ್ಲಿಗೆ ಸಂದೇಶವಿದ್ದ ಹಾಗೂ ಆಟಗಾರರ ಸಹಿ ಇದ್ದ ಜೆರ್ಸಿಯನ್ನು ಗಿಫ್ಟ್  (HongKong Team Jersey) ಆಗಿ ನೀಡಲಾಯಿತು. "ವಿರಾಟ್‌, ಒಂದು ಯುಗಕ್ಕೆ ಸ್ಪೂರ್ತಿಯಾಗಿದ್ದಕ್ಕೆ ಥ್ಯಾಂಕ್‌ ಯು. ನಾವು ನಿಮ್ಮೊಂದಿಗಿದ್ದೇವೆ. ಮುಂದೆ ಸಾಕಷ್ಟು ಸ್ಮರಣೀಯ ದಿನಗಳು ನಿಮ್ಮ ಮುಂದಿವೆ. ಬಲದೊಂದಿಗೆ, ಪ್ರೀತಿಯೊಂದಿಗೆ, ಟೀಮ್‌ ಹಾಂಕಾಂಗ್‌' ಎನ್ನುವ ಸಂದೇಶವನ್ನು ಅದರಲ್ಲಿ ಬರೆಯಲಾಗಿದೆ.

ವಿರಾಟ್‌ ಕೊಹ್ಲಿ ಇನ್ಸ್‌ಟಾಗ್ರಾಮ್‌ನಲ್ಲಿ ಜೆರ್ಸಿಯ ಚಿತ್ರದೊಂದಿಗೆ ಇದನ್ನು ಹಂಚಿಕೊಂಡಿದ್ದಾರೆ. ಥ್ಯಾಂಕ್‌ ಯು ಹಾಂಕಾಂಗ್‌ ಕ್ರಿಕೆಟ್‌. ನಿಮ್ಮ ಈ ಪ್ರೀತಿ ಬಹಳ ವಿನಮ್ರವಾಗಿತ್ತು. ಬಹಳ ಬಹಳ ಖುಷಿಕೊಟ್ಟಿದೆ' ಎಂದು ಬರೆದುಕೊಂಡಿದ್ದಾರೆ.

ASIA CUP ಹಾಂಕಾಂಗ್ ವಿರುದ್ದ ಭಾರತಕ್ಕೆ 40 ರನ್ ಗೆಲುವು, ಸೂಪರ್ 4 ಹಂತಕ್ಕೆ ಲಗ್ಗೆ!

ವಿರಾಟ್‌ ಕೊಹ್ಲಿ (Virat Kohli)  ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರ ಅರ್ಧತಕಗಳ ಮೂಲ, ದುಬೈ ಕ್ರಿಕೆಟ್‌ ಸ್ಟೇಡಿಯಂನಲ್ಲಿ (Dubai Cricket Stadium) ಕಳೆದ 14 ಟಿ20 ಪಂದ್ಯಗಳಲ್ಲಿ ಯಶಸ್ವಿಯಾಗಿ ರನ್‌ ಅನ್ನು ರಕ್ಷಣೆ ಮಾಡಿಕೊಂಡ ಮೊದಲ ತಂಡ ಎನ್ನುವ ದಾಖಲೆಯನ್ನೂ ಭಾರತ ಈ ವೇಳೆ ಮಾಡಿದೆ. 2019ರ ನವೆಂಬರ್ನಲ್ಲಿ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಪಿಎನ್‌ಜಿ 130 ರನ್‌ಗಳನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.  ಸೂರ್ಯಕುಮಾರ್‌ ಯಾದವ್‌ 26 ಎಸೆತಗಳಲ್ಲಿ 68 ರನ್ ಬಾರಿಸಿ ಗಮನಸೆಳೆದರೆ, ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಕೂಡ ಅದ್ಭುತವಾಗಿ ಆಟವಾಡಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 34 ಎಸೆತಗಳಲ್ಲಿ 35 ರನ್‌ ಬಾರಿಸಿದ್ದ ಕೊಹ್ಲಿ, ಹಾಂಕಾಂಗ್‌ ವಿರುದ್ಧ 44 ಎಸೆತಗಳಲ್ಲಿ 59 ರನ್‌ ಬಾರಿಸುವ ಮೂಲಕ ಅಜೇಯರಾಗುಳಿದಿದ್ದರು. ಇದರಿಂದಾಗಿ ಟೀಮ್‌ ಇಂಡಿಯಾ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 192 ರನ್ ಬಾರಿಸಿತ್ತು.

ICC Rankings ಪಾಕ್ ವಿರುದ್ಧ ಅಬ್ಬರಿಸಿದ ಹಾರ್ದಿಕ್ ಪಾಂಡ್ಯಗೆ ಗುಡ್ ನ್ಯೂಸ್!

ಹಾಂಕಾಂಗ್‌ ವಿರುದ್ಧದ ಗೆಲುವಿನೊಂದಿಗೆ ರೋಹಿತ್‌ ಶರ್ಮ ನೇತೃತ್ವದ ಟೀಮ್‌ ಇಂಡಿಯಾ ಸೂಪರ್‌ 4 ಹಂತಕ್ಕೆ ಪ್ರವೇಶ ಪಡೆದಿದೆ. ಆ ಮೂಲಕ ಅಫ್ಘಾನಿಸ್ತಾನ ನಂತರ ಸೂಪರ್‌-4ಗೆ ಅರ್ಹತೆ ಪಡೆದುಕೊಂಡ 2ನೇ ತಂಡ ಎನಿಸಿಕೊಂಡಿದೆ. ಮುಂದಿನ ಸುತ್ತಿನಲ್ಲಿ ಇನ್ನೂ ಎರಡು ತಂಡಗಳು ಅವರೊಂದಿಗೆ ಸೇರಿಕೊಳ್ಳುತ್ತವೆ, ಅಲ್ಲಿ ಪ್ರತಿ ತಂಡವು ಇತರ ಮೂರು ತಂಡಗಳೊಂದಿಗೆ ಪರಸ್ಪರ ಆಡುತ್ತದೆ, ಆ ಬಳಿಕ ಫೈನಲ್‌ ಪ್ರವೇಶಿಸುವ ತಂಡವನ್ನು ನಿರ್ಧಾರ ಮಾಡಲಾಗುತ್ತದೆ. ಭಾರತ ಇರುವ ಗುಂಪಿಯಲ್ಲಿ ಹಾಂಕಾಂಗ್‌ ಅಥವಾ ಪಾಕಿಸ್ತಾನ ತಂಡಗಳು ಮುಂದಿನ ಹಂತಕ್ಕೇರುವ ಅವಕಾಶವನ್ನು ಹೊಂದಿದೆ.

click me!