ಅಭಿಮಾನಿಗಳು ಸಿಕಂದರ್ ನೋಡುವ ಕಾತುರದಲ್ಲಿದ್ರೆ ಸಲ್ಮಾನ್ ಐಪಿಎಲ್ ವೀಕ್ಷಿಸುವ ಆತುರದಲ್ಲಿದ್ದಾರೆ. ತಮ್ಮಿಷ್ಟದ ಕ್ರಿಕೆಟರ್ ಯಾರು ಎಂಬುದನ್ನು ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ.
ಐಪಿಎಲ್ (IPL) ಶುರುವಾಗ್ತಿದ್ದಂತೆ ಕೂಲ್ ಕ್ಯಾಪ್ಟನ್ ಧೋನಿ (Cool Captain Dhoni) ಹೆಸರು ಎಲ್ಲೆಡೆ ಕೇಳಿ ಬರ್ತಿದೆ. ಮೈದಾನದಲ್ಲಿ ಧೋನಿ ಆಟ ನೋಡುವ ಕಾತರದಲ್ಲಿ ಫ್ಯಾನ್ಸ್ ಇದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ ನಂತ್ರ ಧೋನಿ ಕಾಣಿಸಿಕೊಳ್ಳೋದು ಐಪಿಎಲ್ ನಲ್ಲಿ ಮಾತ್ರ. ಧೋನಿ ಆಟ, ಅವ್ರ ಸ್ಟೈಲ್ ಕಣ್ತುಂಬಿಸಿಕೊಳ್ಳಲು ಫ್ಯಾನ್ಸ್ ಗೆ ಇದೊಂದೇ ಅವಕಾಶ ಇರೋದು. ಉಳಿದ ಟೈಂನಲ್ಲಿ ಧೋನಿ ಕಾಣಿಸಿಕೊಳ್ಳೋದೇ ಅಪರೂಪ. ಮೀಡಿಯಾದಿಂದ ಧೋನಿ ದೂರವಿದ್ರೂ ಅವರ ಫ್ಯಾನ್ಸ್ ಸಂಖ್ಯೆ ಕಡಿಮೆ ಏನಾಗಿಲ್ಲ. 43 ನೇ ವಯಸ್ಸಿನಲ್ಲಿಯೂ ಧೋನಿ ತಮ್ಮ ಸ್ಟಾರ್ಡಮ್ ಉಳಿಸಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಧೋನಿ ಫ್ಯಾನ್ಸ್. ಬಾಲಿವುಡ್ ದಬಾಂಗ್ ಸಲ್ಮಾನ್ ಖಾನ್ ಗೆ ಕೋಟ್ಯಾಂತರ ಮಂದಿ ಅಭಿಮಾನಿಗಳಿದ್ದಾರೆ. ಆದ್ರೆ ಸಲ್ಮಾನ್ ಮೆಚ್ಚಿಕೊಂಡಿರೋದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಹ್ಲಿಯವರನ್ನಲ್ಲ, ಕ್ಯಾಪ್ಟನ್ ಕೂಲ್ ಧೋನಿ ಅವರನ್ನು. ಧೋನಿ ಬಿಗ್ ಫ್ಯಾನ್ ಸಲ್ಮಾನ್ ಖಾನ್. ಧೋನಿ ಏಕೆ ಇಷ್ಟ ಎಂಬುದನ್ನು ಸಲ್ಮಾನ್ ಖಾನ್ ಹೇಳಿದ್ದಾರೆ.
ಧೋನಿ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು? : ಸದ್ಯವೇ ಐಪಿಎಲ್ ಹಬ್ಬ ಶುರುವಾಗಲಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಐಪಿಎಲ್ ತಂಡ ಹಾಗೂ ಆಟಗಾರರ ಬಗ್ಗೆ ಮಾತನಾಡ್ತಿದ್ದಾರೆ. ಇದ್ರಲ್ಲಿ ಸಲ್ಮಾನ್ ಖಾನ್ ಕೂಡ ಸೇರಿದ್ದಾರೆ. ಸದ್ಯ ಸಲ್ಮಾನ್ ಖಾನ್ ವಿಡಿಯೋ ಒಂದು ವೈರಲ್ ಆಗ್ತಿದೆ. ಅದ್ರಲ್ಲಿ ಸಲ್ಮಾನ್ ಖಾನ್, ಧೋನಿಯನ್ನು ಹೊಗಳಿದ್ದಾರೆ. ನಿಮಗೆ ಯಾರು ಇಷ್ಟ ಎನ್ನುವ ಪ್ರಶ್ನೆಗೆ ಸಲ್ಮಾನ್ ಖಾನ್, ಧೋನಿ ಹೆಸರನ್ನು ಹೇಳಿದ್ದಾರೆ. ನಾನು ಧೋನಿ ಅಭಿಮಾನಿ. ನನಗೆ ಧೋನಿ ವ್ಯಕ್ತಿತ್ವ ತುಂಬಾ ಇಷ್ಟ. ಅವರು ಸಜ್ಜನರ ಆಟವಾಗಿದ್ದ ಕ್ರಿಕೆಟನ್ನು ಮರಳಿ ತಂದಿದ್ದಾರೆ. ಅವರಲ್ಲಿ ಯಾವುದೇ ಆಕ್ರಮಣಕಾರಿ ಮನೋಭಾವ ಕಾಣಿಸುವುದಿಲ್ಲ. ಅವರು ಕೂಲ್. ವಿಕೆಟ್ ಪಡೆದಾಗ್ಲೂ ಹೆಚ್ಚು ಸದ್ದು ಮಾಡೋದಿಲ್ಲ. ಇತರರನ್ನು ಅವಮಾನಿಸುವುದಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಬ್ಯಾಟ್ಸ್‌ಮನ್‌ಗಳು
ಸಲ್ಮಾನ್ ಖಾನ್ ಹಾಗೂ ಧೋನಿ ಬಾಂಡಿಂಗ್ ಭಿನ್ನವಾಗಿದೆ. ಕಳೆದ ವರ್ಷ ಧೋನಿ, ತಮ್ಮ ಹುಟ್ಟುಹಬ್ಬವನ್ನು ಸಲ್ಮಾನ್ ಖಾನ್ ಜೊತೆ ಆಚರಿಸಿಕೊಂಡಿದ್ದರು. ಸಲ್ಮಾನ್ ಖಾನ್ ಈ ಸಂಭ್ರಮದ ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸಲ್ಮಾನ್ ಖಾನ್ ಮಾತ್ರವಲ್ಲ ಅನೇಕ ಅನೇಕ ಸೆಲೆಬ್ರಿಟಿಗಳು ಧೋನಿ ಫ್ಯಾನ್ಸ್. ಬಹುತೇಕರಿಗೆ ಧೋನಿಯ ಶಾಂತ ಸ್ವಭಾವ ತುಂಬಾ ಇಷ್ಟ. ಹೆಲಿಕಾಪ್ಟರ್ ಶಾಟ್ ನಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿರುವ ಧೋನಿ, ನಾಯಕತ್ವವನ್ನು ಅಚ್ಚುಕಟ್ಟಾಗಿ ನಿಭಾಯಿಸೋದ್ರಲ್ಲಿ ಮುಂದಿದ್ದಾರೆ. ಧೋನಿಗಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬೆಂಬಲ ನೀಡುವ, ಆಟ ವೀಕ್ಷಿಸುವ ಜನರ ಸಂಖ್ಯೆ ಹೆಚ್ಚಿದೆ.
IPL ಇತಿಹಾಸದಲ್ಲಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಟಾಪ್ 5 ಕ್ರಿಕೆಟರ್ಸ್!
ಮಾರ್ಚ್ 22ರಿಂದ ಐಪಿಎಲ್ ಶುರುವಾಗಲಿದೆ. ಮಾರ್ಚ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ ಆಗ್ತಿದೆ. ಧೋನಿ ಇಲ್ಲದೆ ಐಪಿಎಲ್ ಊಹಿಸಿಕೊಳ್ಳೋದು ಅನೇಕರಿಗೆ ಕಷ್ಟ. ಧೋನಿ ಆಟದಿಂದ ಮಾತ್ರವಲ್ಲ ತಮ್ಮ ಹೇರ್ ಸ್ಟೈಲ್ ನಿಂದಲೂ ಗಮನ ಸೆಳೆಯುತ್ತಾರೆ. ಹಿಂದೆ ಧೋನಿಯ ಅನೇಕ ಹೇರ್ ಸ್ಟೈಲ್ ಟ್ರೆಂಡ್ ಆಗಿತ್ತು. ಈಗ ಐಪಿಎಲ್ ಗೂ ಮುನ್ನವೇ ಧೋನಿ ಹೊಸ ಹೇರ್ಸ್ಟೈಲ್ ಸುದ್ದಿ ಮಾಡಿದೆ. ಆನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಹೇರ್ ಸ್ಟೈಲ್ ನಂತೆ ಹೇರ್ ಸ್ಟೈಲ್ ಮಾಡಿಸಿಕೊಂಡು ಜಾಹೀರಾತು ಶೂಟ್ ಮಾಡಿದ್ದಾರೆ ಧೋನಿ. ಧೋನಿ ಸ್ಟೈಲ್ ಹಾಗೂ ಹೇರ್ ಸ್ಟೈಲ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
🗣 "Mujhe unki personality bohot pasand hai" - When a Bollywood star hails Captain Cool, you know it's MS Dhoni, 𝙮𝙚𝙝 𝙄𝙋𝙇 𝙝𝙖𝙞, 𝙮𝙖𝙝𝙖𝙣 𝙨𝙖𝙗 𝙥𝙤𝙨𝙨𝙞𝙗𝙡𝙚 𝙝𝙖𝙞! 🤩
Get ready to watch in action again! 😍 👉 SEASON OPENER … pic.twitter.com/9zszS2Rfpk