ಅಯ್ಯೋ, ಗಿಲ್ ಕೆನ್ನೆಗೆ ಏನಾಯ್ತು.. ಹಣೆಗೆ ಅಂಟಿಸಿದ ಸಾಧನ ಕಂಡು ಗಾಬರಿಯಾದ ಫ್ಯಾನ್ಸ್, ಏನದು?

Published : Oct 29, 2026, 03:49 PM IST
Shubman Gill Temple Gadget

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಅಭ್ಯಾಸ ನಡೆಸುತ್ತಿರುವ ಶುಬ್ಮನ್ ಗಿಲ್ ಅವರ ಮುಖದ ಮೇಲಿದ್ದ ವಿಚಿತ್ರ ಸಾಧನವೊಂದು ಕುತೂಹಲ ಮೂಡಿಸಿದೆ.

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡವು ನವೆಂಬರ್ 4 ರಿಂದ ಏಕದಿನ ಸರಣಿ ಆಡಲಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಭರ್ಜರಿ ಅಭ್ಯಾಸ ಆರಂಭಿಸಿದೆ. ಶುಬ್ಮನ್ ಗಿಲ್, ಗುರ್ನೂರ್ ಬ್ರಾರ್, ಕೆಎಲ್ ರಾಹುಲ್ ಅವರು ಈಗಾಗಲೇ ಬೀಟು ಬಿಟ್ಟಿರುವ ಟಿ20 ಟೀಂ ಇಂಡಿಯಾ ಜೊತೆ ಜಾಯಿನ್ ಆಗಿದ್ದಾರೆ.

ಅಂತೆಯೇ ನಾಯಕ ಶುಬ್ಮನ್ ಗಿಲ್, ಅಭಿಷೇಕ್ ಶರ್ಮಾ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಗುರ್ನೂರ್ ಬ್ರಾರ್ ಮತ್ತು ಕೆಎಲ್ ರಾಹುಲ್ ಕೂಡ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ಮಧ್ಯೆ ಗಿಲ್‌ಗೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನ ಹುಟ್ಟುಹಾಕಿದೆ. ಅದು ಬೇರೆ ಏನೂ ಅಲ್ಲ. ಶುಬ್ಮನ್ ಗಿಲ್ ಅವರ ಕೆನ್ನೆ ಮೇಲಿರುವ ಒಂದು ಡಿವೈಸ್. ಅದನ್ನು ನೋಡಿದ ಅಭಿಮಾನಿಗಳು ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದಾರೆ. ಗಿಲ್‌ಗೆ ಏನಾಯ್ತು ಏನಾಯ್ತು ಎಂದು ಯೋಚಿಸಿದ್ದಾರೆ..

ಗಿಲ್ ಕೆನ್ನೆ ಮೇಲೆ ಇರೋದು ಏನು?

ಅಂದಹಾಗೆ ಗಿಲ್ ಕೆನ್ನೆ ಮೇಲೆ ಇರೋದು ಒಂದು ಎಲೆಕ್ಟ್ರಾನಿಕ್ ಡಿವೈಸ್. TEMPLE ಎಂಬ ಫಿಟ್ನೆಸ್ ಟ್ರ್ಯಾಕರ್ ಆಗಿದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋದಾದರೆ.. ಈ ಚಿನ್ನದ ಬಣ್ಣದ ಸಾಧನಕ್ಕೆ TEMPLE ಎಂದು ನಾಮಕರಣ ಮಾಡಲಾಗಿದೆ. ಇದನ್ನು ಜೊಮೊಟೋ ಸಹ ಸಂಸ್ಥಾಪಕ ದೀಪಿಂದರ್ ಯೋಯಲ್ ಅಭಿವೃದ್ಧಿಪಡಿಸಿದ್ದಾರೆ. ಸಣ್ಣ ಸ್ಟಾರ್ಟ್‌ಅಪ್ ಮೂಲಕ ಇದನ್ನು ಅಭಿವೃದ್ಧಿಪಡಸಿದ್ದು, ಇದರ ಬೆಲೆ ಬರೋಬ್ಬರಿ 84,999 ರೂಪಾಯಿ ಆಗಿದೆ. ನವೆಂಬರ್ 1 ರಿಂದ ಅಡ್ವಾನ್ಸ್ ಬುಕಿಂಗ್ ಶುರುವಾಗಲಿದೆ.

ಏನು ಪ್ರಯೋಜನ?

ಫಿಟ್ನೆಸ್ ಕೇಂದ್ರಿತವಾಗಿರುವ TEMPLE ಗ್ಯಾಜೆಟ್ ಅನ್ನು ಗಿಲ್ ತಮ್ಮ ಹಣೆಯ ಮೇಲೆ ಧರಿಸಿದ್ದರು. ಇದು ಸ್ಮಾರ್ಟ್‌ ಬ್ಯಾಂಡ್, ಸ್ಮಾರ್ಟ್‌ ವಾಚ್‌ಗಿಂತ ಭಿನ್ನವಾಗಿದೆ. ಕಂಪನಿ ಹೇಳಿಕೊಂಡಿರುವ ಪ್ರಕಾರ.. ಅದು ಮೆದುಳಿನಲ್ಲಿ ರಕ್ತದ ಹರಿವನ್ನು ಪರೀಕ್ಷೆ ಮಾಡುತ್ತದೆ. ಹಣೆಯ ಮೇಲೆ ಅದನ್ನು ಇಟ್ಟರೆ.. ದೇಹದ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ.

ಇದು ಎರಡು ವಿಶೇಷ ಲಕ್ಷಣಗಳನ್ನ ಹೊಂದಿದೆ. ಒಂದು ಬ್ರೈನ್ ಫ್ಲೋ ತಪಾಸಣೆ ಮಾಡುತ್ತದೆ. ಅಂದರೆ ಮೆದುಳಿನಲ್ಲಿ ರಕ್ತದ ಹರಿವನ್ನು ಮತ್ತು ರಕ್ತದಿಂದ ಬರುವ ಸಂಕೇತಗಳನ್ನ ಟ್ರಾಕ್ ಮಾಡುತ್ತದೆ. ಎರಡನೇಯದು ಏನೆಂದರೆ.. Entropy Score. ಇದು ದೇಹದಲ್ಲಿ ಸಂಭವಿಸುವ ಬದಲಾವಣೆಗಳ ಆಧಾರದ ಮೇಲೆ ಒಂದರಿಂದ 250ರೊಳಗೆ ಅಂಕಗಳನ್ನು ನೀಡುತ್ತದೆ.

ಹೇಗೆ ಕೆಲಸ ಮಾಡುತ್ತದೆ?

ಇದು ಫೋಟೋಪ್ಲೇಥಿಸ್ಮೋಗ್ರಫಿ ಟೆಕ್ನಾಲಜಿಯನ್ನ ಬಳಸುತ್ತದೆ. ಈ ತಂತ್ರಜ್ಞಾನವು ಫಿಟ್ನೆಸ್‌ ಬ್ಯಾಂಡ್‌ಗಳು ಸ್ಮಾರ್ಟ್‌ಬ್ಯಾಂಡ್‌ಗಳಲ್ಲಿಯೂ ಕಂಡುಬರುತ್ತದೆ. ಪಿಪಿಜಿ ತಂತ್ರಜ್ಞಾನವು ರಕ್ತದ ಹರಿವಿನಲ್ಲಿನ ಬದಲಾವಣೆಗಳನ್ನು ಪತ್ತೆ ಹಚ್ಚಲು ಚರ್ಮವನ್ನು ಬೇಧಿಸುವ ಬೆಳಕನ್ನು ಬಳಸುತ್ತದೆ ಎಂದು ಹೇಳಲಾಗಿದೆ.

ನ್ಯೂಜೆಲೆಂಡ್ ವಿರುದ್ಧ ಭಾರತ ಒಟ್ಟು ಐದು ಏಕದಿನ ಪಂದ್ಯಗಳನ್ನ ಆಡಲಿದೆ. ಕೊನೆಯ ಎರಡು ಪಂದ್ಯಗಳಿಗೆ ಗಿಲ್ ಅವರು ಅಲಭ್ಯರಾಗಲಿದ್ದಾರೆ. ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ಗಿಲ್ ಅಭ್ಯಾಸಕ್ಕೆ ತೆರಳಲಿದ್ದಾರೆ. ಉಳಿದ ಎರಡು ಪಂದ್ಯಗಳನ್ನ ಶ್ರೇಯಸ್ ಅಯ್ಯರ್ ಅವರು ಮುನ್ನಡೆಸಲಿದ್ದಾರೆ. ಈಗಾಗಲೇ ಟಿ-20 ಸಿರೀಸ್‌ ಗೆದ್ದಿರುವ ಭಾರತ ಏಕದಿನ ಮತ್ತು ಟೆಸ್ಟ್ ಸರಣಿ ಮೇಲೆ ಕಣ್ಣಿಟ್ಟಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ಬಾಲ್ಯದ ಗೆಳತಿಯೊಂದಿಗೆ ಮದುವೆ, ಮಲೈಕಾ ಜತೆ ಡೇಟಿಂಗ್? ಈಗೇಕೆ ಸುದ್ದಿಯಲ್ಲಿದ್ದಾರೆ ಕುಮಾರ್ ಸಂಗಕ್ಕಾರ?
IND vs NZ 4th T20I: ಇಶಾನ್ ಕಿಶನ್ ಕಮ್‌ಬ್ಯಾಕ್ ಮಾಡಿದ್ರೆ, ವೈಭವ್ ಸೂರ್ಯವಂಶಿ ಯಾವ ಕ್ರಮಾಂಕದಲ್ಲಿ ಆಡ್ತಾರೆ?