ಗಿಲ್ಲಿ ದಾಂಡು ಆಡೋ ರೀತಿಯಲ್ಲಿ ಗುವಾಹಟಿಯಲ್ಲಿ ಅಬ್ಬರಿಸಿದ ಶುಭ್‌ಮನ್‌ ಗಿಲ್‌, ಜಸ್ಟ್‌ ಚಿಲ್‌ ಆಗಿ 406 ರನ್‌ ಚೇಸ್‌ ಮಾಡಿದ ಟೀಮ್‌ ಇಂಡಿಯಾ

Published : Sep 30, 2026, 10:15 PM ISTUpdated : Sep 30, 2026, 10:22 PM IST
Shubman Gill Fastest Double Century

ಸಾರಾಂಶ

ಗುವಾಹಟಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 406 ರನ್‌ಗಳ ಬೃಹತ್ ಗುರಿಯನ್ನು ಟೀಮ್ ಇಂಡಿಯಾ ಸುಲಭವಾಗಿ ಬೆನ್ನಟ್ಟಿದೆ. ಶುಭ್‌ಮನ್ ಗಿಲ್ ಅವರ ಐತಿಹಾಸಿಕ ದ್ವಿಶತಕ ಹಾಗೂ ರೋಹಿತ್ ಶರ್ಮಾ ಅವರ ಶತಕದ ನೆರವಿನಿಂದ ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಗುವಾಹಟಿ (ಸೆ.30): ಶುಭ್‌ಮನ್‌ ಗಿಲ್‌. ಟೀಮ್‌ ಇಂಡಿಯಾ ಕ್ಯಾಪ್ಟನ್‌ ಏಕದಿನ ಕ್ರಿಕೆಟ್‌ ಇತಿಹಾಸದ ಅತ್ಯಂತ ವೇಗದ ದ್ವಿಶತಕ ಬಾರಿಸುವ ಮೂಲಕ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್‌ ಇಂಡಿಯಾಗೆ 8 ವಿಕೆಟ್‌ಗಳ ಸುಲಭ ಗೆಲುವಿಗೆ ಕಾರಣರಾದರು. ಬರ್ಸಾಪರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌ ತಮ್ಮ ಮೂವರು ಬ್ಯಾಟ್ಸ್‌ಮನ್‌ಗಳ ಸ್ಫೋಟಕ ಶತಕದಂದ 7 ವಿಕೆಟ್ಗೆ 405 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತ್ತು. ಆದರೆ, ವಿಂಡೀಸ್‌ನ ದುರ್ಬಲ ಬೌಲಿಂಗ್‌ ಹಾಗೂ ಭಾರತದ ಅಗಾಧ ಬ್ಯಾಟಿಂಗ್‌ ಶಕ್ತಿಯ ಅರವಿದ್ದ ಟೀಮ್‌ ಇಂಡಿಯಾ ಅಭಿಮಾನಿಗಳು ತಂಡದ ಸುಲಭ ಗೆಲುವನ್ನು ಅಂದಾಜು ಮಾಡಿದ್ದರು. ಅದರಂತೆ ಬ್ಯಾಟಿಂಗ್‌ ಮಾಡಿದ ರೋಹಿತ್‌ ಶರ್ಮ ಹಾಗೂ ಶುಭ್‌ಮನ್‌ ಗಿಲ್‌ ಮೊದಲ ವಿಕೆಟ್‌ಗೆ 255 ರನ್‌ಗಳ ಜೊತೆಯಾಟವಾಡಿ ಗೆಲುವನ್ನು ಸುಲಭ ಮಾಡಿದ್ದರು.

ಸಾಮಾನ್ಯವಾಗಿ 406 ರನ್‌ಗಳ ಚೇಸಿಂಗ್‌ ಎನ್ನುವಾಗ ಬೆನ್ನಟ್ಟುವ ತಂಡ ವಿಚಲಿತವಾಗುವುದು ಸಹಜ. ಆದರೆ, ಟೀಮ್‌ ಇಂಡಿಯಾ ಬ್ಯಾಟಿಂಗ್‌ನಲ್ಲಿ ಅದರ ಕೊಂಚ ಸುಳಿವೂ ಕೂಡ ಇದ್ದಿರಲಿಲ್ಲ. ಅಷ್ಟಕ್ಕೂ ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಮಾಡಿದ್ದು ಬ್ಯಾಟಿಂಗ್‌ ರೀತಿಯೇ ಇದ್ದಿರಲಿಲ್ಲ. ಕ್ರಿಕೆಟ್‌ ಮೈದಾನದಲ್ಲಿ ಗಿಲ್ಲಿ ದಾಂಡು ಆಡಿದ ರೀತಿಯಲ್ಲಿ ವಿಂಡೀಸ್‌ ಬೌಲರ್‌ಗಳನ್ನು ಚಚ್ಚಿ ಹಾಕಿದರು.

ಇದರಿಂದಾಗಿ ವೆಸ್ಟ್‌ ಇಂಡೀಸ್‌ನ ಅಗಾಧ ಮೊತ್ತ ಭಾರತಕ್ಕೆ ಸವಾಲೇ ಎನಿಸಿರಲಿಲ್ಲ. ಬಹುಶಃ 500 ರನ್‌ ಬಾರಿಸಿದ್ದರೂ ಟೀಮ್‌ ಇಂಡಿಯಾ ಅದನ್ನು ಚೇಸ್‌ ಮಾಡುವ ಸಾಮರ್ಥ್ಯವನ್ನು ಇಂದಿನ ಪಂದ್ಯದಲ್ಲಿ ಹೊಂದಿತ್ತು. ಆರಂಭಿಕ ಆಟಗಾರ ರೋಹಿತ್‌ ಶರ್ಮ ಕೇವಲ 75 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಅಮೋಘ ಸಿಕ್ಸರ್‌ಗಳ ಮೂಲಕ 101 ರನ್‌ ಬಾರಿಸಿದರೆ, ವಿರಾಟ್‌ ಕೊಹ್ಲಿ 19 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ ಇದ್ದ 29 ರನ್‌ ಬಾರಿಸಿ ನಿರ್ಗಮಿಸಿದರು.

ತಮ್ಮ ಟ್ರೇಡ್‌ಮಾರ್ಕ್‌ ಸ್ಟೈಲ್‌ ಫ್ಲಿಕ್‌ ಮೂಲಕವೇ ಅಧಿಕ ರನ್‌ ಬಾರಿಸಿದ ಶುಭ್‌ಮನ್‌ ಗಿಲ್‌, ತಮ್ಮ ವಿಶ್ವದಾಖಲೆಯ ಇನ್ನಿಂಗ್ಸ್‌ನಲ್ಲಿ 133 ಎಸೆತ ಎದುರಿಸಿದರು. ಇದರಲ್ಲಿ 8 ಸಿಕ್ಸರ್‌, 26 ಬೌಂಡರಿಯೊಂದಿಗೆ 223 ರನ್‌ ಬಾರಿಸಿ ಅಜೇಯರಾಗುಳಿದರು. ಇವರಿಗೆ ಸಾಥ್‌ ನೀಡಿದ ರುತುರಾಜ್‌ ಗಾಯಕ್ವಾಡ್‌ 37 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 31 ರನ್‌ ಬಾರಿಸಿ ತಂಡದ 8 ವಿಕೆಟ್‌ ಗೆಲುವಿಗೆ ನೆರವಾದರು. 43.3 ಓವರ್‌ಗಳಲ್ಲಿ 2 ವಿಕೆಟ್‌ಗೆ 406 ರನ್‌ ಬಾರಿಸಿ ಭಾರತ ಜಯದ ದಡ ಸೇರಿತು.

ಸಲೀಸಾಗಿ ಸರಣಿ ಗೆದ್ದ ಭಾರತ

ಈ ಪಂದ್ಯದ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನೂ ಗೆದ್ದುಕೊಂಡಿದೆ. ತಿರುವನಂತಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‌ನಿಂದ ಗೆದ್ದಿದ್ದ ಭಾರತ,ಗುವಾಹಟಿಯಲ್ಲೂ ಇಷ್ಟೇ ವಿಕೆಟ್‌ಗಳ ಅಂತರದಲ್ಲಿ ಗೆದ್ದಿದೆ. ಮೂರನೇ ಏಕದಿನ ಪಂದ್ಯ ಅಕ್ಟೋಬರ್‌ 3 ರಂದು ನ್ಯೂ ಚಂಡೀಗಢದ ಪಿಸಿಎ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆಯಲಿದೆ.

ಹೊಸ ದಾಖಲೆಗಳ ಬರೆದ ಭಾರತ

ವಿಶ್ವ ಕ್ರಿಕೆಟ್‌ನಲ್ಲಿ 400 ಪ್ಲಸ್‌ ರನ್‌ ಅನ್ನು ಯಶಸ್ವಿಯಾಗಿ ಚೇಸ್‌ ಮಾಡಿದ್ದು ಇದು 2ನೇ ಬಾರಿ. ಇದಕ್ಕೂ ಮುನ್ನ 2006ರಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾದ 438 ರನ್‌ ಚೇಸ್‌ ಮಾಡಿ ಇತಿಹಾಸ ರಚಿಸಿತ್ತು. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 400ಕ್ಕೂ ಅಧಿಕ ರನ್‌ ಅನ್ನು ಭಾರತ ಪೇರಿಸಿದ್ದು ಇದು 9ನೇ ಬಾರಿ. ಆ ಮೂಲಕ ಏಕದಿನದಲ್ಲಿ ಗರಿಷ್ಠ ಬಾರಿ 400 ಪ್ಲಸ್‌ ರನ್‌ ಬಾರಿಸಿದ ಟೀಮ್‌ ಎನಿಸಿಕೊಂಡಿದೆ. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ (8), ಇಂಗ್ಲೆಂಡ್‌ (7), ಆಸ್ಟ್ರೇಲಿಯಾ (3), ನ್ಯೂಜಿಲೆಂಡ್‌, ಶ್ರೀಲಂಕಾ (2) ಹಾಗೂ ವೆಸ್ಟ್‌ ಇಂಡೀಸ್‌, ಜಿಂಬಾಬ್ವೆ (1) ಇವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫಾಸ್ಟೆಸ್ಟ್ ಡಬಲ್ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ಬರೆದ ಶುಬ್‌ಮನ್ ಗಿಲ್, ಕಂಗಾಲದ ವೆಸ್ಟ್ ಇಂಡೀಸ್
ಗುವಾಹಟಿಯಲ್ಲಿ ಅಬ್ಬರಿಸಿದ ಭಾರತ: ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ