
ಲಾಹೋರ್(ಜ.25): ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ಬರೋಬ್ಬರಿ 7 ಟಿ20 ಸೋಲಿನ ಬಳಿಕ ಪಾಕ್ ಗೆಲುವಿನ ಹಳಿಗೆ ಮರಳಿದೆ.
ಬಾಂಗ್ಲಾ ವಿರುದ್ಧ ಸರಣಿಗೆ ತಂಡ ಕೂಡಿಕೊಂಡ ಶೋಯೆಬ್ ಮಲಿಕ್ ಆಕರ್ಷಕ ಅಜೇಯ ಅರ್ಧಶತಕ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜತೆಗೆ ಧೋನಿ-ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮಲಿಕ್ 17 ಬಾರಿ ಯಶಸ್ವಿ ಮ್ಯಾಚ್ ಫಿನೀಶರ್ ಎನಿಸಿಕೊಂಡರು. ಈ ಮೊದಲು ಧೋನಿ ಹಾಗೂ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಚೇಸಿಂಗ್ ಮಾಡುವ ವೇಳೆ 15 ಬಾರಿ ಅಜೇಯರಾಗುಳಿದು ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಶೋಯೆಬ್ ಮಲಿಕ್
ಶೋಯಿಬ್ ಮಲಿಕ್ ಅಜೇಯ ಅರ್ಧಶತಕದ ನೆರವಿನಿಂದ ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಪಾಕಿಸ್ತಾನ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಬಾಂಗ್ಲಾ ನೀಡಿದ 142 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ, ಹಸನ್ ಅಲಿ (36), ಮಲಿಕ್ (ಅಜೇಯ 58) ಜವಬ್ದಾರಿಯುತ ಆಟದಿಂದಾಗಿ 19.3 ಓವರಲ್ಲಿ 5 ವಿಕೆಟ್‌ಗೆ 142 ರನ್‌ಗಳಿಸಿತು. ಮೊಹಮದ್ ನಯೀಮ್ (43) ಹೋರಾಟದ ಹೊರತಾಗಿಯೂ ಬಾಂಗ್ಲಾ 20 ಓವರಲ್ಲಿ 5 ವಿಕೆಟ್‌ಗೆ 141 ರನ್ ಗಳಿಸಿತು.
ಸ್ಕೋರ್:
ಬಾಂಗ್ಲಾದೇಶ 141/5
ಪಾಕಿಸ್ತಾನ 142/5
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.