* 43ನೇ ವಸಂತಕ್ಕೆ ಕಾಲಿರಿಸಿದ ವಿರೇಂದ್ರ ಸೆಹ್ವಾಗ್
* ಸೆಹ್ವಾಗ್ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭಕೋರಿದ ಡೇಲ್ ಸ್ಟೇನ್
* ಸ್ಟೇನ್ ರೀತಿಯೇ ರಿಪ್ಲೇ ಕೊಟ್ಟ ವೀರೂ
ನವದೆಹಲಿ(ಅ.21): ಕ್ರಿಕೆಟಿಗರಿಗೆ ವಿಭಿನ್ನವಾಗಿ ಹುಟ್ಟುಹಬ್ಬದ ಶುಭಾಶಯ ಕೋರುವ ಮೂಲಕ ಗುರುತಿಸಿಕೊಳ್ಳುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ರ ಹುಟ್ಟುಹಬ್ಬಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ (Dale Steyn) ಕೂಡಾ ವಿಭಿನ್ನವಾಗಿಯೇ ಶುಭ ಹಾರೈಸಿದ್ದಾರೆ.
ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virender Sehwag) ಬುಧವಾರ(ಅ.20) ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಸ್ಫೋಟಕ ಆಟದ ಮೂಲಕವೇ ಖ್ಯಾತಿ ಪಡೆದಿರುವ ಸೆಹ್ವಾಗ್ ಅವರ ಹುಟ್ಟುಹಬ್ಬಕ್ಕೆ ಸಚಿನ್ ತೆಂಡುಲ್ಕರ್ (Sachin Tendulkar) ಸೇರಿದಂತೆ ಹಲವು ಮಾಜಿ, ಹಾಲಿ ಆಟಗಾರರು ಶುಭಾಶಯ ಸಲ್ಲಿಸಿದ್ದಾರೆ.
On the field or off the field, entertainment and laughs never stop when you have Viru around.
Happy birthday opening partner! pic.twitter.com/TBfJqj1Nm1
ಕ್ಯಾಪ್ಟನ್ ಕೂಲ್‌ಗೂ ಬಂದಿತ್ತು ಸಿಟ್ಟು: ಭಾರತ-ಪಾಕಿಸ್ತಾನ ನಡುವಿನ ಈ ಫೈಟ್‌ಗಳು ನಿಮಗೆ ನೆನಪಿವೆಯಾ..?
ಇದೇ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ (South Africa Cricket) ಮಾಜಿ ವೇಗಿ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ನಮ್ಮ ಮನೆಯ ಅತ್ಯಂತ ಹರಿತವಾದ ಚಾಕುವಿಗೆ ವೀರೂ ಎಂದು ಹೆಸರಿಟ್ಟಿದ್ದೇನೆ. ವೀರೂ ಅವರಂತೆ ಅದು ಎಲ್ಲವನ್ನೂ ಕಟ್ ಮಾಡುತ್ತದೆ’ ಎಂದು ಬರೆದಿದ್ದಾರೆ.
My sharpest knife back home is nicknamed Viru, cuts anything!
Happy birthday pal!
Have a great one 👊 pic.twitter.com/jyVE93ZLzD
ಡೇಲ್ ಸ್ಟೇನ್ ಶುಭ ಕೋರಿದ್ದಕ್ಕೆ ಪ್ರತಿಕ್ರಿಯಿಸಿರುವ ಮುಲ್ತಾನಿನ ಸುಲ್ತಾನ ಖ್ಯಾತಿಯ ಸೆಹ್ವಾಗ್, ಧನ್ಯವಾದಗಳು ಗ್ರೇಟ್ ಮ್ಯಾನ್. ನನ್ನ ಕ್ಯಾಮರಾಗೆ ಸ್ಟೇನ್‌ಗನ್ ಎಂದು ಹೆಸರಿಟ್ಟಿದ್ದೇನೆ, ಅದು ಎಲ್ಲವನ್ನು ಶೂಟ್ ಮಾಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
Thank you Great man. I have named my camera SteynGun , shoots anything .
— Virender Sehwag (@virendersehwag)1999ರಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನು 2001ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ವಿರೇಂದ್ರ ಸೆಹ್ವಾಗ್ 2013ರವರೆಗೆ ಅಂದರೆ 14 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 92.55ರ ಸ್ಟ್ರೈಕ್‌ರೇಟ್‌ನಲ್ಲಿ 38 ಶತಕ ಹಾಗೂ 72 ಅರ್ಧಶತಕ ಸಹಿತ 17,253 ರನ್ ಬಾರಿಸಿದ್ದಾರೆ. ಸೆಹ್ವಾಗ್ ಟೀಂ ಇಂಡಿಯಾ ಮಾತ್ರವಲ್ಲದೇ ಏಷ್ಯಾ ಇಲೆವನ್ ಹಾಗೂ ವಿಶ್ವ ಇಲೆವನ್ ತಂಡವನ್ನು ಪ್ರತಿನಿಧಿಸಿದ್ದಾರೆ. ಉಪಯುಕ್ತ ಆಫ್ ಸ್ಪಿನ್ನರ್ ಆಗಿಯೂ ಸೈ ಎನಿಸಿಕೊಂಡಿದ್ದ ವೀರೂ ಮೂರು ಮಾದರಿಯ ಕ್ರಿಕೆಟ್ ಸೇರಿ 136 ವಿಕೆಟ್ ಕಬಳಿಸಿದ್ದರು.
ಕೂ ಆ್ಯಪ್ ಸೇರಿದ 15 ದಿನಗಳಲ್ಲೇ 1 ಲಕ್ಷ ಫಾಲೋವರ್ಸ್ ಪಡೆದ ಸೆಹ್ವಾಗ್ !
ಟೀಂ ಇಂಡಿಯಾ ಆಡಿದ ಮೊಟ್ಟ ಮೊದಲ ಟಿ20 ಪಂದ್ಯದಲ್ಲಿ ಸೆಹ್ವಾಗ್ ಭಾರತ ತಂಡದ ನಾಯಕರಾಗಿದ್ದರು. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೆಹ್ವಾಗ್ ನಾಯಕರಾಗಿ ಮುನ್ನಡೆಸಿದ್ದರು. ಸೆಹ್ವಾಗ್ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 2 ತ್ರಿಶತಕ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಇದಷ್ಟೇ ಅಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಕೂಡಾ ವೀರೂ ಹೆಸರಿನಲ್ಲಿದೆ. 2004ರ ಮಾರ್ಚ್ 29ರಂದು ಪಾಕಿಸ್ತಾನ ವಿರುದ್ದ ಮುಲ್ತಾನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 309 ರನ್ ಬಾರಿಸುವ ಮೂಲಕ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಬರೆದಿದ್ದರು. ಇದಾದ 4 ವರ್ಷಗಳ ಬಳಿಕ ಅಂದರೆ 2008ರ ಮಾರ್ಚ್ 29ರಂದು ಕಾಕತಾಳೀಯವೆಂಬಂತೆ ಅದೇ ದಿನಾಂಕದಂದು ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ವೃತ್ತಿಜೀವನದ ಎರಡನೇ ತ್ರಿಶತಕ ಪೂರೈಸಿದ್ದರು.