ಗೋವಾ ವಿಡಿಯೋದಿಂದ ಸಾರಾ ತೆಂಡೂಲ್ಕರ್ ಟ್ರೋಲ್, ತಂದೆ ಮದ್ಯ ವಿರೋಧಿ ನಿಲುವು ನೆನಪಿಸಿದ ನೆಟ್ಟಿಗರು

Published : Jan 01, 2026, 10:33 PM IST
Sara Tendulkar Goa Trip

ಸಾರಾಂಶ

ಗೋವಾ ವಿಡಿಯೋದಿಂದ ಸಾರಾ ತೆಂಡೂಲ್ಕರ್ ಟ್ರೋಲ್, ತಂದೆ ಮದ್ಯ ವಿರೋಧಿ ನಿಲುವು ನೆನಪಿಸಿದ ನೆಟ್ಟಿಗರು, ಗೋವಾ ಪ್ರವಾಸದಲ್ಲಿ ಸಾರಾ ತೆಂಡೂಲ್ಕರ್ ಬಿಯರ್ ಬಾಟಲಿ ಹಿಡಿದು ರಸ್ತೆಯಲ್ಲಿ ತೆರಳುತ್ತಿರುವ ವಿಡಿಯೋಗೆ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. 

ಮುಂಬೈ (ಜ.01) ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಇತ್ತೀಚೆಗೆ ಗೋವಾ ಪ್ರವಾಸ ಕೈಗೊಂಡಿದ್ದರು. ಗೆಳೆಯರ ಜೊತೆ ಸಾರಾ ತೆಂಡೂಲ್ಕರ್ ಗೋವಾದಲ್ಲಿ ಮಸ್ತಿ ಮಾಡಿದ್ದರು. ವಿದೇಶಗಳ ಪ್ರವಾಸಿ ತಾಣಗಳಿಗೆ ಹೆಚ್ಚಾಗಿ ಪ್ರವಾಸ ಮಾಡುತ್ತಿದ್ದ ಸಾರಾ ತೆಂಡೂಲ್ಕರ್ ಇದೀಗ ಗೋವಾ ಪ್ರವಾಸ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಸಾರಾ ತೆಂಡೂಲ್ಕರ್ ವಿಡಿಯೋ. ಪ್ರವಾಸಿಗರ ಕ್ಯಾಮೆರಾದಲ್ಲಿ ಸಾರಾ ತೆಂಡೂಲ್ಕರ್ ಅಚಾನಕ್ಕಾಗಿ ಸೆರೆಯಾಗಿದ್ದಾರೆ. ಗೆಳೆಯರ ಜೊತೆ ಗೋವಾ ರಸ್ತೆಯಲ್ಲಿ ನಡೆಯುತ್ತಾ ಸಾಗುತ್ತಿರುವ ಸಾರಾ ತೆಂಡೂಲ್ಕರ್ ಬಿಯರ್ ಬಾಟಲಿ ಹಿಡಿದಿದ್ದಾರೆ. ಈ ವಿಡಿಯೋದಿಂದ ಸಾರಾ ತೆಂಡೂಲ್ಕರ್ ಟ್ರೋಲ್ ಆಗಿದ್ದಾರೆ.

ಆ್ಯರೋಸಿಮ್ ಬೀಚ್ ಬಳಿ ಸಾರಾ ತೆಂಡೂಲ್ಕರ್ ಮಸ್ತಿ

ಸಾರಾ ತೆಂಡೂಲ್ಕರ್ ಗೋವಾದ ಆ್ಯರೋಸಿಮ್ ಬೀಚ್ ಬಳಿ ಸಾರಾ ತೆಂಡೂಲ್ಕರ್ ಫ್ರೆಂಡ್ಸ್ ಜೊತೆ ಮಸ್ತಿ ಮಾಡಿದ್ದಾರೆ. ಬಿಯರ್ ಬಾಟಲ್ಲಿ ಕೈಯಲ್ಲಿ ಹಿಡಿದುತೆರಳುತ್ತಿರುವ ವಿಡಿಯೋದಿಂದ ಇದೀಗ ಸಾರಾ ತೆಂಡೂಲ್ಕರ್ ನೆಮ್ಮದಿ ಇಲ್ಲದಾಗಿದೆ. ಸಾರಾ ತೆಂಡೂಲ್ಕರ್ ಬಿಯರ್ ಬಾಟಲಿ ಹಿಡಿದು ತೆರಳಿದ್ದಲ್ಲಿ ಟ್ರೋಲ್ ಮಾಡುವಷ್ಟು ತಪ್ಪೇನಿತ್ತು ಅನ್ನೋ ಪ್ರಶ್ನೆಗೆ ನೆಟ್ಟಿಗರು ಹಲವು ವಿಚಾರಗಳನ್ನು ನೆನಪಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ನಿಲುವು ನೆನಪಿಸಿದ ನೆಟ್ಟಿಗರು

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟಿಗರು, ಅಭಿಮಾನಿಗಳ ಪಾಲಿಗೆ ಕ್ರಿಕೆಟ್ ದೇವರು. ಕೇವಲ ಸಚಿನ್ ಎದುರಾಳಿಗಳನ್ನು ಚೆಂಡಾಡಿ, ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಕ್ಕೆ ಮಾತ್ರ ಅಲ್ಲ, ಸೋಲಿನ ಪರಿಸ್ಥಿತಿಯಲ್ಲಿ ತಂಡಕ್ಕೆ ಅಧಾರವಾಗಿ ನಿಂತು ಗೆಲುವು ಕೊಟ್ಟಿದ್ದಕ್ಕೆ ಮಾತ್ರವಲ್ಲ, ವಿಶ್ವದಾಖಲೆಗಳ ಸರದಾರನಾಗಿದ್ದಕ್ಕೆ ಮಾತ್ರವಲ್ಲ, ಇದರ ಜೊತೆ ವ್ಯಕ್ತಿತ್ವಕ್ಕೂ ಸಚಿನ್ ಕ್ರಿಕೆಟ್‌ನ ದೇವರಾಗಿದ್ದಾರೆ. ಸಚಿನ್ ತೆಂಡೂಲ್ಕರ್‌ಗೆ ಇದ್ದ ಜನಪ್ರಿಯತೆಗೆ ಹಲವು ಉತ್ಪನ್ನಗಳು, ಕಂಪನಿಗಳು ಜಾಹೀರಾತು, ಪ್ರಾಯೋಜಕತ್ವಕ್ಕೆ ದುಂಬಾಲು ಬಿದ್ದಿತ್ತು. ಸಚಿನ್ ಹಲವು ಉತ್ಪನ್ನಗಳ ರಾಯಭಾರಿಯಾಗಿದ್ದಾರೆ, ಪ್ರಚಾರ ಮಾಡಿದ್ದಾರೆ. ಆದರೆ ಯಾವತ್ತೂ ಮದ್ಯಪಾನ, ಗುಟ್ಕಾ, ಪಾನ್ ಮಸಾಲ, ಸಿಗರೇಟು ಸೇರಿದಂತೆ ಯಾವುದೇ ನಶೆ ವಸ್ತುಗಳ ಪ್ರಚಾರದಿಂದ ದೂರ ಉಳಿದಿದ್ದರು.

 

 

ಅದೆಷ್ಟೇ ಕೋಟಿ ನೀಡಿದರೂ ಈ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ, ಯುವ ಸಮೂಹವನ್ನು ನಾನು ವ್ಯಸನಿಗಳಾಗಲು ಅವಕಾಶ ನೀಡುವುದಿಲ್ಲ ಎಂಬ ನಿಲುವು ಹೊಂದಿದ್ದರು. ಆದರೆ ಸಾರಾ ತೆಂಡೂಲ್ಕರ್ ಬಿಯರ್ ಬಾಟಲ್ ಮೂಲಕ ಕಾಣಿಸಿಕೊಂಡಾಗ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಏನೇ ಮಾಡಿದರೂ ಸಚಿನ್ ತೆಂಡೂಲ್ಕರ್‌ಗೆ ತನ್ನ ಮಗಳನ್ನು ಮದ್ಯಪಾನದಿಂದ ದೂರವಿಡಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದ್ದಾರೆ. ಸಾರಾ ಸಚಿನ್ ಅಲ್ಲ, ಸಾರಾ ತೆಂಡೂಲ್ಕರ್ ಎಂದು ಹಲವರು ಇಬ್ಬರ ನಡುವಿನ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಹಲವರು ಸಾರಾ ತೆಂಡೂಲ್ಕರ್ ಬೆಂಬಲಕ್ಕೆ ನಿಂತಿದ್ದಾರೆ. ಸಾರಾ ತೆಂಡೂಲ್ಕರ್ ನಿಯಮ ಬಾಹಿರವಾಗಿ ಏನೂ ಮಾಡಿಲ್ಲ ಎಂದಿದ್ದಾರೆ. ಗೋವಾ ಪ್ರವಾಸದಲ್ಲಿ ಬಿಯರ್ ಬಾಟಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ತಪ್ಪೇನು. ಸಚಿನ್ ತೆಂಡೂಲ್ಕರ್ ಶಿಸ್ತು ಪಾಲಿಸಿದ್ದರು, ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದರು. ಸಾರಾ ತೆಂಡೂಲ್ಕರ್‌ ಜವಾಬ್ದಾರಿಯುತ ಸ್ಥಾನದಲ್ಲಿ ಇಲ್ಲ, ಭಾರತ ತಂಡ, ಅಥವಾ ಯಾವುದೇ ಗುಂಪನ್ನು ಪ್ರತಿನಧಿಸುತ್ತಿಲ್ಲ. ಹೀಗಾಗಿ ಅನವಶ್ಯಕವಾಗಿ ಟ್ರೋಲ್ ಮಾಡಲಾಗುತ್ತಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಂಭೀರ ಸ್ಥಿತಿಯಲ್ಲಿ ಕೋಮಾಕ್ಕೆ ಜಾರಿದ ಆಸೀಸ್‌ ದಿಗ್ಗಜ ಕ್ರಿಕೆಟರ್‌ ಡೇಮಿಯನ್‌ ಮಾರ್ಟಿನ್‌, ಅಪ್‌ಡೇಟ್‌ ನೀಡಿದ ಗಿಲ್‌ಕ್ರಿಸ್ಟ್‌!
ಕಿವೀಸ್ ಸರಣಿ: ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಮತ್ತಷ್ಟು ತಡ; ಈ ಆಟಗಾರನಿಗೆ ಚಾನ್ಸ್?