ಸಂಜು ಶತಕ ಸಿಡಿಸುತ್ತಿದ್ದಂತೆಯೇ ತಲೆಕೆಳಗಾದ ಲೆಕ್ಕಾಚಾರ; ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಕೊಹ್ಲಿ, ಗಿಲ್ ಹಿಂದಿಕ್ಕಿದ ಸ್ಯಾಮ್ಸನ್!

Published : Apr 24, 2026, 11:30 AM IST
Sanju Samson

ಸಾರಾಂಶ

ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ ಶತಕ ಸಿಡಿಸಿದ ಚೆನ್ನೈ ತಂಡದ ಸಂಜು ಸ್ಯಾಮ್ಸನ್, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರ ಈ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಮುಂಬೈ: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ ಶತಕ ಸಿಡಿಸಿದ ಚೆನ್ನೈ ತಂಡದ ಸಂಜು ಸ್ಯಾಮ್ಸನ್, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ರಾಕೆಟ್ ವೇಗದಲ್ಲಿ ಮುನ್ನುಗ್ಗಿದ್ದಾರೆ. ಈ ಪಂದ್ಯಕ್ಕೂ ಮುನ್ನ 192 ರನ್‌ಗಳೊಂದಿಗೆ 21ನೇ ಸ್ಥಾನದಲ್ಲಿದ್ದ ಸಂಜು ಸ್ಯಾಮ್ಸನ್, ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಂಚುರಿ ನಂತರ 293 ರನ್‌ಗಳೊಂದಿಗೆ ನೇರವಾಗಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಸಂಜು ಈವರೆಗೆ 7 ಪಂದ್ಯಗಳಲ್ಲಿ ಎರಡು ಶತಕಗಳ ಸಹಿತ 58.60ರ ಸರಾಸರಿ ಮತ್ತು 178.65ರ ಸ್ಟ್ರೈಕ್ ರೇಟ್‌ನಲ್ಲಿ 293 ರನ್ ಗಳಿಸಿದ್ದಾರೆ. ವಿಶೇಷ ಅಂದ್ರೆ, ಎರಡೂ ಶತಕ ಬಾರಿಸಿದಾಗಲೂ ಅವರು ನಾಟೌಟ್ ಆಗಿ ಉಳಿದಿದ್ದರು. ಚೆನ್ನೈ ಪರ ಅವರ ಮೊದಲ ಶತಕ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಬಂದಿತ್ತು.

ಸದ್ಯ ಆರೆಂಜ್‌ ಕ್ಯಾಪ್ ಅಭಿಷೇಕ್ ಶರ್ಮಾ ಬಳಿಯಿದೆ

ಸದ್ಯ, ರನ್ ಬೇಟೆಗಾರರ ಪಟ್ಟಿಯಲ್ಲಿ ಹೈದರಾಬಾದ್‌ನ ಅಭಿಷೇಕ್ ಶರ್ಮಾ 323 ರನ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಹೈದರಾಬಾದ್‌ನವರೇ ಆದ ಹೆನ್ರಿಚ್ ಕ್ಲಾಸೆನ್ 320 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರು ಮಾತ್ರ ಸಂಜುಗಿಂತ ಮುಂದಿದ್ದಾರೆ. ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ 265 ರನ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ವೈಭವ್ ಸೂರ್ಯವಂಶಿ (254), ವಿರಾಟ್ ಕೊಹ್ಲಿ (247), ಯಶಸ್ವಿ ಜೈಸ್ವಾಲ್ (245), ಇಶಾನ್ ಕಿಶನ್ (238), ರಜತ್ ಪಾಟೀದಾರ್ (230) ಮತ್ತು ಕೂಪರ್ ಕೊನೊಲಿ (223) ಟಾಪ್ 10 ಪಟ್ಟಿಯಲ್ಲಿದ್ದಾರೆ.

ಚೆನ್ನೈ ಪರ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಸಂಜು ಒಂದಂಕಿ ಮೊತ್ತಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದರು. ಆದರೆ, ನಾಲ್ಕನೇ ಪಂದ್ಯದಲ್ಲಿ ದೆಹಲಿ ವಿರುದ್ಧ ಅಜೇಯ ಶತಕ ಸಿಡಿಸಿ ಫಾರ್ಮ್‌ಗೆ ಮರಳಿದರು. ಐದನೇ ಪಂದ್ಯದಲ್ಲಿ 48 ರನ್ ಗಳಿಸಿ ತಂಡದ ಟಾಪ್ ಸ್ಕೋರರ್ ಆಗಿ ಗೆಲುವಿನ ರೂವಾರಿ ಎನಿಸಿದ್ದರು. ಹೈದರಾಬಾದ್ ವಿರುದ್ಧದ ಕಳೆದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಅಬ್ಬರಿಸಿದರೂ, ಮೂರನೇ ಎಸೆತದಲ್ಲಿ ಔಟಾಗಿದ್ದರು. ಇದೀಗ ಮುಂಬೈ ವಿರುದ್ಧ ಮತ್ತೊಮ್ಮೆ ತಂಡದ ಟಾಪ್ ಸ್ಕೋರರ್ ಆಗಿ, ಸಂಜು ನಿಜವಾದ 'ತಲಾ' ಎನಿಸಿಕೊಂಡಿದ್ದಾರೆ.

ಸಿಎಸ್‌ಕೆ ಪ್ಲೇ ಆಫ್ ಕನಸು ಜೀವಂತ:

19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಿಕ ಮೂರು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆ ಬಳಿಕ ಸತತ ಎರಡು ಪಂದ್ಯ ಜಯಿಸಿತ್ತು. ಇನ್ನು ಸನ್‌ರೈಸರ್ಸ್ ಎದುರು 10 ರನ್‌ಗಳ ರೋಚಕ ಸೋಲು ಕಂಡ ಸಿಎಸ್‌ಕೆ ಇದೀಗ ಮುಂಬೈ ಎದುರು ಭರ್ಜರಿ 103 ರನ್‌ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇದರ ಜತೆಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈ ಎದುರು ಶತಕ ಚಚ್ಚಿ ಸಿಎಸ್‌ಕೆ ಪರ ಯಾರೂ ಮಾಡಿರದ ಅಪರೂಪದ ದಾಖಲೆ ಬರೆದ ಸಂಜು ಸ್ಯಾಮ್ಸನ್!
IPL 2026: ತವರಿನಲ್ಲಿ ಆರ್‌ಸಿಬಿಗಿಂದು ಕೊನೆ ಲೀಗ್‌ ಪಂದ್ಯ; ಬೆಂಗಳೂರಿಗಿಂದು ಗುಜರಾತ್ ಸವಾಲು