ಲಂಕಾ ಮಾಜಿ ಕ್ರಿಕೆಟಿಗ ಜಯಸೂರ್ಯಗೆ ಐಸಿಸಿ 2 ವರ್ಷ ನಿಷೇಧ!

By Web DeskFirst Published Feb 27, 2019, 1:50 PM IST
Highlights

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಮೇಲೆ ಐಸಿಸಿ 2 ವರ್ಷಗಳ ಕಾಲ ನಿಷೇಧ ಹೇರಿದೆ. ಅವರು ಉತ್ತಮ ನಡವಳಿಕೆ ತೋರಿದ್ದರಿಂದ ಅವರ ನಿಷೇಧ ಅವಧಿಯನ್ನು 5 ವರ್ಷಗಳಿಂದ 2 ವರ್ಷಕ್ಕೆ ಇಳಿಸಲಾಯಿತು ಎಂದು ಐಸಿಸಿ ತಿಳಿಸಿದೆ.

ದುಬೈ[ಫೆ.27]: ಭ್ರಷ್ಟಾಚಾರ ತಡೆ ಪ್ರಕರಣದ ತನಿಖೆಗೆ ಅಡ್ಡಿಪಡಿಸಿ, ಮೊಬೈಲ್‌ಗಳಲ್ಲಿದ್ದ ಸಾಕ್ಷ್ಯಗಳನ್ನು ನಾಶಪಡಿಸಿದ್ದಾಗಿ ತಪ್ಪೊಪ್ಪಿಕೊಂಡ ಶ್ರೀಲಂಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಸನತ್‌ ಜಯಸೂರ್ಯರನ್ನು ಐಸಿಸಿ ಮಂಗಳವಾರ 2 ವರ್ಷ ನಿಷೇಧಗೊಳಿಸಿದೆ. 

5 ವರ್ಷ ನಿಷೇಧದ ಭೀತಿಯಲ್ಲಿ ಲಂಕಾ ಕ್ರಿಕೆಟಿಗ ಸನತ್ ಜಯಸೂರ್ಯ!

ಅ.16, 2018ರಿಂದ ನಿಷೇಧ ಅವಧಿ ಆರಂಭಗೊಳ್ಳಲಿದ್ದು, 2020ರ ಅಕ್ಟೋಬರ್‌ ವರೆಗೂ ಅವರು ಯಾವುದೇ ಕ್ರಿಕೆಟ್‌ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಈ ಹಿಂದೆ ಅವರು ಉತ್ತಮ ನಡವಳಿಕೆ ತೋರಿದ್ದರಿಂದ ಅವರ ನಿಷೇಧ ಅವಧಿಯನ್ನು 5 ವರ್ಷಗಳಿಂದ 2 ವರ್ಷಕ್ಕೆ ಇಳಿಸಲಾಯಿತು ಎಂದು ಐಸಿಸಿ ತಿಳಿಸಿದೆ. ಲಂಕಾ ಕ್ರಿಕೆಟ್‌ನಲ್ಲಿ ನಡೆದಿದ್ದ ಭ್ರಷ್ಟಾಚಾರದ ತನಿಖೆಗೆ ಜಯಸೂರ್ಯ ಅಡ್ಡಿಪಡಿಸಿದ್ದರು.

ಏಕದಿನದಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಐವರು ಕ್ರಿಕೆಟಿಗರು!

ಶ್ರೀಲಂಕಾ ತಂಡವು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಅದ್ಭುತ ಎಡಗೈ ಆರಂಭಿಕ ಬ್ಯಾಟ್ಸ್’ಮನ್’ಗಳಲ್ಲಿ ಸನತ್ ಜಯಸೂರ್ಯ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. 445 ಏಕದಿನ ಹಾಗೂ 110 ಟೆಸ್ಟ್ ಪಂದ್ಯಗಳನ್ನಾಡಿರುವ ಜಯಸೂರ್ಯ ಕ್ರಮವಾಗಿ 13,430 ಹಾಗೂ 6973 ರನ್ ಸಿಡಿಸಿದ್ದಾರೆ. ಇನ್ನು ಬೌಲಿಂಗ್’ನಲ್ಲೂ ಕಮಾಲ್ ಮಾಡಿರುವ ಸನತ್ ಕ್ರಮವಾಗಿ 323 ಹಾಗೂ 98 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಅದರಲ್ಲೂ 1996ರ ಏಕದಿನ ವಿಶ್ವಕಪ್’ನಲ್ಲಿ ಅದ್ಭುತ ಪ್ರದರ್ಶನ ತೋರುವುದರೊಂದಿಗೆ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದ ಜಯಸೂರ್ಯ, ಲಂಕಾ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

click me!