T20 World Cup: ಪಾಕ್ ಎದುರು ಬೌಲರ್‌ಗಳ ಮಾರಕ ದಾಳಿ, ಇಂಗ್ಲೆಂಡ್‌ಗೆ ವಿಶ್ವಕಪ್ ಗೆಲ್ಲಲು 138 ರನ್ ಗುರಿ

By Naveen KodaseFirst Published Nov 13, 2022, 3:22 PM IST
Highlights

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ-ಇಂಗ್ಲೆಂಡ್ ಕಾದಾಟ
ಟಿ20 ವಿಶ್ವಕಪ್ ಗೆಲ್ಲಲು ಇಂಗ್ಲೆಂಡ್‌ಗೆ 138 ರನ್‌ ಗುರಿ
ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಇಂಗ್ಲೆಂಡ್

ಮೆಲ್ಬರ್ನ್‌(ನ.13): ಬೌಲರ್‌ಗಳ ಶಿಸ್ತುಬದ್ದ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್‌ ಕಲೆಹಾಕಿದೆ. ಈ ಮೂಲಕ ಟಿ20 ವಿಶ್ವಕಪ್ ಗೆಲ್ಲಲು ಇಂಗ್ಲೆಂಡ್‌ಗೆ ಸಾಧಾರಣ ಗುರಿ ನೀಡಿದೆ. 38 ರನ್ ಬಾರಿಸಿದ ಶಾನ್ ಮಸೂದ್, ಪಾಕಿಸ್ತಾನ ಪರ ದಾಖಲಿಸಿದ ಗರಿಷ್ಠ ಸ್ಕೋರ್ ಎನಿಸಿಕೊಂಡಿತು.

ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡವು ಎಚ್ಚರಿಕೆಯ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಅಜಂ 4.2 ಓವರ್‌ಗಳಲ್ಲಿ 29 ರನ್‌ಗಳ ಜತೆಯಾಟವಾಡಿತು. ವಿಕೆಟ್ ಕೀಪರ್ ಬ್ಯಾಟರ್ ರಿಜ್ವಾನ್ 15 ರನ್ ಬಾರಿಸಿ ಸ್ಯಾಮ್ ಕರ್ರನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮೊಹಮ್ಮದ್ ಹ್ಯಾರಿಸ್ ಕೇವಲ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇಫ್ತಿಕಾರ್ ಅಹಮದ್ 6 ಎಸೆತಗಳನ್ನು ಎದುರಿಸಿ ಖಾತೆ ತೆರೆಯುವ ಮುನ್ನವೇ ವಿಕೆಟ್  ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಒಂದು ಕಡೆ ವಿಕೆಟ್ ಉರುತ್ತಿದ್ದರೂ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಬಾಬರ್ ಅಜಂ, 28 ಎಸೆತಗಳಲ್ಲಿ 2 ಬೌಂಡರಿ ಸಹಿತ 32 ರನ್ ಬಾರಿಸಿ ಆದಿಲ್ ರಶೀದ್‌ಗೆ ಎರಡನೇ ಬಲಿಯಾದರು. ಇನ್ನು ಇದರ ಬೆನ್ನಲ್ಲೇ ಇಫ್ತಿಕರ್ ಅಹಮದ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರು.

Brilliant spells by Sam Curran and Adil Rashid help England restrict Pakistan to 137/8 in their 20 overs.

Can Babar Azam's team defend this modest total? 👀 | | 📝 https://t.co/jOrORwQxFB pic.twitter.com/k9SXuMS5x4

— T20 World Cup (@T20WorldCup)

T20 World Cup Final: ಪಾಕ್ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ

ಇನ್ನು ಒಂದು ಹಂತದಲ್ಲಿ 85 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಪಾಕಿಸ್ತಾನ ತಂಡಕ್ಕೆ 5ನೇ ವಿಕೆಟ್‌ಗೆ ಶಾಕ್ ಮಸೂದ್ ಹಾಗೂ ಶಾದಾಬ್ ಖಾನ್ 36 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಶಾನ್ ಮಸೂದ್ 28 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 38 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ಶಾಬಾದ್ ಖಾನ್ ಅವರೂ ಕೂಡಾ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇಂಗ್ಲೆಂಡ್ ತಂಡದ ಪರ ಸ್ಯಾಮ್ ಕರ್ರನ್ 4 ಓವರ್ ಬೌಲಿಂಗ್ ಮಾಡಿ ಕೇವಲ 12 ರನ್ ನೀಡಿ 3 ವಿಕೆಟ್‌ ಪಡೆದರೆ, ಆದಿಲ್ ರಶೀದ್ ಹಾಗೂ ಕ್ರಿಸ್ ಜೋರ್ಡನ್ ತಲಾ 2 ವಿಕೆಟ್‌ ಮತ್ತು ಬೆನ್ ಸ್ಟೋಕ್ಸ್‌ ಒಂದು ವಿಕೆಟ್ ಉರುಳಿಸಿದರು.

click me!