
ಲಂಡನ್ (ಜು.13) ಕ್ರಿಕೆಟ್ ಕಾಶಿ ಎಂದೇ ಗುರುತಿಸಿಕೊಂಡಿರುವ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯ ಗೆಲ್ಲುವುದು ಅತ್ಯಂತ ಮಹತ್ವದ ಮೈಲಿಗಲ್ಲು. ಇದೀಗ ಭಾರತ ಮಹಿಳಾ ತಂಡ ಈ ಐತಿಹಾಸಿಕ ಗೆಲುವು ಸಾಧಿಸಿದೆ. ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ನಾಲ್ಕನೇ ದಿನ ಬರೋಬ್ಬರಿ 270 ರನ್ ಅಂತರದಿಂದ ಟೆಸ್ಟ್ ಗೆದ್ದುಕೊಂಡಿದೆ. ವಿಶೇಷ ಅಂದರ ಏಕೈಕ ಟೆಸ್ಟ್ ಪಂದ್ಯದ ಸರಣಿ ಭಾರತದ ಕೈವಶವಾಗಿದೆ. ನಾಲ್ಕನೇ ದಿನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಲಾರ್ಡ್ಸ್ ಮೈದಾನದಲ್ಲಿ ಹಾಜರಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ಭಾರತ ಮಹಿಳಾ ತಂಡಕ್ಕೆ ಪೆಪ್ ಟಾಕ್ ನೀಡಿದ್ದರು.
ಭಾರತ ಮಹಿಳಾ ತಂಡದ ಐತಿಹಾಸಿಕ ಗೆಲುವಿನಲ್ಲಿ ಸಚಿನ್ ತೆಂಡೂಲ್ಕರ್ ಪಾತ್ರವೂ ಮುಖ್ಯವಾಗಿದೆ. ನಾಲ್ಕನೇ ದಿನ ಸಚಿನ್ ತೆಂಡೂಲ್ಕರ್ ಲಾರ್ಡ್ಸ್ ಮೈದಾನಕ್ಕಿಳಿದಿದ್ದರು. ಭಾರತ ಮಹಿಳಾ ತಂಡದ ಸದಸ್ಯರು, ಕೋಚಿಂಗ್ ಸ್ಟಾಫ್‌ಗೆ ಪೆಪ್ ಟಾಕ್ ನೀಡಿದ್ದರು. ಪಂದ್ಯದ ವೇಳೆ ನಾಯಕರು ಪೆಪ್ ಟಾಕ್ ನೀಡುತ್ತಾರೆ. ಈ ವೇಳೆ ಪಂದ್ಯದ ಕುರಿತು, ರಣತಂತ್ರ ಕುರಿತು, ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ. ಈ ಬಾರಿ ಸಚಿನ್ ತೆಂಡೂಲ್ಕರ್ ಭಾರತ ಮಹಿಳಾ ತಂಡಕ್ಕೆ ಪೆಪ್ ಟಾಕ್ ನೀಡಿದ್ದರು.
ಸಚಿನ್ ಮಾತುಗಳನ್ನು ಕೇಳಿಸಿಕೊಂಡ ಭಾರತ ಮಹಿಳಾ ತಂಡ ಹುರುಪಿನಿಂದ ಕಣಕ್ಕಿಳಿದಿತ್ತು. ಪೆಪ್ ಟಾಕ್‌ನಲ್ಲಿ ಸಚಿನ್ ತೆಂಡೂಲ್ಕರ್ ಕೆಲ ಟಿಪ್ಸ್ ನೀಡಿದ್ದರು. ಸವಾಲುಗಳನ್ನು ಎದುರಿಸುವುದು, ಹೋರಾಟ ಸೇರಿದಂತೆ ಹಲವು ಉಪಯುಕ್ತ ಸಲಹೆ ನೀಡಿದ್ದರು. ಸಚಿನ್ ನೀಡಿದ ಟಿಪ್ಸ್ ರೀತಿಯಲ್ಲೇ ಭಾರತೀಯ ಮಹಿಳಾ ತಂಡ ಲಾರ್ಡ್ಸ್ ಅಂಗಳದಲ್ಲಿ ಘರ್ಜಿಸಿದೆ. ಇದರ ಪರಿಣಾಮ ನಾಲ್ಕನೇ ದಿನ ಭಾರಿ ಅಂತರದ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವನ್ನು ಮಣಿಸಿದೆ.
ಸಚಿನ್ ತೆಂಡೂಲ್ಕರ್ ಲಾರ್ಡ್ಸ್ ಮೈದಾನಕ್ಕೆ ಆಗಮನ, ಮಹಿಳಾ ತಂಡದ ಭೇಟಿ ಯಾವುದೇ ಪೂರ್ವ ನಿರ್ಧಾರವಾಗಿರಲಿಲ್ಲ. ವಿಂಬಲ್ಡನ್‌ಗಾಗಿ ಲಂಡನ್‌ನಲ್ಲಿದ್ದ ಸಚಿನ್ ತೆಂಡೂಲ್ಕರ್ ಲಾರ್ಡ್ಸ್ ಮೈದಾನಕ್ಕೆ ಆಗಮಿಸಿದ್ದರು. ಬಳಿಕ ಭಾರತ ಮಹಿಳಾ ತಂಡದ ಜೊತೆ ಕೆಲ ಹೊತ್ತು ಕಳೆದಿದ್ದಾರೆ. ಪ್ರತಿಯೊಬ್ಬ ತಂಡದ ಸದಸ್ಯರಿಗೆ ಜವಾಬ್ದಾರಿ ಹಾಗೂ ಒತ್ತಡ ನಿಭಾಯಿಸುವ ಟಿಪ್ಸ್ ನೀಡಿದ್ದರು.
ಇದೇ ಮೊದಲ ಭಾರಿ ಭಾರತ ಮಹಿಳಾ ತಂಡ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ಇತಿಹಾಸ ರಚಿಸಿದೆ.
ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಗೆದ್ದ ಸಾಧನೆ (ಟೀಂ ಇಂಡಿಯಾ ಹಾಗೂ ಭಾರತ ಮಹಿಳಾ ತಂಡ)
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ. ಲಾರ್ಡ್ಸ್ ಟೆಸ್ಟ್ ಗೆಲುವು ಸೇರಿದಂತೆ ಇಂಗ್ಲೆಂಡ್ ವಿರುದ್ಧ 16 ಟೆಸ್ಟ್ ಪಂದ್ಯ ಆಡಿದೆ. ಈ ಪೈಕಿ ನಾಲ್ಕು ಪಂದ್ಯಗಳನ್ನು ಭಾರತ ಮಹಿಳಾ ತಂಡ ಗೆದ್ದುಕೊಂಜರೆ ಒಂದು ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ. ಇನ್ನುಳಿದ 11 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.